ETV Bharat / state

₹25 ಕೋಟಿ ಮೌಲ್ಯದ ಮಾದಕ ದ್ರವ್ಯ​ ನಾಶಪಡಿಸಲಿರುವ ಬೆಂಗಳೂರು ಪೊಲೀಸರು

ಕಳೆದೊಂದು ವರ್ಷದಲ್ಲಿ 25.6 ಕೋಟಿ ರೂಪಾಯಿ ಬೆಲೆ ಬಾಳುವ ಸುಮಾರು 21 ಟನ್‌ ವಿವಿಧ ಮಾದಕ ಪದಾರ್ಥಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು.

ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ
ಅಂತಾರಾಷ್ಟ್ರೀಯ ಮಾದಕ ವಿರೋಧಿ ದಿನಾಚರಣೆ
author img

By

Published : Jun 26, 2022, 11:50 AM IST

Updated : Jun 26, 2022, 12:41 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ಬೆಂಗಳೂರು ಪೊಲೀಸರು ಇಂದು ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಂಡ ವಿವಿಧ ಮಾದಕ ಪದಾರ್ಥಗಳನ್ನು ನಾಶಪಡಿಸಲಿದ್ದಾರೆ.

25.6 ಕೋಟಿ ರೂಪಾಯಿ ಮೌಲ್ಯದ ಸುಮಾರು 21 ಟನ್‌ ವಿವಿಧ ಮಾದಕ ಪದಾರ್ಥಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದು ಆಯುಕ್ತರ ಕಚೇರಿಯಲ್ಲಿಂದು ಪ್ರದರ್ಶನಕ್ಕಿಡಲಾಗಿದೆ. ಇವುಗಳನ್ನು ನಾಶಪಡಿಸಲು ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ಅನುಮತಿ‌ ಪಡೆಯಲಾಗಿದೆ.

₹25 ಕೋಟಿ ಮೌಲ್ಯದ ಮಾದಕ ದ್ರವ್ಯ​ ನಾಶಪಡಿಸಲಿರುವ ಬೆಂಗಳೂರು ಪೊಲೀಸರು

ಗಾಂಜಾ, ಅಫೀಮು, ಹೆರಾಯಿನ್, ಕೊಕೈನ್ ಮತ್ತು ಸಿಂಥೆಟಿಕ್​ಗಳಾದ ಎಂಡಿಎಂಎ, ಎಲ್‌ಎಸ್‌ಡಿ ಮುಂತಾದ ಮಾದಕ ದ್ರವ್ಯಗಳು ಪೊಲೀಸರ ದಾಸ್ತಾನಿನಲ್ಲಿವೆ. ಬೆಂಗಳೂರು ನಗರ ಒಂದರಲ್ಲೇ ಶೇ 50ಕ್ಕಿಂತ ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿರುವುದು ಗಮನಾರ್ಹ.

ಕಳೆದ 12 ತಿಂಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 8,505 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 5,363 ಪ್ರಕರಣಗಳನ್ನು ಬೇಧಿಸಲಾಗಿದ್ದು ಸ್ಥಳಿಯ ಆರೋಪಿಗಳಸಹಿತ ನೈಜೀರಿಯಾ, ಸುಡಾನ್, ತಾಂಜೇನಿಯಾ ಸೇರಿದಂತೆ ಆಫ್ರಿಕಾ ದೇಶದ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ಹೊಸಕೋಟೆ ಟೋಲ್ ಬಳಿ ಸರಣಿ ಅಪಘಾತ: 9 ವಾಹನ ಜಖಂ, 20ಕ್ಕೂ ಹೆಚ್ಚು ಮಂದಿಗೆ ಗಾಯ

Last Updated : Jun 26, 2022, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.