ETV Bharat / state

ಹೊಟೇಲ್ ತಿಂಡಿ ತಿನಿಸುಗಳ ಮೇಲೆ ಶೇ 10 ರಷ್ಟು ಬೆಲೆ ಹೆಚ್ಚಳ.. - Hotel Food Prices Rise due to oil price increase

ಸಂಜೆ ನಡೆದ ಸಭೆಯಲ್ಲಿ 100 ಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಭಾಗಿಯಾಗಿದ್ದರು. ಸಭೆಗೂ ಮೊದಲೇ ಕೂಡ ಕೆಲ ಹೋಟೆಲ್​​ಗಳು ದರ ಏರಿಕೆ ಮಾಡಿವೆ. ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸರಿದೂಗಿಸಲು ಹೋಟೆಲ್ ಉದ್ಯಮ ದರ ಏರಿಕೆಗೆ ಕಾರಣವಾಗಿದೆ.

ಹೊಟೇಲ್ ತಿಂಡಿ ತಿನಿಸುಗಳ ಮೇಲೆ ಶೇ 10 ರಷ್ಟು ಬೆಲೆ ಹೆಚ್ಚಳ..

author img

By

Published : Apr 4, 2022, 10:48 PM IST

ಬೆಂಗಳೂರು: ಅಡುಗೆ ಎಣ್ಣೆ, ಕಾಫೀ ಪುಡಿ, ಗ್ಯಾಸ್ ಮುಂತಾದ ಆಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹೋಟೆಲ್​ ಮಾಲೀಕರಿಗೆ ನುಂಗಲಾರದ ತುತ್ತಾದಂತಾಗಿದೆ. ಆದರೆ, ಈ ಸಂದರ್ಭದಲ್ಲಿ ಹೋಟೆಲ್​​ಗಳ ಬೆಲೆ ಏರಿಕೆಯು ಅನಿವಾರ್ಯವಾಗಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶೇಕಡ 10 ರಷ್ಟು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.

ಸಂಜೆ ನಡೆದ ಸಭೆಯಲ್ಲಿ 100 ಕ್ಕೂ ಹೆಚ್ಚು ಹೋಟೆಲ್ ಮಾಲೀಕರು ಭಾಗಿಯಾಗಿದ್ದರು. ಸಭೆಗೂ ಮೊದಲೇ ಕೂಡ ಕೆಲ ಹೋಟೆಲ್​​ಗಳು ದರ ಏರಿಕೆ ಮಾಡಿವೆ. ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸರಿದೂಗಿಸಲು ಹೋಟೆಲ್ ಉದ್ಯಮ ದರ ಏರಿಕೆಗೆ ಕಾರಣವಾಗಿದೆ. ವಾಣಿಜ್ಯ ಸಿಲಿಂಡರ್ ದರ ಏರಿಕೆಯೇ ಹೋಟೆಲ್​​​ಗಳಿಗೆ ಹೆಚ್ಚಿನ ಹೊರೆ ಆಗುತ್ತಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

ಹೊಟೇಲ್ ತಿಂಡಿ ತಿನಿಸುಗಳ ಮೇಲೆ ಶೇ 10 ರಷ್ಟು ಬೆಲೆ ಹೆಚ್ಚಳ..

1,500 ಕ್ಕೂ ಹೆಚ್ಚು ಹೋಟೆಲ್ ಕ್ಲೋಸ್: ಕೋವಿಡ್ ಕಾಲಗಟ್ಟದಲ್ಲಿ 1,500 ಕ್ಕೂ ಹೆಚ್ಚು ಹೋಟೆಲ್ ಬಂದ್​ ಆಗಿದೆ. ಚೇತರಿಕೆ ಕಾಣುತ್ತಿದ್ದ ದಿನಗಳಲ್ಲೇ ವಸ್ತುಗಳ ದರ ಏರಿಕೆ ಹೊರೆಯಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದಿಂದ ಮೌಖಿಕ ಸಮ್ಮತಿ: ಊಟ, ತಿಂಡಿ, ಕಾಫೀ, ಟೀ, ಚಾಟ್ಸ್ ಎಲ್ಲ ದರದಲ್ಲೂ ಏರಿಕೆ ಆಗಲಿದೆ. ಬೆಲೆ ಏರಿಕೆ ಬಗ್ಗೆ ಸರ್ಕಾರದ ಮೌಖಿಕ ಸಮ್ಮತಿ ಕೇಳಿ ಸ್ವಲ್ಪ ಮಟ್ಟದ ದರ ನಿಗದಿ ಮಾಡಲು ಹೋಟೆಲ್ ಉದ್ಯಮ ಸಿದ್ಧವಾಗಿದೆ ಎಂದು ರಾವ್ ತಿಳಿಸಿದ್ದಾರೆ.

ಬೆಲೆ ಏರಿಕೆ ಅನಿವಾರ್ಯ: ಗ್ರಾಹಕರಿಗೂ ಹೊರೆಯಾಗದಂತೆ ಹೋಟೆಲ್ ಉದ್ಯಮಕ್ಕೂ ಹೊರೆಯಾಗದಂತೆ ಸರಿದೂಗಿಸಿ ದರ ಏರಿಕೆ ಮಾಡುವ ಪ್ಲಾನ್ ಇದಾಗಿದೆ. ಗ್ರಾಹಕರಿಗೆ ಆರ್ಥಿಕ ಹೊರೆಯಾದರೂ ಬೆಲೆ ಏರಿಕೆ ಅನಿವಾರ್ಯ ಎಂದು ಮಾಹಿತಿ ನೀಡಿದ್ದಾರೆ.

ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿಲ್ಲ: ಪ್ರತಿ ಆಹಾರ ತಿನಿಸಿನ ಮೇಲೆ ಶೇ 10 ರಷ್ಟು ದರ ಏರಿಕೆಯಾಗಿದೆ. ಅಗತ್ಯ ಸಾಮಾಗ್ರಿಗಳ ದರ ಇಳಿಕೆಯಾಗಬಹುದು ಎಂದು ಹೋಟೆಲ್ ಮಾಲೀಕರು ಕಾಯುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ಇಳಿಕೆ ಆಗುತ್ತಿಲ್ಲ. ನೀರಿನ ಬಿಲ್, ವಿದ್ಯುತ್ ಬಿಲ್, ಹಾಲಿನ ಬಿಲ್ ಎಲ್ಲವೂ ದರ ಏರಿಕೆ ಮಾಡಲಾಗುತ್ತಿದೆ ಮತ್ತು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.