ಬೆಂಗಳೂರು: ಪ್ರಾಯೋಗಿಕವಾಗಿ ನಗರದ ನಾಲ್ಕು ವಾರ್ಡ್ಗಳಲ್ಲಿ ಜಾರಿ ಮಾಡಿರುವ ಇಂದೋರ್ ಮಾದರಿ ಕಸ ವಿಲೇವಾರಿ ಯಶಸ್ವಿಯಾಗಿ ನಡೆಯುತ್ತಿದೆ.
ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಲ್ಲಿ ಮೂರು ಪಾಳಿಯಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಅಲ್ಲದೆ ಮಿಶ್ರ ಕಸ ತಂದರೆ ಕಸದ ಆಟೋಗೆ ನೀಡುವ ಮೊದಲೇ ಹಸಿ ಕಸ, ಒಣ ಕಸವಾಗಿ ವಿಂಗಡಿಸಲು ಕಡ್ಡಾಯ ಮಾಡಲಾಗುತ್ತಿದೆ. ಸ್ಥಳದಲ್ಲೇ ಮಾರ್ಷಲ್ಗಳು ನಿಂತು ಕಸ ಸಂಗ್ರಹಿಸಿರುವ ಬಗ್ಗೆ ಹಾಗೂ ಕಸ ವಿಂಗಡಿಸಿರುವ ಬಗ್ಗೆ ನೋಡಿಕೊಳ್ಳುತ್ತಿದ್ದಾರೆ. ನಗರವನ್ನು ಕಸ ಮುಕ್ತಗೊಳಿಸಲು ಬಿಬಿಎಂಪಿಯ ಎಲ್ಲಾ ವಾರ್ಡ್ಗಳಲ್ಲಿ ಇಂದೋರ್ ಮಾದರಿಯನ್ನು ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ.
ಮೇಯರ್ ಗೌತಮ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಕಸ ವಿಂಗಡಣೆಯ ಫೋಟೋ ಹಂಚಿಕೊಂಡಿದ್ದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ಬಿಬಿಎಂಪಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಯಾವುದೇ ಯೋಜನೆ ಜಾರಿಯಾದರೂ ಕಸ ಸಮಸ್ಯೆ ಪರಿಹಾರ ಆಗುವುದಿಲ್ಲ. ಮಾಂಸದ ತ್ಯಾಜ್ಯದಿಂದ ಸ್ಥಳೀಯರು ಹೈರಾಣಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.