ಬೆಂಗಳೂರು: ಕೇಂದ್ರ ಸರ್ಕಾರ 'ಆತ್ಮನಿರ್ಭರ ಯೋಜನೆಯಡಿ' ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಈ ಸೌಲಭ್ಯ ಪಡೆಯಲು ನವೆಂಬರ್ 12 ಕೊನೆ ದಿನವಾಗಿದೆ.
ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರವರೆಗೆ ಬಡ್ಡಿ ರಹಿತ ಸಾಲ ದೊರೆಯುತ್ತದೆ. ಈ ಹಿಂದಿನ ಅವಧಿಯಲ್ಲಿ ಸುಮಾರು 408 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಚೀಟಿ ನೀಡಲಾಗಿದೆ.
ರಸ್ತೆ ಬಳಿಯ ತಳ್ಳುಬಂಡಿ, ಆಟೋಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಮಾರಾಟ ಮಾಡುವವರು, ಮನೆ ಮನೆಗೆ ತೆರಳಿ ತರಕಾರಿ, ಹೂವು ಮಾರುವವರು, ಬುಟ್ಟಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆಯಬಹುದು. ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ ಹಾಗೂ ಮಾರಾಟ, ಆಟದ ವಸ್ತು, ಗೃಹೋಪಯೋಗಿ ವಸ್ತು ಮಾರಾಟಗಾರರು ಈ ಯೋಜನೆಗೆ ಒಳಪಡುತ್ತಾರೆ.
ಪಾಲಿಕೆ ವ್ಯಾಪ್ತಿಯ ಬೀದಿ ವ್ಯಾಪಾರಿಗಳು ಈ ಸೌಲಭ್ಯ ಪಡೆಯಲು, ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಹಾಗು ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು.