ETV Bharat / state

ನಾನು ಎಂಎಲ್ಎ, ಮಂತ್ರಿ, ಮುಖ್ಯಮಂತ್ರಿ ಆಗಲು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಕಾರಣ: ಸಿದ್ದರಾಮಯ್ಯ

author img

By

Published : Aug 9, 2022, 7:56 AM IST

ಹಾವನೂರು ಆಯೋಗ ರಚನೆಯಾಗಿ 50 ವರ್ಷಗಳು ಸಂದಿವೆ. ಈ ನಿಮಿತ್ತ ಆಯೋಗದ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ದೀರ್ಘ ಕಾಲದ ಇತಿಹಾಸ ಇದೆ. ಅಸಮಾನತೆ ಹೋಗಲಾಡಿಸಲು ಸಾಮಾಜಿಕ ನ್ಯಾಯ ಅಗತ್ಯ. ಹೀಗಾಗಿ ನಾನು ಮಂತ್ರಿ, ಮುಖ್ಯಮಂತ್ರಿ ಆಗಲು ಸಂವಿಧಾನ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

i-become-minister-because-of-the-constitution-says-siddaramaiah
ನಾನು ಎಂಎಲ್ಎ, ಮಂತ್ರಿ, ಮುಖ್ಯಮಂತ್ರಿಯಾಗಲು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಕಾರಣ: ಸಿದ್ದರಾಮಯ್ಯ

ಬೆಂಗಳೂರು : ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಹಾವನೂರು ಆಯೋಗದ ಸುವರ್ಣ ಮಹೋತ್ಸವ ಸಮಾರಂಭವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಹಾವನೂರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನನ್ನಲ್ಲಿ ಕುರುಬರು ಲಾಯರ್ ಆಗೋದಕ್ಕೆ ಸಾಧ್ಯನಾ ಎಂದು ಹೇಳಿದ್ದರು.

ಬಿಎಸ್ಸಿ ಓದಿದ್ದೀಯಾ ಗುಮಾಸ್ತನ ಕೆಲಸಕ್ಕೆ ಸೇರು ಎಂದು ಹೇಳಿದ್ದರು. ನಮ್ಮಪ್ಪ ಕೂಡ ಲಾಯರ್ ಬೇಡ ಗುಮಾಸ್ತ ನೌಕರಿಗೆ ಸೇರು ಎಂದು ಒತ್ತಾಯ ಮಾಡಿದ್ದರು. ಆಮೇಲೆ ಊರಿನ ಯಜಮಾನರು ಎಲ್ಲ ಪಂಚಾಯಿತಿ ಸೇರಿ ಆಮೇಲೆ ಲಾಯರ್ ಓದಲು ಸೇರಿಕೊಂಡೆ. ನಾನು ಎಂಎಲ್ಎ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಲು ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಕಾರಣ ಎಂದು ಹೇಳಿದರು.

i-become-minister-because-of-the-constitution-says-siddaramaiah
ಹಾವನೂರು ಆಯೋಗದ ಸುವರ್ಣ ಮಹೋತ್ಸವ ಸಮಾರಂಭ

ಸರ್ಕಾರ ಕಾಂತರಾಜ ವರದಿ ಸ್ವೀಕಾರ ಮಾಡುತ್ತಿಲ್ಲ. ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಕಾಲದಲ್ಲಿ ಸ್ವೀಕಾರ ಮಾಡಿಲ್ಲ, ಹಾಗಾಗಿ ನಾವು ತೆಗೆದುಕೊಂಡಿಲ್ಲ ಎಂದು ಈಶ್ವರಪ್ಪ ಎಂಬ ಪೆದ್ದ ಹೇಳ್ತಾನೆ ಎಂದು ಈಶ್ವರಪ್ಪ ಅವರನ್ನು ಟೀಕಿಸಿದರು.

ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿಚಾರದಲ್ಲಿ ತ್ರಿಬಲ್ ಟೆಸ್ಟ್ ಮಾಡಿಲ್ಲ ಎಂದು ಮಹಾರಾಷ್ಟ್ರದಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ಮೀಸಲಾತಿ ತೆಗೆದು ಹಾಕಿದರು. ಮೀಸಲಾತಿ ಇದ್ದ ಕಡೆ ಜನರಲ್ ಕ್ಯಾಟಗರಿ ಮಾಡಿದರು. ಅದು ರಾಜ್ಯದಲ್ಲೂ ಅನ್ವಯ ಆಗುತ್ತಿದೆ. ಭಕ್ತವತ್ಸಲ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿದ್ದಾರೆ. ಆ ಗಿರಾಕಿ ಸರ್ವೇನೇ ಮಾಡಿಲ್ಲ, ಅದರ ವರದಿಯೇ ಇಲ್ಲ. ಅದು ಕೋರ್ಟ್​ನಲ್ಲಿ ನಿಲ್ಲುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

ಕಾರ್ಪೊರೇಷನ್ ಚುನಾವಣೆ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ತಾಪಂ, ಜಿಪಂನಲ್ಲಿ ಮೀಸಲಾತಿ ಬರುತ್ತೋ ಇಲ್ಲವೋ ಗೊತ್ತಿಲ್ಲ. ಕಾಂತರಾಜ ವರದಿ ಅಂಕಿ- ಅಂಶಗಳನ್ನು ಕೊಡಿ ಎಂದು ಹೇಳಿದ್ದೆ. ಅದ್ರೂ ಪ್ರತೇಕ ಕಮಿಟಿ ಮಾಡಿದರು. ಈಗ ಓಬಿಸಿ ವರ್ಗಕ್ಕೆ ಮೀಸಲಾತಿ ಇಲ್ಲ ಎಂದು ಹೇಳಿದರು.

ಹಾವನೂರು ಆಯೋಗ ರಚನೆ ಆಗಿ 50 ವರ್ಷ : ಆಗಸ್ಟ್ 8 ,1972 ರಲ್ಲಿ ಹಾವನೂರು ಆಯೋಗ ರಚನೆ ಆಗಿದೆ. ಆಗಸ್ಟ್ 8,2022 ಕ್ಕೆ 50 ವರ್ಷ ಆಯಿತು. ಹಾಗಾಗಿ ಸುವರ್ಣ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ‌. ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ದೀರ್ಘ ಕಾಲದ ಇತಿಹಾಸ ಇದೆ.

ಮೈಸೂರು ಮಹಾರಾಜರ ಕಾಲದಿಂದಲೂ ಇದೆ. ಅವತ್ತು ಹಿಂದುಳಿತ ನಾಯಕರು ಮಹಾರಾಜರನ್ನು ಭೇಟಿ ಮಾಡುತ್ತಾರೆ‌. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಬಲಿಸಿದ್ದರು‌. ಜನಪರವಾಗಿದ್ದ ಕಾರಣಕ್ಕೆ ಬೆಂಬಲಿಸಿದ್ದರು. ಅಸಮಾನತೆ ಇದೆ, ಒಂದು ಜಾತಿಯವರು ಬಹುತೇಕ ಎಲ್ಲಾ ಹುದ್ದೆಗಳಲ್ಲಿ ಶೇ 90ರಷ್ಟು ಹುದ್ದೆಗಳು ಪಡೆದುಕೊಳ್ಳುತ್ತಿದ್ದಾರೆ‌. ಉಳಿದ ಜಾತಿಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದರು.

ಮಿಲ್ಲರ್ ಆಗ ಚಿಫ್ ಜಸ್ಟಿಸ್ ಆಗಿದ್ದರು. ಅವರ ಮುಂದಾಳತ್ವದಲ್ಲಿ ಆಯೋಗ ಮಾಡಲಾಯಿತು. ಅವತ್ತು ಕೂಡ ವಿರೋಧವಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಇದ್ದರು. ಅವರಿಗೂ ಒಂದು ರೀತಿ ಮೀಸಲಾತಿ ಇತ್ತು. ಅದು ಅಲಿಖಿತ ಮೀಸಲಾತಿ. ಇವತ್ತಿಗೂ ಅಸಮಾನತೆಯಿದೆ‌. ಯಾರೋ ಅಲಿಖಿತ ಮೀಸಲಾತಿ ಪಡೆದು ಮಜಾ ಮಾಡುತ್ತಿದ್ದರು.ಈಗ ಅವರ ಧ್ವನಿ ಕಡಿಮೆ ಆಗಿದೆ.

ನ್ಯಾಯಾಂಗದಲ್ಲಿ ಯಾಕೆ ಮೀಸಲಾತಿ ಇರಬಾರದು : ನ್ಯಾಯಾಂಗದಲ್ಲಿ ಮೀಸಲಾತಿ ಇದುವರೆಗೂ ಇಲ್ಲ. ಯಾಕೆ ನ್ಯಾಯಾಂಗದಲ್ಲಿ ಮೀಸಲಾತಿ ಇರಬಾರದು. ವಿಧಾನಸಭೆ, ಲೋಕಸಭೆಯಲ್ಲಿ ಮೀಸಲಾತಿ ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ಇರಬೇಕೆಂದು ಸಂವಿಧಾನ ಹೇಳುತ್ತದೆ. ಮೋದಿ ಬಂದ್ಮೇಲೆ 10 ರಷ್ಟು ಮೀಸಲಾತಿ ನೀಡಿದ್ದಾರೆ. ಇದನ್ನು ಯಾರು ಕೂಡ ವಿರೋಧ ಮಾಡಿಲ್ಲ. ಇದು ದೊಡ್ಡತನ ಅಂತ ಹೇಳಬೇಕಾ, ದಡ್ಡತನ ಅಂತ ಹೇಳಬೇಕಾ, ತಿಳಿವಳಿಕೆ ಇರಲಿಲ್ವಾ ಅಂತ ಗೊತ್ತಿಲ್ಲ ಎಂದರು.

ಸಂವಿಧಾನ ತಿದ್ದುಪಡಿ ಆಗೋವರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ‌ ಇರಲಿಲ್ಲ. ಮೀಸಲಾತಿ ವಿರೋಧ ಮಾಡಿದವರು ಬಿಜೆಪಿಯವರು. ಮೀಸಲಾತಿ ವಿರುದ್ಧ ಬಿಜೆಪಿ ನಾಯಕ ರಾಮ ಜೋಯಿಷ್ ಕೋರ್ಟ್​​​​ಗೆ ಅರ್ಜಿ ಹಾಕಿದ್ದರು. ಈ ರೀತಿ ಅರ್ಜಿ ಹಾಕಬಾರದೆಂದು ಬಿಜೆಪಿಯವರು ತಡೆದ್ರಾ? ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದವರು ಬಿಜೆಪಿ. ಇದನ್ನು ನಾನು ಹೇಳಿದ್ರೆ ನನ್ನನ್ನ ವಿರೋಧ ಮಾಡ್ತಾರೆ. ಮೀಸಲಾತಿ ವಿರೋಧ ಮಾಡಿದ ಪಕ್ಷದಲ್ಲಿ ನಮ್ಮವರು ಹೋಗ್ತಾರೆ ಎಂದರು.

ತಮಿಳುನಾಡಿನ ದ್ರಾವಿಡ ಕಳಗಂ ಅಧ್ಯಕ್ಷ ವೀರಮಣಿ, ಹಿರಿಯ ನ್ಯಾಯವಾದಿ ರವಿವರ್ಮ ಕುಮಾರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಮತ್ತಿತರರು ಹಾಜರಿದ್ದರು.

ಓದಿ :ಉಸ್ತುವಾರಿ ಕೈ ತಪ್ಪಿದರೂ ತವರು ಜಿಲ್ಲೆಯಲ್ಲೇ ಧ್ವಜಾರೋಹಣ ಅವಕಾಶ ದಕ್ಕಿಸಿಕೊಂಡ ಸಚಿವ ಆನಂದ್‌ ಸಿಂಗ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.