ETV Bharat / state

ಹೈಕೋರ್ಟ್ ಸಿಬ್ಬಂದಿಗೆ ಹನಿಟ್ರ್ಯಾಪ್, ಎರಡು ಲಕ್ಷಕ್ಕೆ ಡಿಮ್ಯಾಂಡ್: ಇಬ್ಬರು ಮಹಿಳೆಯರು ಸೇರಿ 10 ಜನ ಅರೆಸ್ಟ್

ಅಕ್ಟೋಬರ್ 30ರಂದು ಕಾವೇರಿಪುರ ವಾರ್ಡ್‌ನ ರಂಗನಾಥಪುರದಲ್ಲಿ ಖಾಸಗಿ ವಿಡಿಯೋ ಚಿತ್ರೀಕರಿಸಿ ಹೈಕೋರ್ಟ್ ಉದ್ಯೋಗಿ ಜೈರಾಮ್​ ಎಂಬುವವರಿಗೆ ಎರಡು ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿದ್ದರು.

honeytrap-case-10-people-arrested-including-two-women-in-bengaluru
ಹೈಕೋರ್ಟ್ ಸಿಬ್ಬಂದಿಗೆ ಹನಿಟ್ರ್ಯಾಪ್, ಎರಡು ಲಕ್ಷಕ್ಕೆ ಡಿಮ್ಯಾಂಡ್: ಇಬ್ಬರು ಮಹಿಳೆಯರು ಸೇರಿ 10 ಜನ ಅರೆಸ್ಟ್
author img

By

Published : Nov 5, 2022, 10:48 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೈಕೋರ್ಟ್ ಸಿಬ್ಬಂದಿಯನ್ನೇ ಖೆಡ್ಡಾಗೆ ಕೆಡವಿ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದ ಹನಿಟ್ರ್ಯಾಪ್ ಗ್ಯಾಂಗ್ ನ 10 ಮಂದಿಯನ್ನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸಿದ್ದ, ಅನುರಾಧ, ಕಾವ್ಯ ಎಂಬುವವರು ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಹೈಕೋರ್ಟ್ ಉದ್ಯೋಗಿ ಜೈರಾಮ್ ಎಂಬುವರನ್ನು ಈ ಗ್ಯಾಂಗ್​ ಖೆಡ್ಡಾಗೆ ಕೆಡವಿತ್ತು. ಅನು ಎಂಬಾಕೆ ನಂಬಿ ಜೈರಾಮ್ ಮೋಸಕ್ಕೆ ಒಳಗಾಗಿದ್ದರು.

ಅಕ್ಟೋಬರ್ 30ರಂದು ಕಾವೇರಿಪುರ ವಾರ್ಡ್‌ನ ರಂಗನಾಥಪುರದಲ್ಲಿ ಖಾಸಗಿ ವಿಡಿಯೋ ಚಿತ್ರೀಕರಿಸಿ ಜೈರಾಮ್​ಗೆ ಎರಡು ಲಕ್ಷ ರೂ. ಡಿಮ್ಯಾಂಡ್ ಇಟ್ಟಿದ್ದರು. ಈ ಸಂಬಂಧ ಜೈರಾಮ್ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

honeytrap-case-10-people-arrested-including-two-women-in-bengaluru
ಹೈಕೋರ್ಟ್ ಸಿಬ್ಬಂದಿಗೆ ಹನಿಟ್ರ್ಯಾಪ್, ಎರಡು ಲಕ್ಷಕ್ಕೆ ಡಿಮ್ಯಾಂಡ್: ಇಬ್ಬರು ಮಹಿಳೆಯರು ಸೇರಿ 10 ಜನ ಅರೆಸ್ಟ್

ಪ್ರಕರಣದ ಹಿನ್ನೆಲೆ?: ಎರಡು ವರ್ಷದ ಹಿಂದೆ ಪ್ರಕರಣದ ಸಂಬಂಧ ಜೈರಾಮ್‌ಗೆ ಅನು ಪರಿಚಯವಾಗಿದ್ದಳು. ಶಾರ್ಟ್ ಸರ್ಕ್ಯೂಟ್‌ನಿಂದ ಟಿವಿ, ಫ್ರಿಡ್ಜ್ ಎಲ್ಲ ಸುಟ್ಟು ಹೋಗಿದೆ ಎಂದು ಹೇಳಿ ಹೈಕೋರ್ಟ್ ಬಳಿ ಬಂದು ಜೈರಾಮ್‌ನಿಂದ 10 ಸಾವಿರ ಸಾಲ ಪಡೆದುಕೊಂಡಿದ್ದಳು. ಆ ಹಣವನ್ನು ಜೈರಾಮ್‌ಗೆ ಹಿಂದಿರುಗಿಸಿದ್ದಳು.

ನಂತರ ಮತ್ತೆ 5 ಸಾವಿರ ಸಾಲ ಕೇಳಿದ್ದಳು. ಇದಾದ ಬಳಿಕ ಅನು ಕರೆದಿದ್ದ ಮನೆಗೆ ಜೈರಾಮ್ 5 ಸಾವಿರ ರೂ. ಹಣದೊಂದಿಗೆ ಬಂದಿದ್ದನು. ಹಣ ಕೊಟ್ಟು ಮನೆಯಿಂದ ಜೈರಾಮ್ ಹೊರ ಬಂದಿದ್ದನು. ಈ ವೇಳೆ ಬಂದ ನಾಲ್ವರು ಮತ್ತೆ ಜೈರಾಮ್‌ನನ್ನು ಮನೆಯೊಳಗೆ ಎಳೆದೊಯ್ದು, ಥಳಿಸಿ 2 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ, ಜೈರಾಮ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿ ಹೆದರಿಸಿದ್ದರು.

ಹಲವರಿಗೆ ಖೆಡ್ಡಾ ತೋಡಿರುವ ಪ್ರಮುಖ ಆರೋಪಿ: ಇತ್ತ, ಹಲ್ಲೆಗೊಳಗಾದ ನಂತರ ತನ್ನ ಬಳಿ ಇದ್ದ 5 ಸಾವಿರ ರೂ. ಕಿತ್ತುಕೊಂಡು ರಾಬರಿ ಮಾಡಿದ್ದಾರೆಂದು ಜೈರಾಮ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪಿಎಸ್ಐ ಹನುಮಂತರಾಜು ಪ್ರಕರಣದ ತನಿಖೆಯನ್ನ ಕೈಗೊಂಡು ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಸಿದ್ದ ಮೂಲತಃ ದಾವಣಗೆರೆಯವನಾಗಿದ್ದಾನೆ. ರೌಡಿಸಂ ಹಿನ್ನೆಲೆಯಲ್ಲಿ ಭಾಗಿಯಾಗಿದ್ದ ಈತನ ಮೇಲೆ ಎರಡು ರಾಬರಿ ಸೇರಿದಂತೆ ಹಲವು ಪ್ರಕರಣಗಳು ನಗರದ ಹಲವು ಠಾಣೆಗಳಲ್ಲಿ ದಾಖಲಾಗಿವೆ. ಸದ್ಯ ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಇದೇ ಗ್ಯಾಂಗ್ ಇನ್ನೂ ಹಲವರಿಗೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಷ್ಟು ದಿನ ಬೂಟ್​ ನೆಕ್ಕಿದ್ದೀರಿ ಎಂದು ಸ್ವಕ್ಷೇತ್ರ ಜನರ ವಿರುದ್ಧವೇ ಶಾಸಕಿಯ ವಿವಾದಿತ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.