ಬೆಂಗಳೂರು: 'ಹಿಜಾಬ್' ಸದ್ಯ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ. ಹೈಕೋರ್ಟ್ ಅಂಗಳದಲ್ಲಿ ಚರ್ಚೆಯಾಗುತ್ತಿರುವ ಹಿಜಾಬ್ ವಿಚಾರ ಮೊದಲು ಉಡುಪಿಯಲ್ಲಿ ಕೇವಲ 6 ವಿದ್ಯಾರ್ಥಿನಿರಿಂದ ಶುರುವಾಯಿತು. ಅಲ್ಲಿಂದ ಶುರುವಾದ ಸಣ್ಣ ಕಿಡಿ ನಿಧಾನವಾಗಿ ಇತರ ಜಿಲ್ಲೆಗಳಿಗೂ ವೈರಸ್ನಂತೆ ಹರಡಿ ಬಿಟ್ಟಿದೆ. ಪರಿಣಾಮ ಗಲಾಟೆ ಗದ್ದಲ ಹೆಚ್ಚಾದ ಕಾರಣಕ್ಕೆ ಇದನ್ನ ನಿಯಂತ್ರಿಸಲು ಸರ್ಕಾರ ಶಾಲಾ - ಕಾಲೇಜುಗಳಿಗೂ ರಜೆ ಘೋಷಣೆ ಮಾಡಿತ್ತು.
ಬಳಿಕ ಇದೀಗ ಕೋರ್ಟ್ ಸೂಚನೆಯಂತೆ ಶಾಲಾ - ಕಾಲೇಜುಗಳನ್ನ ಹಂತ ಹಂತವಾಗಿ ಶುರು ಮಾಡಲಾಯಿತು. ನಿನ್ನೆಯಷ್ಟೇ ತರಗತಿಯಲ್ಲಿ ಹಿಜಾಬ್ ಅವಕಾಶ ಇಲ್ಲದ ಹಿನ್ನೆಲೆ ಶಾಲೆಗೆ ಬಂದ ಬಳಿಕ ಹಿಜಾಬ್ ಹಾಗೂ ಬುರ್ಕಾ ತಗೆದು ತರಗತಿಗೆ ಹಾಜರಾಗಲು ಪತ್ಯೇಕ ಸ್ಥಳ ಅಥವಾ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರ ಸೂಚನೆ ನೀಡಿದೆ.
ಇದೀಗ ರಾಜ್ಯದಲ್ಲಿ ಹಿಜಾಬ್ ಸಂಘರ್ಷ ತಾರಕ್ಕೇರಿದ ಹಿನ್ನೆಲೆ ಹಿಜಾಬ್ ಸಂಘರ್ಷ ಶುರುಮಾಡುತ್ತಿರುವವರ ಅಂಕಿ - ಸಂಖ್ಯೆಯನ್ನ ಶಿಕ್ಷಣ ಇಲಾಖೆ ಕಲೆ ಹಾಕಿದೆ. ರಾಜ್ಯದಲ್ಲಿ ಹಿಜಾಬ್ ಗಲಾಟೆಗೆ ಮುಂದಾಗಿರೋ ವಿದ್ಯಾರ್ಥಿನಿಯರು ಸಂಖ್ಯೆ ಎಷ್ಟು? ರಾಜ್ಯದ ಎಷ್ಟು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಗಲಾಟೆ ಇದೆ..? ಅನ್ನೋ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ : ಹತ್ಯೆಗೂ ಮುನ್ನ ಹರ್ಷನಿಗೆ ಹುಡುಗಿಯರಿಂದ ವಿಡಿಯೋ ಕಾಲ್: ಕೊಲೆ ರಹಸ್ಯ ಬಿಚ್ಚಿಟ್ಟ ಸ್ನೇಹಿತ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 82 ಸಾವಿರ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 500-600 ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಫೈಟ್ ಮಾಡುತ್ತಿದ್ದಾರಂತೆ. ಶೇ.1 ಕ್ಕಿಂತ ಕಡಿಮೆ ಪ್ರತಿಶತ ವಿದ್ಯಾರ್ಥಿನಿಯರಿಂದ ಹಿಜಾಬ್ ಜಟಾಪಟಿ ಮುಂದುವರೆದಿದೆ.
82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಪದವಿ ಪೂರ್ವ ಕಾಲೇಜಿಗೆ 81,400 ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತಗೆದು ತರಗತಿಗೆ ಬರುತ್ತಿದ್ದು, ಯಾವುದೇ ಕಿರಿಕ್ ಮಾಡುತ್ತಿಲ್ಲ. ಕೇವಲ 500-600 ವಿದ್ಯಾರ್ಥಿನಿಯರು ಹಿಜಾಬ್ ಬೇಕು ಎನ್ನುವ ಹಠ ಮಾಡುತ್ತಿದ್ದಾರಂತೆ.