ETV Bharat / state

ಒಂದೇ ಹೆಸರಿನಲ್ಲಿ ಮತ್ತೊಂದು ಸಂಘ ಕಟ್ಟಲು ಅವಕಾಶವಿಲ್ಲ: ಹೈಕೋರ್ಟ್‌ - ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ

ಬೆಂಗಳೂರು ನಗರ ಡಿಸ್ಟ್ರಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್’ ಮತ್ತು ‘ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್’ಗಳ ನಡುವೆ ಇರುವ ವ್ಯತ್ಯಾಸವೆಂದರೆ ‘ಜಿಲ್ಲಾ ಮತ್ತು ಡಿಸ್ಟ್ರಕ್ಟ್’ ಎಂಬ ಪದಗಳು. ಈ ಎರಡೂ ಶಬ್ದಗಳು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಒಂದೇಯಾಗಿದೆ. ಇದೊಂದನ್ನು ಹೊರತುಪಡಿಸಿ, ಸಂಘಗಳ ಹೆಸರಿನಲ್ಲಿ ಬೇರೆ ಯಾವುದೇ ಬದಲಾವಣೆಯಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್​
ಹೈಕೋರ್ಟ್​
author img

By

Published : Oct 19, 2022, 10:16 PM IST

ಬೆಂಗಳೂರು: ಒಂದು ಹೆಸರಿನಲ್ಲಿ ಒಮ್ಮೆ ಸೊಸೈಟಿ ಅಥವಾ ಸಂಘ ನೋಂದಣಿಯಾಗಿದ್ದರೆ ಅದೇ ಹೆಸರಿನ ಮತ್ತೊಂದು ಸೊಸೈಟಿ ನೋಂದಣಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ತನ್ನ ನೋಂದಣಿಯನ್ನು ರದ್ದುಪಡಿಸಿದ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಯ ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ಹಾಗೂ ಅದರ ಆರು ಸಮಿತಿ ಸದಸ್ಯರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಂಘ ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 2020ರ ಫೆ.28ರಂದು ನೋಂದಣಿಯಾಗಿತ್ತು. ಅದಾದ ನಾಲ್ಕು ತಿಂಗಳ ಬಳಿಕ 2020ರ ಜೂ.16ರಂದು ಬೆಂಗಳೂರು ನಗರ ಡಿಸ್ಟ್ರಿಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೋಂದಣಿಯಾಗಿತ್ತು. ನಂತರ ಅರ್ಜಿದಾರ ಸಂಘದ ವಿರುದ್ಧ ಪ್ರತಿವಾದಿ ಸಂಘ ಬೆಂಗಳೂರು ನಗರ ಡಿಸ್ಟ್ರಿಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ 2020ರ ಅ.19ರಂದು ದೂರು ನೀಡಿತ್ತು. ಅರ್ಜಿದಾರ ಸಂಘ ಪ್ರಧಾನ ಕಾರ್ಯದರ್ಶಿಯು, ವೈ ಎಂ ಬಾಲಾಜಿ ವೆಂಕಟೇಶ್ ಮತ್ತು ಡಿ. ಸುರೇಶ್ ಗೌಡ ಅವರ ಸಹಿಯನ್ನು ಫೋರ್ಜರಿ ಮಾಡಿ, ತಮ್ಮ ಸಂಘವನ್ನು ನೋಂದಣಿ ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು.

ವಿಚಾರಣಾಧಿಕಾರಿಯು ವರದಿ ನೀಡಿ, ಅರ್ಜಿದಾರ ಸಂಸ್ಥೆಯ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ತಿಳಿಸಿದ್ದರು. ಅದನ್ನು ಆಧರಿಸಿ ಅರ್ಜಿದಾರ ಸಂಘದ ನೋಂದಣಿಯನ್ನು ರದ್ದುಪಡಿಸಿ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಬೆಂಗಳೂರು ನಗರ ಡಿಸ್ಟ್ರಿಕ್ಟ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ಗಳ ನಡುವೆ ಇರುವ ವ್ಯತ್ಯಾಸವೆಂದರೆ ಜಿಲ್ಲಾ ಮತ್ತು ಡಿಸ್ಟ್ರಿಕ್ಟ್ ಎಂಬ ಪದಗಳು. ಈ ಎರಡೂ ಶಬ್ದಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಒಂದೇಯಾಗಿದೆ. ಇದೊಂದನ್ನು ಹೊರತುಪಡಿಸಿ, ಸಂಘಗಳ ಹೆಸರಿನಲ್ಲಿ ಬೇರೆ ಯಾವುದೇ ಬದಲಾವಣೆಯಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಸಂಘ ನೋಂದಣಿಯಾಗಿದೆ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 7 ಪ್ರಕಾರ, ಮೊದಲೇ ನೋಂದಣಿಯಾಗಿರುವ ಸಂಸ್ಥೆಯ ಹೆಸರಿನಲ್ಲಿ ಅಥವಾ ಅದಕ್ಕೆ ಹೋಲಿಕೆಯಾಗುವಂತ ಹೆಸರಿನಲ್ಲಿ ಮತ್ತೊಂದು ಸಂಸ್ಥೆಯನ್ನು ನೋಂದಣಿ ಮಾಡಲು ಅವಕಾಶವಿಲ್ಲ. ಪ್ರಕರಣದಲ್ಲಿ ಪ್ರತಿವಾದಿ ಸಂಘ ನೋಂದಣಿಗೂ ನಾಲ್ಕು ತಿಂಗಳ ಮೊದಲೇ ಅರ್ಜಿದಾರ ಸಂಘ ನೋಂದಣಿಯಾಗಿದೆ. ಇದರಿಂದ ಪ್ರತಿವಾದಿ ಸಂಘವನ್ನು ನೋಂದಣಿ ಮಾಡುವ ಮೂಲಕ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಲೋಪ ಎಸಗಿದ್ದಾರೆ ಎಂದು ತಿಳಿಸಿದ ಹೈಕೋರ್ಟ್, ಪ್ರತಿವಾದಿ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಿ ಆದೇಶಿಸಿದೆ.

ಇದನ್ನೂ ಓದಿ: ಆನೇಕಲ್ ತಾಲೂಕಿನ 67 ಎಕರೆ ಗೋಮಾಳ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.