ಬೆಂಗಳೂರು: ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಮನೆ ಖರೀದಿಸಲು ತ್ರಿಪಕ್ಷೀಯ ಒಪ್ಪಂದದ ಮೂಲಕ ಸಾಲ ಮಾಡಿದ್ದ 31 ಮಂದಿಯ ಸಿಬಿಲ್ ಸ್ಕೋರ್ನ್ನು ಮುಂದಿನ 60 ದಿನಗಳಲ್ಲಿ ಮರು ಸ್ಥಾಪಿಸುವಂತೆ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ(ಸಿಬಿಲ್)ಗೆ ಹೈಕೋರ್ಟ್ ಸೂಚನೆ ನೀಡಿದೆ.
ಮಂತ್ರಿ ಡೆವಲಪರ್ಸ್ ಪ್ರೈವೇಟ್ನಿಂದ ಮನೆ ಖರೀದಿಗಾಗಿ ಪಂಜಾಂಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಪಿಎನ್ಬಿಎಚ್ಎಫ್ಎಲ್)ನಿಂದ ತ್ರಿಪಕ್ಷೀಯ ಒಪ್ಪಂದದಲ್ಲಿ ಸಾಲ ಮಾಡಿದ್ದವರ ವಿರುದ್ಧ ವಸೂಲಾತಿ ಪ್ರಕ್ರಿಯೆ ಮುಂದಾಗಿದ್ದ ಬ್ಯಾಂಕ್ನ ಕ್ರಮ ಪ್ರಶ್ನಿಸಿ ಲಂಡನ್ನಿವಾಸಿಗಳಾದ ಅರವಿಂದ ಸಂತಾನಂ ಪ್ರಸಾದ್ ಸೇರಿದಂತೆ ಇತರ 30 ಮಂದಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರಿದ್ದ ನ್ಯಾಯಪೀಠ, ತ್ರಿಪಕ್ಷೀಯ ಒಪ್ಪಂದ ಮೂಲಕ ಸಾಲ ಮಾಡಿ ಮಂತ್ರಿ ಡೆವಲಪರ್ಸ್ಗೆ ಪಾವತಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಸೂಚಿಸಿದೆ.
ಜತೆಗೆ, ಮನೆ ಖರೀದಿಗಾಗಿ ಸಾಲ ಮಾಡಿ ಹಣ ಪಾವತಿಸಿರುವ ಗ್ರಾಹಕರ ಈಗಾಗಲೇ ರಿಯಲ್ ಎಸ್ಟೇಟ್ ನಿಯಂತ್ರಣಾ ಪ್ರಾಧಿಕಾರ(ರೇರಾ)ಕ್ಕೆ ಮನವಿ ಮಾಡಿದ್ದಾರೆ. ಮನೆ ಖರೀದಿದಾರರ ಹೆಸರಿನಲ್ಲಿ ಪಡೆದಿರುವ ಹಣ ಹಿಂದಿರುಗಿಸುವಂತೆ ರೇರಾ ಹೀಗಾಗಲೇ ಮಂತ್ರಿ ಡೆವಲಪರ್ಸ್ಗೆ ನಿರ್ದೇಶನ ನೀಡಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸಾಲಗಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಪಿಎನ್ಬಿಎಚ್ಎಫ್ಎಲ್ ಮತ್ತು ಸಿಬಿಲ್ಗೆ ನಿರ್ದೇಶನ ನೀಡಿದ್ದರೂ ರೇರಾ ನೀಡಿರುವ ಆದೇಶವನ್ನು ಜಾರಿ ಮಾಡಬೇಕು ಎಂದು ಮಂತ್ರಿ ಡೆವಲಪರ್ಸ್ಗೆ ಸೂಚಿಸಿದೆ. ಅಲ್ಲದೇ, ತ್ರಿಪಕ್ಷಿಯಾ ಒಪ್ಪಂದದ ಪ್ರಕಾರ ಮನೆ ಖರೀದಿದಾರರು ಪಡೆದ ಸಾಲವನ್ನು ಮಂತ್ರಿ ಡೆವಲಪರ್ಸ್ಗೆ ಪಾವತಿಸಿದ್ದಾರೆ. ಹೀಗಿರುವಾಗ ಸಾಲ ಮರು ಪಾವತಿಸುವಂತೆ ಪಿಎನ್ಬಿಎಚ್ಎಫ್ಎಲ್ ಅಧಿಕಾರಿಗಳು ಒತ್ತಡ ಹೇರುವಂತಿಲ್ಲ ಎಂದು ಪೀಠ ತಿಳಿಸಿದೆ.
ಪಿಎನ್ಬಿಎಚ್ಎಫ್ಎಲ್ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಸಾಲಗಾರರು ಮತ್ತು ಡೆವಲಪರ್ ಸಂಸ್ಥೆ ಜಂಟಿಯಾಗಿ ಜವಾಬ್ದಾರಿಯನ್ನು ಹೊರುತ್ತಾರೆ. ಹೀಗಾಗಿ ಮಂತ್ರಿ ಡೆವಲಪರ್ಸ್ನಿಂದ ಸಾಲ ವಸೂಲಿ ಮಾಡುವುದಕ್ಕೆ ಪಿಎನ್ಬಿಎಚ್ಎಫ್ಎಲ್ಗೆ ಮುಕ್ತ ಅವಕಾಶವಿರಲಿದೆ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಇದನ್ನೂ ಓದಿ : ಎರಡು ಸಾವಿರ ಬಟ್ಟೆಯನ್ನು ಕೆಡೆಸಿದ್ದ ಟೈಲರ್ಗೆ 10 ಸಾವಿರ ದಂಡ