ETV Bharat / state

ಚೀನಾ ಮಹಿಳೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್.. ಬೇಸಿಗೆಯಲ್ಲಿ ವಕೀಲರು ಕಪ್ಪು ಕೋಟ್ ಧರಿಸುವುದು ಕಡ್ಡಾಯವಲ್ಲ

author img

By

Published : Apr 27, 2023, 7:44 AM IST

ಬೇಸಿಗೆ ಸಮಯದಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ಅಥವಾ ಕಲಾಪದಲ್ಲಿ ಭಾಗಿಯಾಗುವ ವಕೀಲರು ಕಪ್ಪು ಕೋಟ್​ ಧರಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ವಕೀಲರ ಪರಿಷತ್ ತಿಳಿಸಿದೆ. ಇನ್ನೊಂದು ಪ್ರಕರಣದಲ್ಲಿ ವಿಸಾ ಅವಧಿ ಮುಗಿದರೂ ರಾಜ್ಯದಲ್ಲಿ ನೆಲೆಸಲು ಅವಕಾಶ ಕಲ್ಪಿಸಲು ಕೋರಿ ಚೀನಾ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಭಾರತ ಪ್ರವೇಶಕ್ಕೆ ಪಡೆದಿದ್ದ ವೀಸಾ ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿದ್ದ ಚೀನಿ ಮಹಿಳೆಯ ವಿಸಾ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಚೀನಾದ ಲೀ ಡಾಂಗ್ ಎಂಬ 44 ವರ್ಷದ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಹಾಜರಾಗಿ, ಮೇಲ್ಮನವಿದಾರೆ 2023ರ ಮಾ.3ರಂದು ಭಾರತ ಬಿಟ್ಟು ಕೆರೆಬಿಯನ್ ಸಮುದ್ರದ ಪೂರ್ವ ಭಾಗದಲ್ಲಿರುವ ಬಸ್ಸೆ ತೆರರೆ ದ್ವೀಪಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು. ಅದನ್ನು ಪರಿಗಣಿಸಿದ ವಿಭಾಗೀಯ ಪೀಠ, ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

ವ್ಯಾಪಾರಿ ವೀಸಾದಲ್ಲಿ 2019, ಜೂನ್‌ನಲ್ಲಿ ಭಾರತಕ್ಕೆ ಬಂದು ರಾಜ್ಯದ ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದ ಲೀ ಡಾಂಗ್ ಅವರ ವೀಸಾ ಅವಧಿ 2020ರ ಜುಲೈಗೆ ಮುಗಿದಿತ್ತು. ಆದ ಕಾರಣ ಭಾರತ ಬಿಟ್ಟು ತೆರಳುವಂತೆ ಕೇಂದ್ರ ಸರ್ಕಾರ 2019ರ ಅ.30ರಂದು ನೋಟಿಸ್ ನೀಡಿತ್ತು. ನಂತರ ಕೋವಿಡ್-19ರ ಕಾರಣ ಪರಿಗಣಿಸಿ ವೀಸಾ ಅವಧಿಯನ್ನು 2021ರ ಸೆ.30ರವರೆಗೆ ವಿಸ್ತರಿಸಲಾಗಿತ್ತು.

ತದನಂತರವೂ ಅವರು ಇಲ್ಲೇ ನೆಲೆಸಿ ವೀಸಾ ವಿಸ್ತರಣೆಗೆ ಕೋರಿದ್ದರು. ಆ ಕೋರಿಕೆ ನಿರಾಕರಿಸಿದ್ದ ವಲಸೆ ವಿಭಾಗದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಲೀ ಡಾಂಗ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠ, ಚೀನಾದ ವಿಮಾನಯಾನ ಪುನರ್ ಆರಂಭವಾಗುತ್ತಿದ್ದಂತೆಯೇ ಮೊದಲ ವಿಮಾನಕ್ಕೆ ಮಹಿಳೆಯನ್ನು ಹತ್ತಿಸುವಂತೆ ಕೇಂದ್ರ ಸರ್ಕಾರಕ್ಕೆ 2021ರ ಡಿ.3ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಲೀ ಡಾಂಗ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಬೇಸಿಗೆ ರಜೆಯಲ್ಲಿ ವಕೀಲರು ಕಪ್ಪು ಕೋಟ್ ಧರಿಸುವುದು ಕಡ್ಡಾಯವಲ್ಲ: ಬೇಸಿಗೆಯ ಕಾಲದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳನ್ನು ಹೊರತುಪಡಿಸಿ ವಿಚಾರಣಾ ನ್ಯಾಯಾಲಯಗಳನ್ನು ಪ್ರವೇಶಿಸುವ, ವಾದ ಮಂಡಿಸುವ ಅಥವಾ ಕಲಾಪಗಳಲ್ಲಿ ಭಾಗಿಯಾಗುವ ವಕೀಲರು ಕಪ್ಪು ಕೋಟ್ ಧರಿಸುವುದು ಕಡ್ಡಾಯವಲ್ಲ ಎಂದು ರಾಜ್ಯ ವಕೀಲರ ಪರಿಷತ್ ತಿಳಿಸಿದೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ರಘು ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದು, ಭಾರತೀಯ ವಕೀಲರ ಪರಿಷತ್ ನಿಯಮಗಳ ಅಧ್ಯಾಯ 6ರ ಭಾಗ 4ರಲ್ಲಿ ವಿವರಿಸಿರುವಂತೆ ವಕೀಲ ವೃಂದಕ್ಕೆ ಈ ಕುರಿತ ಮಾಹಿತಿ ಒದಗಿಸಲು ಕೋರಿದ್ದಾರೆ.

ವಕೀಲರ ಕಾಯ್ದೆ 1961ರ ಕಲಂ 49 (1) (ಜಿಜಿ) ಅಡಿಯಲ್ಲಿ ರಚಿಸಲಾಗಿರುವ ನಿಯಮಗಳಂತೆ, ಪುರುಷ ವಕೀಲರು ಬಿಳಿ ಶರ್ಟ್, ಕಪ್ಪು ಅಥವಾ ಬೂದು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ. ಮಹಿಳಾ ವಕೀಲರು ಸೀರೆ ಅಥವಾ ಉದ್ದನೆಯ ಸ್ಕರ್ಟ್‌ಗಳಲ್ಲಿ (ಬಿಳಿ ಅಥವಾ ಕಪ್ಪು ಅಥವಾ ಯಾವುದೇ ಮುದ್ರೆ ಅಥವಾ ವಿನ್ಯಾಸವಿಲ್ಲದ) ಅಥವಾ ಪಂಜಾಬಿ ಉಡುಗೆ ಅಥವಾ ಚೂಡಿದಾರ್ ಕುರ್ತಾ ಅಥವಾ ಸಲ್ವಾರ್ ಕುರ್ತಾ (ಬಿಳಿ ಅಥವಾ ಕಪ್ಪು) ಬಿಳಿ ಬ್ಯಾಂಡ್‌ನೊಂದಿಗೆ ಕಾಣಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಆರ್​ಟಿಐಯಡಿ ಕೇಳಿದ ಮಾಹಿತಿ ನಿರಾಕರಣೆ: ಮಹೇಶ್​ ಜೋಷಿಗೆ ದಂಡ ವಿಧಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.