ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳನ್ನು ಎಸಗಿ ಸುಗಮ ಕಾನೂನು ಸುವ್ಯವಸ್ಥೆ ಧಕ್ಕೆಗೆ ಕಾರಣರಾಗಿ ಬಂಧಿಸಲು ಹೋದವರ ಮೇಲೆ ಹಲ್ಲೆ ನಡೆಸುವ ಆರೋಪಿಗಳಿಗೆ ಶೂಟೌಟ್ ಅಸ್ತ್ರದ ಮೂಲಕ ಕಡಿವಾಣ ಹಾಕುತ್ತಿರುವ ಪೊಲೀಸರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ಗುಂಡೇಟು ಕೂಡ ಹಣದ ವ್ಯವಹಾರವಾಗಿ ಬದಲಾಗಿದೆ. ಆರೋಪಿಗಳ ಆಣತಿಯಂತೆ ತೊಂದರೆಯಾಗದಂತೆ ಗುಂಡು ಹಾರಿಸಲು ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಇನ್ನು ಮುಂದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವ ಆರೋಪಿಗಳಿಗೆ ಗುಂಡು ಹೊಡೆದರೆ ಕಾಲಿನ ಎಕ್ಸ್ ರೇ ಪ್ರತಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಪಾತಕಲೋಕದ ಕ್ರಿಮಿನಲ್ ಗಳೊಂದಿಗೆ ಗುಂಡಿನ ವ್ಯವಹಾರ ತಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಆರೋಪಿಗಳ ಕಾಲಿಗೆ ಗುಂಡು ಹಾರಿಸುವಾಗಲು ಹಣದ ವ್ಯವಹಾರ ಮಾಡುವ ಪೊಲೀಸರು ಚರ್ಮಕ್ಕೆ ತಗುಲಿದರೆ ಒಂದು ದರ, ಬುಲೆಟ್ ಸವರಿ ಹೋದರೆ ಮತ್ತೊಂದು ದರ, ನಿಗದಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಪ್ರತಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಬೇಕು ಹಾಗೂ ಗುಂಡು ಬಿದ್ದ ಸ್ಥಳದ ಅನ್ವಯ ಗುಂಡು ನುಗ್ಗಿಸಿದವನು ಸಮಜಾಯಿಷಿ ನೀಡಬೇಕು ಎಂದು ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ.
ನಗರದಲ್ಲಿ ಆಸ್ತಿ ಸಮಸ್ಯೆ, ಹಣ ವಸೂಲಿ ಸಂಬಂಧ ಕೆಲ ಇನ್‌ಸ್ಪೆಕ್ಟರ್‌ಗಳು ಎಫ್ಐಆರ್ ಅಥವಾ ಎನ್‌ಸಿಆರ್ ದಾಖಲಿಸುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ದೂರು ಬಂದ ಕೂಡಲೇ ದೂರುದಾರನ ಮಾಹಿತಿ ಆಧರಿಸಿ ಎಫ್ಐಆರ್ ಅಥವಾ ಎನ್‌ಸಿಆರ್ ದಾಖಲಿಸಬೇಕು. ಈ ಪ್ರಕ್ರಿಯೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಪೊಲೀಸರು ಹಾಗೂ ಸಿಬ್ಬಂದಿ ಹಣ ವಸೂಲಿ ಇಳಿದಿದ್ದರಾ ಎಂಬ ಗುಮಾನಿ ವ್ಯಕ್ತವಾಗಿದೆ.
ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರಿದ್ದರೂ ಅರೆಸ್ಟ್ ಮಾಡದ ಬಗ್ಗೆ ಪರಿಶೀಲನೆ: ಪ್ರತಿ ಎಫ್ಐಆರ್ ಹಾಗೂ ಎನ್‌ಸಿಆರ್‌ಗಳನ್ನು ಕೂಲಂಕಷವಾಗಿ ಆಯಾ ವಿಭಾಗದ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿದ್ದರೂ ಅರೆಸ್ಟ್ ಮಾಡದೆ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದರೂ ಅಶೋಕ ನಗರ ಪೊಲೀಸರು ಆರೋಪಿ ಬಂಧಿಸಲಿರಲಿಲ್ಲ. ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಆಯುಕ್ತ ಕಮಲ್ ಪಂತ್ ಸಿಸಿಬಿಗೆ ಆದೇಶಿಸಿದ್ದರು.
ಇದನ್ನೂ ಓದಿ: ಶಿವನ ಪೂಜೆಗೆ ತೆರಳಿ ಹಿಂತಿರುಗಿ ಬರುವಾಗ ದಾರುಣ ಅಂತ್ಯ ಕಂಡ ಮಕ್ಕಳು