ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಸೀಟು ಹಂಚಿಕೆಯಲ್ಲಿ, 1,100 ಕೋಟಿಗೂ ಅಧಿಕ ಹಗರಣ ಆಗಿದೆ ಎಂದು ಹೇಳಲಾಗ್ತಿದೆ. ಈ ಕುರಿತು ದಾಖಲೆ ಸಮೇತ ಹೈಕೋರ್ಟ್ ವಕೀಲ ನಟರಾಜ್ ಶರ್ಮ, ಎಸಿಬಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸೀಟು ಹಂಚಿಕೆಯಲ್ಲಿ, ಕೋಟ್ಯಂತರ ರೂ. ಲೂಟಿ ಹೊಡೆದಿವೆ. ಇದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ್ದಾರೆ.
ಎಂಬಿಬಿಎಸ್(MBBS) ಮಾತ್ರವಲ್ಲದೇ ಎಂಡಿ(MD) ಹಾಗೂ ಎಂಎಸ್(MS)ನಲ್ಲಿಯೂ ಅಕ್ರಮ ನಡೆದಿದ್ದು, ವಿದ್ಯಾರ್ಥಿಗಳು ಎಷ್ಟೇ ರ್‍ಯಾಂಕ್ ತೆಗೆದರೂ ಪ್ರಯೋಜನವಿಲ್ಲ. ಹಾಗೂ ಬಡ ಮಕ್ಕಳ ಪಾಡು ಕೇಳುವವರಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಮೀಲಾಗಿ, ಕೋಟಿ ಕೋಟಿ ಅವ್ಯವಹಾರ ಮಾಡಿವೆ ಎಂದು ದೂರಿದ್ದಾರೆ.

ಇದರಲ್ಲಿ ಮಾನ್ಯ ಡೈರೆಕ್ಟರ್ ಆಫ್ ಮೆಡಿಕಲ್ ಎಜುಕೇಷನ್, ಆರ್ಗಿಯುಹೆಚ್ಎಸ್ (RGUHS) ಸಿಬ್ಬಂದಿ, ವೈದ್ಯಕೀಯ ಶಿಕ್ಷಣಾಧಿಕಾರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಕೈವಾಡದ ಶಂಕೆಯಿದೆ ಎಂದು ಎಸಿಬಿಗೆ ನೀಡಿದ ದೂರಿನಲ್ಲಿ ವಕೀಲ ನಟರಾಜ್ ಶರ್ಮ ತಿಳಿಸಿದ್ದಾರೆ.