ETV Bharat / state

Covid ಸಾಂಕ್ರಾಮಿಕದಲ್ಲಿ ಜನರ "ಜೀವರಕ್ಷಕ"ವಾಗಿ ದುಡಿಯುತ್ತಿದೆ Index App

ಯಾರಿಗೆ ವೆಂಟಿಲೇಟರ್ ಬೇಕು, ಐಸಿಯು ಬೇಕು ಈ ಬಗ್ಗೆ ತಕ್ಷಣವೇ ವಲಯ ಕಂಟ್ರೋಲ್ ರೂಂ ನಿಂದ ಸಿಹೆಚ್​ಬಿಎಮ್​ಎಸ್​ ಆ್ಯಪ್ ಮೂಲಕ ಆಸ್ಪತ್ರೆಯ ಬೆಡ್ ಲಭ್ಯತೆ ಬಗ್ಗೆ ಗುರುತು ಮಾಡಿ, ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ತಕ್ಷಣವೇ ಫೋನ್ ಮಾಡಿ ಸಹಕರಿಸುತ್ತಿದ್ದಾರೆ. ಈ ಮೂಲಕ ಇಂಡೆಕ್ಸ್ ಆ್ಯಪ್ ಮೂಲಕ ಅವರ ಜೀವ ರಕ್ಷಿಸುವಲ್ಲಿ ಸಹಕಾರಿಯಾಗಿದೆ.

index aplication
ಇಂಡೆಕ್ಸ್ ಆ್ಯಪ್
author img

By

Published : Jun 29, 2021, 8:39 PM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಏಕಾಏಕಿ ನಗರಕ್ಕೆ ಅಪ್ಪಳಿಸಿದಾಗ, ಇದನ್ನು ಎದುರಿಸಲು ಬಿಬಿಎಂಪಿ ತನ್ನ ಎಲ್ಲ ವ್ಯವಸ್ಥೆ ಸಜ್ಜುಗೊಳಿಸಬೇಕಾಯಿತು. ಈ ಹೋರಾಟದಲ್ಲಿ ಜನರ ಜೀವರಕ್ಷಕವಾಗಿ ಹುಟ್ಟಿಕೊಂಡಿದ್ದೇ ಇಂಡೆಕ್ಸ್ ಆ್ಯಪ್. ನಗರದ ಈ ಸಾಧನೆಗೆ ಭಾರತ ಸರ್ಕಾರದಿಂದ ಇನ್ನೋವೇಶನ್ ಪ್ರಶಸ್ತಿಯೂ ಲಭಿಸಿದೆ.

ಇಂಡೆಕ್ಸ್ ಆ್ಯಪ್ ಬರುವ ಮೊದಲು ಎಕ್ಸೆಲ್ ಶೀಟ್ ಮೂಲಕ, ಇ-ಮೇಲ್ ಮೂಲಕ ಕೋವಿಡ್ ಸೋಂಕಿತರ ಮಾಹಿತಿಯನ್ನು ವಲಯವಾರು ಹಂಚುವಾಗ ಹಲವು ಪ್ರಕರಣಗಳು ಕೈತಪ್ಪಿ ಹೋಗುತ್ತಿದ್ದವು. ಆದರೆ, ಇಂಡೆಕ್ಸ್ ಆ್ಯಪ್ ಬಂದ ನಂತರ ಎಲ್ಲ ಕೋವಿಡ್ ಸೋಂಕಿತರ ಮಾಹಿತಿ ರಾಜ್ಯದ ವಾರ್ ರೂಂನಿಂದ ಬಂದ ಕೂಡಲೇ ಇಂಡೆಕ್ಸ್ ಆ್ಯಪ್​ಗೆ ಬರುತ್ತಿದ್ದವು.

ಅಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಆಪ್ತಮಿತ್ರ ಸಿಸ್ಟಂ ಮೂಲಕ ಟೆಲಿಕಾಲರ್​ಗಳು, ಎಲ್ಲ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಫೋನ್ ಮಾಡಿ, ನಾಲ್ಕು ಗಂಟೆ ಅವಧಿಯ ಒಳಗಾಗಿ ಇಂಡೆಕ್ಸ್ ಆ್ಯಪ್​ನಲ್ಲಿ ನಮೂದಿಸುತ್ತಿದ್ದರು. ಇದರಿಂದ ಯಾರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಬೇಗ ತಿಳಿದು, ಹಾಸಿಗೆ ಹೆಚ್ಚು ಅಗತ್ಯ ಇರುವವರ ಪ್ರತ್ಯೇಕ ಪಟ್ಟಿ ಮಾಡಲಾಗುತ್ತಿತ್ತು.

ಯಾರಿಗೆ ವೆಂಟಿಲೇಟರ್ ಬೇಕು, ಐಸಿಯು ಬೇಕು ಈ ಬಗ್ಗೆ ತಕ್ಷಣವೇ ವಲಯ ಕಂಟ್ರೋಲ್ ರೂಂ ನಿಂದ ಸಿಹೆಚ್​ಬಿಎಮ್​ಎಸ್​ ಆ್ಯಪ್ ಮೂಲಕ ಆಸ್ಪತ್ರೆಯ ಬೆಡ್ ಲಭ್ಯತೆ ಬಗ್ಗೆ ಗುರುತು ಮಾಡಿ, ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ತಕ್ಷಣವೇ ಫೋನ್ ಮಾಡಿ ಸಹಕರಿಸುತ್ತಿದ್ದರು. ಈ ಮೂಲಕ ಇಂಡೆಕ್ಸ್ ಆ್ಯಪ್ ತಂತ್ರಜ್ಞಾನದ ಮೂಲಕ ಜನರನ್ನು ತಲುಪಿ, ಅವರ ಜೀವ ರಕ್ಷಿಸುವಲ್ಲಿ ಸಹಕಾರಿಯಾಗಿದೆ.

ಆರಂಭದಲ್ಲಿ ಕೋವಿಡ್ ಮೊದಲನೇ ಅಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ, ಯಾವುದೇ ತಂತ್ರಜ್ಞಾನ ಇರಲಿಲ್ಲ. ಎಲ್ಲ ಕೋವಿಡ್ ಪ್ರಕರಣಗಳನ್ನು ರಾಜ್ಯದ ಕೋವಿಡ್ ವಾರ್ ರೂಂ ಪೋರ್ಟಲ್​ನಿಂದ ಡೌನ್ಲೋಡ್ ಮಾಡಿ ಸಾಮಾನ್ಯವಾದ ಎಕ್ಸೆಲ್ ಶೀಟ್​​ನಲ್ಲಿ ದಾಖಲಿಸಿ, ಎಲ್ಲ ವಲಯಗಳಿಗೆ ಕಳಿಸಲಾಗುತ್ತಿತ್ತು. ಇ-ಮೇಲ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿತ್ತು.

ನಂತರ ಸ್ಮಾರ್ಟ್ ಸಿಟಿಯ ಮೂಲಕ ಪಿಡಬ್ಲ್ಯೂಸಿ ಏಜೆನ್ಸಿಯು ಇಂಡೆಕ್ಸ್ ಆ್ಯಪ್ ಸಿದ್ಧಪಡಿಸಿತ್ತು. ಹೀಗಾಗಿ ಇಂಡೆಕ್ಸ್ ಅಪ್ಲಿಕೇಷನ್ ಅನ್ನು ಕೋವಿಡ್ ಮೊದಲನೇ ಅಲೆ ಬಂದಾಗಲೇ ಸಿದ್ಧಪಡಿಸಲಾಗಿದೆ ಅಲ್ಲದೇ, ಇಂದಿಗೂ ಬಳಸಲಾಗುತ್ತಿದೆ.

ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್

ನಗರದಲ್ಲಿ ದೃಢಪಡುವ ಎಲ್ಲ ಕೋವಿಡ್ ಪ್ರಕರಣಗಳ ಮಾಹಿತಿ, ರಾಜ್ಯದ ಕೋವಿಡ್ ವಾರ್ ರೂಂ ಪೋರ್ಟಲ್​ನಿಂದ ಇಂಡೆಕ್ಸ್ ಆ್ಯಪ್​ಗೆ ಮಾಹಿತಿ ಬರುತ್ತದೆ. ಈ ಮೂಲಕ ಪಾಲಿಕೆಯ ಮತ್ತೊಂದು ಪೋರ್ಟಲ್ "ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ ಸಿಸ್ಟಂ" ಮೂಲಕ, ಅಗತ್ಯವಿರುವವರಿಗೆ ಬೆಡ್ ಬ್ಲಾಕ್ ಮಾಡಲಾಗುತ್ತದೆ.

ಹೋಂ ಐಸೋಲೇಷನ್ ನಲ್ಲಿರುವವರ ಮಾಹಿತಿಯೂ ಇಂಡೆಕ್ಸ್ ಆಪ್ಲಿಕೇಷನ್​ನಲ್ಲಿ ಸಿಗುತ್ತದೆ. ಹೀಗಾಗಿ ಒಂದೇ ಪೋರ್ಟಲ್ ಮೂಲಕ ರಾಜ್ಯದ ವಾರ್ ರೂಂ, ಹಾಗೂ ತಳಮಟ್ಟದಲ್ಲಿರುವ ವಲಯವಾರು ಕಂಟ್ರೋಲ್ ರೂಂಗಳ ವರೆಗೂ ಏಕಕಾಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ.

ಇದರಿಂದ ಯಾವುದೇ ರೀತಿಯಲ್ಲಿ ಅಂಕಿ ಅಂಶ ವ್ಯತ್ಯಾಸ ಬರುತ್ತಿರಲಿಲ್ಲ. ಎಲ್ಲ ಕಡೆ ತಾಳೆಯಾಗುತ್ತಿತ್ತು. ಅಲ್ಲದೇ ಕೋವಿಡ್ ಸೋಂಕಿತ ಪ್ರಕರಣಗಳು ವಿಳಾಸ ತಪ್ಪಾಗಿ ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಸೇರ್ಪಡೆಯಾಗಿದ್ದರೆ, ಅದನ್ನೂ ಸುಲಭವಾಗಿ ಸರಿಪಡಿಸಬಹುದಿತ್ತು.

ಕೊನೆಯ ಹಂತದಲ್ಲಿ ಪ್ರತೀ ವಲಯದ ಮಾಹಿತಿಯೂ ನಮೂದಾಗುತ್ತಿತ್ತು. ಪ್ರತೀ ವಲಯದಲ್ಲಿ ಎಷ್ಟು ಕೋವಿಡ್ ಸೋಂಕಿತರನ್ನು ಬಿಬಿಎಂಪಿ ಸಂಪರ್ಕಿಸಿದೆ, ಎಷ್ಟು ಹೋಂ ಐಸೋಲೇಷನ್ ಆಗಿದೆ, ಎಷ್ಟು ಜನರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಲ್ಲಾ ಮಾಹಿತಿಯೂ ಇಂಡೆಕ್ಸ್ ಆ್ಯಪ್​ನಲ್ಲಿ ಕ್ರೋಢೀಕೃತ ರೀತಿಯಲ್ಲಿ ಮಾಹಿತಿ ಸಿಗುತ್ತಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದರು.

ಇಂಡೆಕ್ಸ್ ಆ್ಯಪ್ ಬಗ್ಗೆ ಮಾತನಾಡಿದ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್, ಇಂಡೆಕ್ಸ್ ಆ್ಯಪ್​ ಆರಂಭವಾದಾಗ 2-3 ಸಾವಿರ ಪ್ರಕರಣದಿಂದ ಮೊದಲ ಅಲೆಯಲ್ಲಿ ಗರಿಷ್ಠ 5 ಸಾವಿರ ಪ್ರಕರಣ ಮಾಹಿತಿಯನ್ನೂ, ಎರಡನೇ ಅಲೆಯಲ್ಲಿ 26 ಸಾವಿರ ಗರಿಷ್ಟ ಪ್ರಕರಣ ತಲುಪಿದರೂ ಎಲ್ಲ ಮಾಹಿತಿಯನ್ನೂ ಕ್ರೋಢೀಕರಿಸಿ ಇಡುವ ಮೂಲಕ ಇಂಡೆಕ್ಸ್ ಆ್ಯಪ್ ನಿರಂತರವಾಗಿ ಕೆಲಸ ಮಾಡಿದೆ.

ಹೀಗಾಗಿ ಇದು ತುಂಬಾ ಉಪಯುಕ್ತವಾದ ಅಪ್ಲಿಕೇಷನ್ ಆದ ಹಿನ್ನೆಲೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಿಷನ್ ಅಡಿ ಗುರುತಿಸಿ, ಇನ್ನೋವೇಶನ್ ಪ್ರಶಸ್ತಿ ಲಭಿಸಿದೆ. ಹೀಗಾಗಿ ಇದು ಹೆಮ್ಮೆಯ ವಿಷಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.