ETV Bharat / state

9 ಬಾರಿ ಚುನಾವಣಾ ಎದರಿಸಿದ್ದೇನೆ, ಅಧಿಕಾರಕ್ಕಾಗಿ ಒತ್ತಡ ತಂತ್ರ ನಡೆಸಿಲ್ಲ: ಸಚಿವಾಕಾಂಕ್ಷಿ ಆರಗ ಜ್ಞಾನೇಂದ್ರ - ಆರಗ ಜ್ಞಾನೇಂದ್ರ ಲೇಟೆಸ್ಟ್ ನ್ಯೂಸ್

ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಮೇಲೆ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಸಚಿವ ಸ್ಥಾನಕ್ಕಾಗಿ ನಾಯಕರು ಬಿಎಸ್​ವೈ ಬಳಿ ತೆರಳುತ್ತಿದ್ದಾರೆ. ಅದರಂತೆ ಇಂದು ಕೂಡ ಶಾಸಕ ಆರಗ ಜ್ಞಾನೇಂದ್ರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಆರಗ ಜ್ಞಾನೇಂದ್ರ
Araga jnanendra
author img

By

Published : Jul 29, 2021, 6:52 PM IST

ಬೆಂಗಳೂರು: ಶಾಸಕನಾಗಿ ನಾನು ಬಿಜೆಪಿಯಲ್ಲಿ ಹಿರಿಯನಾಗಿದ್ದೇನೆ. 9 ಬಾರಿ ಚುನಾವಣೆಯಲ್ಲಿ ನಿಂತು ನಾಲ್ಕನೇ ಬಾರಿ ತೀರ್ಥಹಳ್ಳಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಹಿರಿಯರು ಮೆಚ್ಚುವಂತಹ ಕೆಲಸ ಮಾಡಿದ್ದೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಆರಗ ಜ್ಞಾನೇಂದ್ರ ಹೇಳಿದರು.

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ನಾನು ಒತ್ತಡ, ತಂತ್ರ, ಲಾಬಿ ಮಾಡಿಲ್ಲ. ನಾನು ಶ್ರಮ ಪಟ್ಟು ಬಿಎಸ್​​​ವೈ ಜೊತೆ ಪಕ್ಷ ಕಟ್ಟಿದ್ದೇನೆ. ಹಾಗಾಗಿ ಪಕ್ಷದ ಹಿರಿಯ ನಾಯಕರಿಗೆ ಅಧಿಕಾರಕ್ಕಾಗಿ ಒತ್ತಡ ಹಾಕಿಲ್ಲ. ಈಗಲೂ ಒತ್ತಡ ಹೇರಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನ ಸಿಗುವ ಭರವಸೆ ಇದೆ :

ಖಂಡಿತವಾಗಿಯೂ ಈ ಬಾರಿ ನಮ್ಮ ಹಿರಿಯರು ನನ್ನ ಮಂತ್ರಿಯಾಗಿ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಉಸ್ತುವಾರಿಗಳನ್ನು ಭೇಟಿ ಮಾಡಿಲ್ಲ. ಹಿರಿಯರಿಗೆ, ನಮ್ಮ ಸಂಘಟನೆ, ಸಿಎಂ ಬೊಮ್ಮಾಯಿಗೆ ನಾನು ಏನು ಅಂತ ಗೊತ್ತಿದೆ. ಹಿರಿಯ ಅಂತ ತೋರಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ಹಾಗಾಗಿ ಸಹಜವಾಗಿ ಸ್ಥಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್​ವೈ ರಾಜೀನಾಮೆ ನೋವು ತಂದಿದೆ:

ಬಿಎಸ್​ವೈ ರಾಜೀನಾಮೆ ನೀಡಿರುವುದು ನೋವು ತಂದಿದೆ. ಆದರೆ ಸಿಎಂ ಸ್ಥಾನಕ್ಕೆ ಬೊಮ್ಮಾಯಿಯವರು ಆಯ್ಕೆಯಾಗಿರುವುದು ಖುಷಿ ತಂದಿದೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಉತ್ತಮ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.