ETV Bharat / state

ನಗರ ಪ್ರದೇಶದಲ್ಲಿ ಹೆಚ್ಚಾದ ನಿರ್ವಸಿತರು: ರಾತ್ರಿ ತಂಗುದಾಣ ನಿರ್ಮಿಸಲು ಹೈಕೋರ್ಟ್ ನಿರ್ದೇಶನ - Night Shelter

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಕೋರಿ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High-court
ಹೈಕೋರ್ಟ್
author img

By

Published : Jul 22, 2021, 9:02 PM IST

ಬೆಂಗಳೂರು: ರಾಜ್ಯದೆಲ್ಲೆಡೆ ನಗರ ಪ್ರದೇಶಗಳಲ್ಲಿನ ವಸತಿ ರಹಿತರು ರಾತ್ರಿ ವೇಳೆಯಲ್ಲೂ ಚಳಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ಸರ್ಕಾರ 3 ತಿಂಗಳಲ್ಲಿ 120 ರಾತ್ರಿ ತಂಗುದಾಣ (ನೈಟ್ ಶೆಲ್ಟರ್) ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಪ್ರಸ್ತುತ 46 ತಂಗುದಾಣಗಳಿದ್ದು, ಹೆಚ್ಚುವರಿಯಾಗಿ 166 ತಾಣಗಳನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಕೋರಿ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಯೋಜನಾಧಿಕಾರಿ ಸಲ್ಲಿಸಿದ್ದ ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಸರ್ಕಾರ 2021ರ ಫೆಬ್ರವರಿಯಲ್ಲಿ ನಡೆಸಿರುವ ಸಮೀಕ್ಷೆಯಂತೆ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ವಸತಿರಹಿತರಿಗೆ 166 ರಾತ್ರಿ ತಂಗುದಾಣಗಳ ಅಗತ್ಯವಿದೆ ಎಂದಿದೆ. ಅದರಂತೆ ಸರ್ಕಾರ ಒಟ್ಟು 120 ನೈಟ್ ಶೆಲ್ಟರ್ಸ್ ನಿರ್ಮಾಣಕ್ಕೆ ಕೂಡಲೇ ಅನುಮೋದನೆ ನೀಡಬೇಕು. ಈ ಶೆಲ್ಟರ್ ಗಳನ್ನು ಆದ್ಯತೆ ಮೇರೆಗೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು ಎಂದು ನಿರ್ದೇಶಿಸಿತು.

ವರದಿಯಂತೆ ಬೆಂಗಳೂರು ನಗರಕ್ಕೆ 84 ನೈಟ್ ಶೆಲ್ಟರ್ಸ್ ಅಗತ್ಯವಿದೆ. ಆದರೆ 10 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರಕ್ಕೆ ತಲಾ 9 ಶೆಲ್ಟರ್ಸ್ ಅಗತ್ಯವಿದ್ದು, ಅಲ್ಲಿ ಸದ್ಯ ಒಂದೊಂದೇ ತಂಗುದಾಣಗಳಿವೆ. ಆದ್ದರಿಂದ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ 42 ರಾತ್ರಿ ತಂಗುದಾಣ ನಿರ್ಮಿಸಬೇಕು ಮತ್ತು ಇನ್ನುಳಿದ 42ನ್ನು ಆರು ತಿಂಗಳೊಳಗೆ ಪ್ರಾರಂಭಿಸಬೇಕು. ಉಳಿದ ನಗರ ಪ್ರದೇಶಗಳಲ್ಲಿ ಮೂರು ತಿಂಗಳೊಳಗೆ ರಾತ್ರಿ ತಂಗುದಾಣಗಳನ್ನು ಪ್ರಾರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಆದೇಶಿಸಿತು.

ತಂಗುದಾಣಗಳಲ್ಲಿ ಮೂಲಸೌಕರ್ಯ ಕೊರತೆ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಪ್ರಸ್ತತ ಕಾರ್ಯ ನಿರ್ವಹಿಸುತ್ತಿರುವ ರಾತ್ರಿ ತಂಗುದಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ ಎಂದರು. ಮಾಹಿತಿ ಪರಿಗಣಿಸಿದ ಪೀಠ, ತಂಗುದಾಣಗಳ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿತು. ಅಲ್ಲದೇ, ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾ ಪ್ರಾಧಿಕಾರಗಳಿಗೆ ಸೂಚನೆ ನೀಡಬೇಕು. ಮೂಲಸೌಕರ್ಯದ ಕುರಿತು ಪರಿಶೀಲಿಸಿ ಆಗಸ್ಟ್ 24ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.

ಇದನ್ನೂ ಓದಿ: ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿದ್ದಾಳೆ 'ಹುಲಿಗೆಮ್ಮ': ಪ್ರವಾಸಿಗರಿಗಿದು ರಮ್ಯ ತಾಣ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.