ಬೆಂಗಳೂರು: ಆಕ್ಸಿಜನ್ ಕೊರತೆಗೆ ನಗರದ ಮತ್ತೊಂದು ಆಸ್ಪತ್ರೆ ಸಿಲುಕಿಕೊಂಡಿದೆ. ಬಿಟಿಎಂ ಲೇಔಟ್ನಲ್ಲಿರುವ ವೆಂಕಟೇಶ್ವರ ಆಸ್ಪತ್ರೆ 35 ಬೆಡ್ ಹೊಂದಿದ್ದು, ಈಗ ಈ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ ಎನ್ನಲಾಗಿದೆ.
ಆಕ್ಸಿಜನ್ ಕೊರತೆ ಉಂಟಾದ ಪರಿಣಾಮ ಆಸ್ಪತ್ರೆಯಿಂದ ತಡರಾತ್ರಿಯೇ 3ಕ್ಕೂ ಹೆಚ್ಚು ಐಸಿಯು ವೆಂಟಿಲೇಟರ್ನಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಆಕ್ಸಿಜನ್ ಪೂರೈಕೆಯಾಗದಿದ್ದರೆ ಇನ್ನಷ್ಟು ರೋಗಿಗಳನ್ನ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.