ETV Bharat / state

ಈಜುಕೊಳ ವಿವಾದಕ್ಕೆ ಹೊಸ ’ರೂಪ’: ರೋಹಿಣಿ‌ ಸಿಂಧೂರಿ ನಡೆಗೆ ಐಪಿಎಸ್ ಮಹಿಳಾ ಅಧಿಕಾರಿ ಆಕ್ಷೇಪ - ಮೈಸೂರು ಡಿಸಿ ವಿವಾದ

ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿವಾಸವಾಗಿದ್ದ ಜಲಸನ್ನಿಧಿಯಲ್ಲಿ ಈಜುಕೊಳ ನಿರ್ಮಾಣವಾಗಿತ್ತು.‌ ಈ ಬಗ್ಗೆ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವೀಟ್​ ಮಾಡಿದ್ದಾರೆ.

Mysore swimming pool
ರೋಹಿಣಿ‌-ರೂಪಾ
author img

By

Published : Jun 23, 2021, 9:12 PM IST

ಬೆಂಗಳೂರು: ಈಜುಕೊಳ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ‌ ಮೈಸೂರಿನ ಪ್ರಾದೇಶಿಕ ಆಯುಕ್ತರು ತನಿಖಾ ವರದಿ ಸಲ್ಲಿಸಿದ್ದ ಬೆನ್ನಲೇ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌.

ಮೈಸೂರಿನ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿವಾಸವಾಗಿದ್ದ ಜಲಸನ್ನಿಧಿಯಲ್ಲಿ ಈಜುಕೊಳ ನಿರ್ಮಾಣವಾಗಿತ್ತು.‌ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು‌. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ತನಿಖೆಯಲ್ಲಿ ಪಾರಂಪರಿಕ ಸಂರಕ್ಷಣಾ ಸಮಿತಿ ಹಾಗೂತಾಂತ್ರಿಕ ವರ್ಗ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ ಎಂದು ತನಿಖಾ ವರದಿ ನೀಡಿತ್ತು.

  • ಕೋರೋನ ಹಾಗು ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ.ಕಟ್ಟುವುದ ಮುಂದೂಡಲೂಬಹುದಿತ್ತು

    — D Roopa IPS (@D_Roopa_IPS) June 23, 2021 " class="align-text-top noRightClick twitterSection" data=" ">

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರೂಪ ಟ್ವೀಟ್ ಮಾಡಿದ್ದು, "ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಎಂದರೆ ಸಾರ್ವಜನಿಕ ಹಣದಲ್ಲಿ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ತೋರಿಸುತ್ತದೆ. ಕಟ್ಟಲು ಪರವಾನಗಿ ಪಡೆದಿಲ್ಲ ಎಂಬುವುದು ನಂತರದ ವಿಚಾರ. ಕಟ್ಟುವುದನ್ನು ಮುಂದೂಡಬಹುದಿತ್ತು" ಎಂದು ಹೇಳಿದ್ದಾರೆ

ಟ್ವಿಟರ್​ನಲ್ಲಿ ಬರೆದುಕೊಂಡಿರುವ ರೂಪಾ ಅವರ ಅಭಿಪ್ರಾಯಕ್ಕೆ ಟ್ವೀಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಂಗನಗೌಡ ಪೊಲೀಸ್ ಪಾಟೀಲ್ ಎಂಬುವರು ಟ್ವೀಟ್ ಮಾಡಿ 'ಈಜುಕೊಳವು ನಿರ್ಮಿತಿ ಕೇಂದ್ರದ ಯೋಜನೆ ಎಂದು ಮೈಸೂರಿನ ಮಾಜಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನೀವು ಇನ್ನೊಬ್ಬ ಅಧಿಕಾರಿಯ ಬಗ್ಗೆ ಬರೆಯುವ ಮೊದಲು ರಾಜಕಾರಣಿಗಳ ಹೊಲಸು ಕೆಲಸಗಳನ್ನು ಬಯಲಿಗೆ ತನ್ನಿ. ನಿಮ್ಮಿಂದ ಈ ತರಹದ ಹೇಳಿಕೆಗಳನ್ನು ಜನತೆ ನಿರೀಕ್ಷಿಸಿರಲಿಲ್ಲ' ಎಂದು ಕಿಡಿಕಾರಿದ್ದಾರೆ‌.

ಬೋಗೇಶ್ ಸೊಲ್ಲಾಪುರ ಎಂಬುವರು 'ನೀವು ಏಕೆ ಅವರ ಬಗ್ಗೆ ಮಾತಾಡುತ್ತೀರಿ ಮೇಡಂ? ನೀವು ಸರ್ಕಾರಿ ಅಧಿಕಾರಿ ಆಗಿ ಹೀಗೆ ಬೇರೆ ಅಧಿಕಾರಿ ಬಗ್ಗೆ ರಾಜಕೀಯ ಪ್ರೇರಿತವಾಗಿರುವ ಮಾತುಗಳನ್ನು ಮಾತಾಡೋದು ಸರಿಯಲ್ಲ ಹಾಗೂ ಅದು ನಿಮಗೆ ಶೋಭೆಯೂ ಅಲ್ಲ ಮೇಡಂ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಸ್ತಾಫ ಎಂಬುವರು ಟ್ವೀಟ್ ಮಾಡಿ'D_Roopa_IPS ಅವರೇ ಲೂಟಿಕೋರ ರಾಜಕಾರಣಿಗಳು ತಮ್ಮ ಲೂಟಿಗಳನ್ನು ಬಯಲಿಗೆಳೆಯುವ ಭಯದಿಂದ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿರುವುದು. ನಿಮ್ಮ ಬರಹಗಳು ಅನ್ಯಾಯದ ವಿರುದ್ಧವಾದರೆ ಸರ್ಕಾರಿ ಆಸ್ತಿ ಕೆರೆಗಳನ್ನು ಒತ್ತುವರಿ ಮಾಡಿದವರ ವಿರುದ್ಧವಾಗಿರಲಿ' ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.