ETV Bharat / state

ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕಾರ್ಮಿಕ ಸಂಘದ ಅಧ್ಯಕ್ಷ - ಕಾರ್ಯಾಧ್ಯಕ್ಷರ ನಡುವೆ ಜಟಾಪಟಿ - ಐಎನ್​ಟಿಯುಸಿ ಸಂಘದ ಅಧ್ಯಕ್ಷ - ಕಾರ್ಯಾಧ್ಯಕ್ಷರ ನಡುವೆ ಜಗಳ

ಘಟನೆಯ ಸಂಬಂಧ ವಿವರ ನೀಡಿರುವ ಎಸ್ ಎಸ್ ಪ್ರಕಾಶಂ, ನಾನು ಐಎನ್​ಟಿಯುಸಿ ಅಧ್ಯಕ್ಷನಿದ್ದೇನೆ. 8 ಲಕ್ಷ ಕಾರ್ಮಿಕರ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಲೇಬರ್ ಸೆಲ್‌ನಿಂದ ಫುಡ್ ಕಿಟ್ ಕೂಡ ಹಂಚಿದ್ದೇನೆ. ರಾಕೇಶ್ ಮಲ್ಲಿ ನನ್ನ ‌ಮೇಲೆ ಜಗಳ ಮಾಡಿಲ್ಲ. ಅವರ ಜೊತೆ ಬಂದವರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ರೌಡಿಗಳು, ಗೂಂಡಾಗಳು ಪಾರ್ಟಿಯಲ್ಲಿರಬಾರದು..

quarrel
ಐಎನ್​ಟಿಯುಸಿ
author img

By

Published : Sep 12, 2020, 9:11 PM IST

ಬೆಂಗಳೂರು : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾರ್ಮಿಕ ಸಂಘ(ಐಎನ್​ಟಿಯುಸಿ)ದ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ನಡುವೆ ಜಟಾಪಟಿ ನಡೆದಿದೆ. ವಾಕ್ಸಮರ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.

ಐಎನ್​ಟಿಯುಸಿ ಅಧ್ಯಕ್ಷ ಎಸ್ ಎಸ್ ಪ್ರಕಾಶಂ ಹಾಗೂ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ನಡುವೆ ಇಂದು ಮಾತಿನ ಚಕಮಕಿ ನಡೆದಿದ್ದು ಪರಸ್ಪರ ಕೈ-ಕೈ ಮಿಲಾಯಿಸಿದ ಘಟನೆ ನಡೆದಿದೆ. ಕೂಡಲೇ ಐಎನ್​ಟಿಯುಸಿ ಕಾರ್ಮಿಕ ವಿಭಾಗದ ಸದಸ್ಯರು ಪರಿಸ್ಥಿತಿ ತಿಳಿಗೊಳಿಸಿ ಇಬ್ಬರನ್ನೂ ಸಮಾಧಾನಗೊಳಿಸುವ ಕಾರ್ಯ ಮಾಡಿದ್ದಾರೆ.

ಐಎನ್​ಟಿಯುಸಿ ಅಧ್ಯಕ್ಷ-ಕಾರ್ಯಾಧ್ಯಕ್ಷರ ನಡುವೆ ಜಟಾಪಟಿ

ಇಂದು ಮಧ್ಯಾಹ್ನ ನಗರದಲ್ಲಿ ಐಎನ್​ಟಿಯುಸಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಅಧ್ಯಕ್ಷ ಎಸ್ ಎಸ್ ಪ್ರಕಾಶಂ ಸಭೆ ಕರೆದಿದ್ದರು. ಆ ಸಂದರ್ಭ ಹಣಕಾಸಿನ ಆಡಿಟ್ ನಡೆಯುತ್ತಿತ್ತು. ಈ ಸಂದರ್ಭ ಪರಸ್ಪರ ಮಾತಿಗೆ ಮಾತು ಬೆಳೆದು ಉಭಯ ನಾಯಕರು ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರು ಕೈ ಮಾಡಿಕೊಂಡಿದ್ದಾರೆ.

ಘಟನೆಯ ಸಂಬಂಧ ವಿವರ ನೀಡಿರುವ ಎಸ್ ಎಸ್ ಪ್ರಕಾಶಂ, ನಾನು ಐಎನ್​ಟಿಯುಸಿ ಅಧ್ಯಕ್ಷನಿದ್ದೇನೆ. 8 ಲಕ್ಷ ಕಾರ್ಮಿಕರ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ಲೇಬರ್ ಸೆಲ್‌ನಿಂದ ಫುಡ್ ಕಿಟ್ ಕೂಡ ಹಂಚಿದ್ದೇನೆ. ರಾಕೇಶ್ ಮಲ್ಲಿ ನನ್ನ ‌ಮೇಲೆ ಜಗಳ ಮಾಡಿಲ್ಲ. ಅವರ ಜೊತೆ ಬಂದವರು ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ರೌಡಿಗಳು, ಗೂಂಡಾಗಳು ಪಾರ್ಟಿಯಲ್ಲಿರಬಾರದು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೈ ಬಲಪಡಿಸೋಕೆ ನಾವು ಕೆಲಸ ಮಾಡ್ತಿದ್ದೇವೆ. ಇವತ್ತು ನಮ್ಮ‌ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ನಾನು ಕಾಂಗ್ರೆಸ್ ಕಚೇರಿಗೆ ದೂರು ನೀಡಿದ್ದೇನೆ. ನಾನು 40 ವರ್ಷಗಳಿಂದ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಡಿಕೆಶಿ ಕೈ ಬಲಪಡಿಸೋಕೆ ಹೊರಟಿರುವವನು. ನಾನು ಒಬ್ಬ ಲೀಡರ್ ಆಗಿರೋದ್ರಿಂದ ಏನು ಹೇಳೋಕೆ ಆಗಲ್ಲ. ಆದರೆ, ಇವತ್ತಿನ ಘಟನೆ ನನಗೆ ಬೇಸರ ಆಗಿದೆ. ಲೇಬರ್ ಸೆಲ್‌ನಲ್ಲಿ 25 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಲೇಬರ್ ಸೆಲ್ ನಾನೇ ಕಟ್ಟಿ ಬೆಳೆಸಿದ್ದೇನೆ.

ನಮ್ಮ‌ ಅಧ್ಯಕ್ಷರೇ ಇದರ ಬಗ್ಗೆ ಗಮನ ಹರಿಸ್ತಾರೆ. ವೀರೇಂದ್ರ ಪಾಟೀಲ್, ಸಿದ್ದರಾಮಯ್ಯ ಜೊತೆ ಕೆಲಸ ಮಾಡಿದವನು ನಾನು. ನನಗೆ ಇವತ್ತು ಕಾಂಗ್ರೆಸ್ ಆಫೀಸ್‌ನಲ್ಲೇ ಹೊಡೆದಿದ್ದಾರೆ. ನಮ್ಮ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನು ಸಂಘಟನೆ ಮಾಡೋಕೆ‌ ಹುಟ್ಟಿದ್ದೇನೆ. ಸಂಘಟನೆ ಮಾಡೋಕೆ ನನಗೆ ಬಿಡ್ತಿಲ್ಲ. ನಾನು ನಮ್ಮ‌ ಲೀಡರ್ಸ್ ಜೊತೆ ಮಾತನಾಡ್ತೇನೆ. ಸೋನಿಯಾ ಗಾಂಧಿಯವರ ಜೊತೆ ಮಾತನಾಡ್ತೇನೆ. ನನಗೆ ಇವತ್ತಿನ ಘಟನೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

ಲೇಬರ್ ಸೆಲ್ ಪ್ರಧಾನ ಕಾರ್ಯದರ್ಶಿ ಉಮೇಶ್ ಘಟನೆಯ ಮಾಹಿತಿ ನೀಡಿದ್ದು, ನಾವು ಮಧ್ಯಾಹ್ನ ಸಭೆ ನಡೆಸುತ್ತಿದ್ದೆವು. ನಮ್ಮ‌ ಲೇಬರ್ ಸೆಲ್ ಅಧ್ಯಕ್ಷರು ಸಭೆ ನಡೆಸುತ್ತಿದ್ದರು. ಈ ವೇಳೆ ಘಟಕದ ಹಣಕಾಸಿನ ಆಡಿಟ್ ನಡೆದಿತ್ತು. ಏಕಾಏಕಿ ರಾಕೇಶ್ ಮಲ್ಲಿಯವರು ಅಟ್ಯಾಕ್ ಮಾಡಿದ್ರು. ಪ್ರಕಾಶಂ ಅವರ ಕಪಾಳಕ್ಕೆ ಹೊಡೆದ್ರು. ನಂತರ ಪ್ರಕಾಶಂ ಹಿಂದಿದ್ದ ವ್ಯಕ್ತಿ ಕುತ್ತಿಗೆಗೆ ಕೈಹಾಕಿದ್ರು. ಅವರ ಮೇಲೆ ಅಟ್ಯಾಕ್ ಮಾಡಿದ್ರು. ನಾವೇ ಮಧ್ಯೆ ಹೋಗಿ ಅವರ ಗಲಾಟೆ ಬಿಡಿಸಿದ್ವಿ. ಪ್ರಕಾಶಂ ಏನೂ ಮಾತನಾಡಿರಲಿಲ್ಲ ಎಂದು ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.