ETV Bharat / state

ನಾನು ಸೋತರೂ ಸುಮ್ಮನೆ ಕೂತಿಲ್ಲ: ಗುಟುರು ಹಾಕಿದ ದೊಡ್ಡ ಗೌಡರು! - kannadanews

ಲೋಕಸಭೆ ಚುನಾವಣೆಯಲ್ಲಿ ಸೋತರೂ ನಾನು ಕಂಗೆಡದೆ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತನಾಗಿದ್ದಾನೆ ಎಂದು ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡರು ಗುಟುರು ಹಾಕಿದ್ದಾರೆ.

ನಾನು ಸೋತರೂ ಸುಮ್ಮನೆ ಕೂತಿಲ್ಲ
author img

By

Published : Jun 7, 2019, 8:41 PM IST

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಸೋತರೂ ನಾನು ಕಂಗೆಟ್ಟಿಲ್ಲ, ಸುಮ್ಮನೆ ಕೂತಿಲ್ಲ. ಪಕ್ಷ ಕಟ್ಟುವ ಶಕ್ತಿ ನನಗೆ ಇನ್ನೂ ಇದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.

ಅರಮನೆ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿರುವ ಪಕ್ಷದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌಡರು, ನನ್ನ ಆರೋಗ್ಯ ಸರಿಯಿಲ್ಲ, ಆದರೂ ಬಂದಿದ್ದೇನೆ. ಪಕ್ಷದ ಆರೋಗ್ಯ ಸರಿ ಮಾಡೋದು ನನ್ನ ಕೆಲಸ. ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ಯಾರೇ ಪಕ್ಷ ಬಿಟ್ಟು ಹೋದರೂ ಹೆದರುವ ಪ್ರಶ್ನೆ ಇಲ್ಲ. ಮತ್ತಷ್ಟು ಪಕ್ಷ ಸಂಘಟನೆ ಮಾಡೋಣ ಎಂದು ಸಲಹೆ ನೀಡಿದರು.ಎಲ್ಲಾ ವರ್ಗಗಳಿಗೂ 10-15 ಕೋಟಿ ರೂ. ಅನುದಾನ ಕೊಡಿ. ಪಕ್ಷ ಹೇಗೆ ಉಳಿಯಲ್ಲ ಅಂತ ನಾನೂ ನೋಡುತ್ತೇನೆ ಎಂದು ಸಿಎಂಗೆ ಗೌಡರು ಸಲಹೆ ನೀಡಿದರು.
ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ. ಈ ಪಕ್ಷ ಉಳಿಯಬೇಕು. ನಾನು ದುಡಿದಿದ್ದೇನೆ. ಪಾದಯಾತ್ರೆ ಮಾಡಿದ್ದೇನೆ. ರೈಲು ತಡೆ ಮಾಡಿ ಹೋರಾಟ ಮಾಡಿದ್ದೇನೆ. ರೈತರ ಪರ ನಾನು ಹೋರಾಟ ಮಾಡುತ್ತಲೇ ಇದ್ದೇನೆ. ರೈತರನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು, ಮನೆಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ನನಗೆ ಸೋತು ಮತ್ತೆ ಎದ್ದು ಬರೋದು ಗೊತ್ತಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಾನೇ ಗುರುತಿಸುತ್ತೇನೆ. ಲಿಂಗಾಯತ, ಕುರುಬ, ಒಕ್ಕಲಿಗ ಯಾರೇ ಇದ್ದರೂ ಪಕ್ಷಕ್ಕೆ ನಿಷ್ಠಾವಂತರಾಗಿರಿ. ಪಕ್ಷಕ್ಕೆ ದ್ರೋಹ ಮಾಡ್ಬೇಡಿ ಎಂದು ಮನವಿ ಮಾಡಿದರು.
ಮೈತ್ರಿ ಸರ್ಕಾರವನ್ನು ಅವರು ನಡೆಸಿಕೊಂಡು ಹೋಗಲಿ. 17 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ. ಏನಾಗುತ್ತಿದೆ ದೇಶದಲ್ಲಿ ಎಂದು ಪ್ರಶ್ನಿಸಿದ ಗೌಡರು, ಮೈತ್ರಿ ಸರ್ಕಾರ ಮಾಡಿದ್ದರಿಂದ ಒಂದು ಸ್ಥಾನ ಬಂದಿದೆ ಅಂತಾರೆ. ವಿಜಯಪುರದಿಂದ ಯಾರು ಅನ್ಯಾಯ ಮಾಡಿದ್ದು, ಕಾಂಗ್ರೆಸ್ ನವರು ಅನ್ಯಾಯ ಆಗಿದೆ ಅಂತಾನೆ ವಿಶ್ಲೇಷಣೆ ಮಾಡ್ಲಿ ಬಿಡಿ. ಒಕ್ಕಲಿಗರು ಅನ್ಯಾಯ ಮಾಡಿದ್ರಾ ? ವಿಜಯಪುರದಲ್ಲಿ ಅನ್ಯಾಯ ಮಾಡಿದ್ದು ಯಾರು?ಲಿಂಗಾಯತರಿಗೆ ನಾನು ಕೊಟ್ಟಷ್ಟು ಅವಕಾಶ ಯಾರು ಕೊಟ್ಟಿದ್ದಾರೆ. ಸಂಪುಟದಲ್ಲಿ ನಾನು ಅವಕಾಶ ಕೊಟ್ಟಿದ್ದೇನೆ. ಅವರ ಜೀವಮಾನದಲ್ಲಿ ಸಿಗದಷ್ಟು ಅವಕಾಶ ಕೊಟ್ಟಿದ್ದೇನೆ ಎಂದು ಗುಡುಗಿದರು.

Intro:ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಸೋತರೂ ನಾನು ಕಂಗೆಟ್ಟಿನಲ್ಲ, ಸುಮ್ಮನೆ ಕೂತಿಲ್ಲ. ಪಕ್ಷ ಕಟ್ಟುವ ಶಕ್ತಿ ನನಗೆ ಇನ್ನೂ ಇದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.Body:ಅರಮನೆ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿರುವ ಪಕ್ಷದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೌಡರು, ನನ್ನ ಆರೋಗ್ಯ ಸರಿಯಿಲ್ಲ. ಆದರೂ ಬಂದಿದ್ದೇನೆ. ಪಕ್ಷದ ಆರೋಗ್ಯ ಸರಿ ಮಾಡೋದು ನನ್ನ ಕೆಲಸ. ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ಯಾರೇ ಪಕ್ಷ ಬಿಟ್ಟು ಹೋದರೂ ಹೆದರುವ ಪ್ರಶ್ನೆ ಇಲ್ಲ. ಮತ್ತಷ್ಟು ಪಕ್ಷ ಸಂಘಟನೆ ಮಾಡೋಣ ಎಂದು ಸಲಹೆ ನೀಡಿದರು.
ಸುಖದ ಸುಪ್ಪತ್ತಿಗೆಯಲ್ಲಿ ನಾನು ಬಿಳಿ ಕನ್ನಡಕವೂ ಹಾಕಿಲ್ಲ, ಕಪ್ಪು ಕನ್ನಡಕವೂ ಹಾಕಿಲ್ಲ. ಬೆವರು ಸುರಿಸಿದ ರೈತ ಮಹಾನುಭಾವ ನಮ್ಮಪ್ಪ. ಅಂತಹವರ ಹೊಟ್ಟೆಯಲ್ಲಿ ನಾನು ಹುಟ್ಟಿದ್ದೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು, ಮನೆಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ನನಗೆ ಸೋತು ಮತ್ತೆ ಎದ್ದು ಬರೋದು ಗೊತ್ತಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಾನೇ ಗುರುತಿಸುತ್ತೇನೆ. ಲಿಂಗಾಯತ, ಕುರುಬ, ಒಕ್ಕಲಿಗ ಯಾರೇ ಇದ್ದರೂ ಪಕ್ಷಕ್ಕೆ ನಿಷ್ಠಾವಂತರಾಗಿರಿ. ಪಕ್ಷಕ್ಕೆ ದ್ರೋಹ ಮಾಡ್ಬೇಡಿ ಎಂದು ಮನವಿ ಮಾಡಿದರು.
ಮೈತ್ರಿ ಸರ್ಕಾರವನ್ನು ಅವರು ನಡೆಸಿಕೊಂಡು ಹೋಗಲಿ. 17 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ. ಏನಾಗುತ್ತಿದೆ ದೇಶದಲ್ಲಿ ಎಂದು ಪ್ರಶ್ನಿಸಿದ ಗೌಡರು, ಮೈತ್ರಿ ಸರ್ಕಾರ ಮಾಡಿದ್ದಿರಿಂದ ಒಂದು ಸ್ಥಾನ ಬಂದಿದೆ ಅಂತಾರೆ. ಬಿಜಾಪುರದಿಂದ ಯಾರು ಅನ್ಯಾಯ ಮಾಡಿದ್ದು, ಕಾಂಗ್ರೆಸ್ ನವರು ಅನ್ಯಾಯ ಆಗಿದೆ ಅಂತಾನೆ ವಿಶ್ಲೇಷಣೆ ಮಾಡ್ಲಿ ಬಿಡಿ. ಒಕ್ಕಲಿಗರು ಅನ್ಯಾಯ ಮಾಡಿದ್ರಾ ?. ಬಿಜಾಪುರದಲ್ಲಿ ಅನ್ಯಾಯ ಮಾಡಿದ್ದು ಯಾರು. ಲಿಂಗಾಯತರಿಗೆ ನಾನು ಕೊಟ್ಟಷ್ಟು ಅವಕಾಶ ಯಾರು ಕೊಟ್ಟಿದ್ದಾರೆ. ಸಂಪುಟದಲ್ಲಿ ನಾನು ಅವಕಾಶ ಕೊಟ್ಟಿದ್ದೇನೆ. ಅವರ ಜೀವಮಾನದಲ್ಲಿ ಸಿಗದಷ್ಟು ಅವಕಾಶ ಕೊಟ್ಟಿದ್ದೇನೆ ಎಂದು ಗುಡುಗಿದರು.
ಎಲ್ಲಾ ವರ್ಗಗಳಿಗೂ 10-15 ಕೋಟಿ ರೂ. ಅನುದಾನ ಕೊಡಿ. ಪಕ್ಷ ಹೇಗೆ ಉಳಿಯಲ್ಲ ಅಂತ ನಾನೂ ನೋಡುತ್ತೇನೆ ಎಂದು ಸಿಎಂಗೆ ಗೌಡರು ಸಲಹೆ ನೀಡಿದರು.
ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ. ಈ ಪಕ್ಷ ಉಳಿಯಬೇಕು. ನಾನು ದುಡಿದಿದ್ದೇನೆ. ಪಾದಯಾತ್ರೆ ಮಾಡಿದ್ದೇನೆ. ರೈಲು ತಡೆ ಮಾಡಿ ಹೋರಾಟ ಮಾಡಿದ್ದೇನೆ. ರೈತರ ಪರ ನಾನು ಹೋರಾಟ ಮಾಡುತ್ತಲೇ ಇದ್ದೇನೆ. ರೈತರನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿಯವರೇ ಬಡವರ ಪರ ನಿಲ್ಲಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಪಕ್ಷದಲ್ಲಿ ತಿಂದು ಉಂಡು ಕೆಲವರು ನಮಗೆ ಉಪದೇಶ ಮಾಡುತ್ತಾರೆ. ನನ್ನ ಪಕ್ಷದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ ಎಂದು ಭಾವೋದ್ವೇಗದಿಂದ ನುಡಿದರು.
ಚುನಾವಣೆಗೆ ಸಿದ್ದರಾಗುವಂತೆ ನಿಖಿಲ್ ಹೇಳಿಲ್ಲ. ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಪಕ್ಷ ಸಂಘಟನೆ ಬಗ್ಗೆಯಷ್ಟೇ ಹೇಳಿದ್ದ. ಮಾಧ್ಯಮದವರು ಮೈತ್ರಿ ಸರ್ಕಾರ ಎಷ್ಟು ದಿನ ಉಳಿಯಲು ಬಿಡುತ್ತಾರೆ ನೋಡೋಣ ಎಂದು ನಿಖಿಲ್ ಹೇಳಿಕೆಗೆ ಹೆಚ್ ಡಿಡಿ ಸ್ಪಷ್ಟನೆ ನೀಡಿದರು.
ಮೂನ್ನೂರಕ್ಕೂ ಹೆಚ್ಚು ಸ್ಥಾನ ಗೆದ್ದುದ್ದು ಮೋದಿ ಚಾಣಾಕ್ಷತನವೆಂದು ನಾನು ಹೇಳಲ್ಲ. ಜನ ಬಿಜೆಪಿಯವರಿಗೆ ಮತ ಕೊಟ್ಟಿದ್ದಾರೆ ಅಂತಷ್ಟೇ ಹೇಳಬಲ್ಲೆ. ನಾವು ನಮ್ಮ ಸೋಲನ್ನು ಒಪ್ಪಿಕೊಳ್ಳೊಣ ಎಂದ ಗೌಡರು, ಮೈತ್ರಿ ಸರ್ಕಾರ ಆರಂಭ ಆದಾಗಿನಿಂದ ಮಾಧ್ಯಮಗಳಿಗೆ ಸಮಾಧಾನ ಇಲ್ಲ. ಇದೊಂದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಒಂದೊಂದೇ ಸ್ಥಾನ ಬಂದಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. 579 ಸ್ಥಾನಗಳನ್ನು ಗೆದ್ದು ನಮ್ಮ ಪಕ್ಷದ ಗೌರವ ಎತ್ತಿಹಿಡಿದಿದ್ದಾರೆ ಎಂದು ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಇದಕ್ಕೂ ಮುನ್ನ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತಾ‌ ಮಾತನಾಡಿ, ನಮ್ಮ ಪಕ್ಷ ಕೇವಲ‌ ಒಂದು ಪ್ರದೇಶದಲ್ಲಿ ಸೀಮಿತವಾಗಿಲ್ಲ. ಹೈದರಾಬಾದ್-ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕ ಎಲ್ಲಡೆಯೂ ಗೆದ್ದಿದ್ದೇವೆ. ನಮ್ಮ ಶಕ್ತಿ ಏನು ಅಂತ ಸ್ಥಳೀಯ ಸಂಸ್ಥೆಗಳಲ್ಲಿ ಸಾಬೀತು ಮಾಡಿದ್ದೇವೆ ಎಂದರು.
ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡರು ಸೋತಿದ್ದಕ್ಕೆ ಹೆಚ್ಚು ಛಲ ಬಂದಿದೆ. ಸೋಲನ್ನೇ ಚಿಮ್ಮುವ ಹಲಗೆ ಮಾಡಿಕೊಳ್ಳಬೇಕು. ಕುಮಾರಣ್ಣನ ಗ್ರಾಮ ವಾಸ್ತವ್ಯ ಚಿಮ್ಮುವ‌ ಹಲಗೆ ಆಗಲಿ. ನಾವು ಪಕ್ಷವನ್ನು ಬಲವಾಗಿ ಕಟ್ಟುತ್ತೇವೆ. ನಮ್ಮ ಪಕ್ಷಕ್ಕೂ ಇತಿಹಾಸ, ಭವ್ಯ‌ ಪರಂಪರೆ ಇದೆ ಎಂದು ಹೇಳಿದರು. Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.