ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ನೌಕರರ ಸಂಘದ ಪ್ರತಿಭಟನೆಯನ್ನು ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಕೆಲಸಗಾರರು ತಮ್ಮ ಮುಷ್ಕರ ಮುಂದುವರಿಸದಂತೆ ಸೂಚಿಸಿದೆ. ಎಚ್‌ಎಇಎ ಮತ್ತು ಅದರ ಸದಸ್ಯರು ಅಕ್ಟೋಬರ್ 14, 2019 ರಿಂದ ಮುಷ್ಕರದಲ್ಲಿದ್ದಾರೆ ಎಂದು ಎಚ್‌ಎಎಲ್ ಸಂಸ್ಥೆಯು ಕರ್ನಾಟಕದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.

ಕೈಗಾರಿಕಾ ವಿವಾದಗಳ ಅಡಿ ಮುಷ್ಕರ ನಡೆಸಲು ಯೂನಿಯನ್‌ಗೆ ಯಾವುದೇ ಕಾನೂನು ಬದ್ಧ ಹಕ್ಕಿಲ್ಲ. ಹಾಗಾಗಿ ಮುಷ್ಕರವನ್ನು ರದ್ದುಗೊಳಿಸುವಂತೆ ಕೋರ್ಟ್ ಸೂಚಿಸಿದೆ ಎಂದು ಎಚ್ಎಎಲ್ ತಿಳಿಸಿದೆ.