ETV Bharat / state

ಬೈಕ್​ ಅಪಘಾತ: ಸಹಾಯ ಮಾಡಲು ಅಂತಾ ಬಂದವರು ಮೊಬೈಲ್​​​ ಕದ್ದು ಪರಾರಿ! - ಬೈಕ್ ಡಿವೈಡರ್ ಗೆ ಡಿಕ್ಕಿ

ಬೆಂಗಳೂರಿನಲ್ಲಿ ಅಪಘಾತವೊಂದು ನಡೆದಾಗ ಸವಾರನಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಯುವಕರು ಮೊಬೈಲ್​ ಕದ್ದು ಪರಾರಿಯಾಗಿದ್ದಾರೆ.

​ ಕದ್ದು ಪರಾರಿ
author img

By

Published : Sep 19, 2019, 1:12 PM IST

ಬೆಂಗಳೂರು: ನಗರದ ಹೆಬ್ಬಾಳ ಫ್ಲೈ ಓವರ್​​ ಮೇಲೆ ವ್ಯಕ್ತಿಯೊಬ್ಬರಿಗೆ ಅಪಘಾತವಾಗಿ ಕೆಳಗೆ ಬಿದ್ದಾಗ ಸಹಾಯಕ್ಕೆಂದು ಬಂದ ಯುವಕರು ಮೊಬೈಲ್​ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಹೆಬ್ಬಾಳ ಫ್ಲೈ ಓವರ್ ಮೇಲೆ‌ ಬೈಕ್ ಡಿವೈಡರ್​​ಗೆ ಡಿಕ್ಕಿ ಹೊಡೆದು ಸವಾರ ಜೈಶಂಕರ್ ಎಂಬಾತ ಕೆಳಗೆ ಬಿದ್ದಿದ್ದ. ಡಿವೈಡರ್​ಗೆ ರಭಸವಾಗಿ ಗುದ್ದಿದ ಪರಿಣಾಮ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿ ಸವಾರ ಇದ್ದ. ಈ ವೇಳೆ ಐ ಫೋನ್ ರಸ್ತೆ ಮೇಲೆ ಬಿದಿದ್ದನ್ನು ಕಂಡು ಯುವಕರ ಗುಂಪೊಂದು ಸಹಾಯಕ್ಕೆ ಬಂದಿದೆ. ಕೆಲ ಹೊತ್ತು ಸಹಾಯ ಮಾಡುವ ರೀತಿ ನಟಿಸಿ, ಜೈಶಂಕರ್​ನ ಅಲ್ಲೇ ಬಿಟ್ಟು ಮೊಬೈಲ್​ನೊಂದಿಗೆ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಸಂಚಾರಿ ಪೊಲೀಸರು ಜೈಶಂಕರ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇನ್ನು ಈ ಸಂಬಂಧ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:ಅಪಘಾತವಾದ್ರೆ ಸಹಾಯಕ್ಕೆ ಬರೋರ ಬಗ್ಗೆ ಎಚ್ಚರ.
ಸಹಾಯದ ನೆಪದಲ್ಲಿ ಮೊಬೈಲ್ ಕದ್ದು ಹುಡುಗರು ಎಸ್ಕೆಪ್

ಸಿಲಿಕಾನ್ ಸಿಟಿಯಲ್ಲಿ ಅಪಘಾತವಾಗಿ ಬಿದ್ರೆ ನಿಮ್ಮ ಸಹಾಯಕ್ಕೆ ಬರೋ ವ್ಯಕ್ತಿಗಳ ಬಗ್ಗೆ ನೀವು ಬಹಳ ಜಾಗೃತೆಯಿಂದ ಇರಬೇಕು.ಯಾಕಂದ್ರೆ ಹೆಬ್ಬಾಳ ಫ್ಲೈ ಓವರ್ ಮೇಲೆ‌ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಜೈಶಂಕರ್ ಬಿದ್ದಿದ್ದ

ಡಿವೈಡರ್ಗೆ ರಭಸವಾಗಿಗುದ್ದಿದ ಪರಿಣಾಮ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿ ಬೈಕ್ ಸವಾರ ಇದ್ದ.ಈ ವೇಳೆ ಐ ಪೋನ್ ರಸ್ತೆ ಮೇಲೆ ಬಿದಿತ್ತು
ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ಸಹಾಯ ಮಾಡೋ ರೀತಿ ಬಂದು ಮೊಬೈಲ್ ಕದ್ದು ಜೈಶಂಕರ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಸಂಚಾರಿ ಪೊಲೀಸರು ದಾಖಲಿಸಿ ಚಿಕಿತ್ಸೆ ಗೆ ಒಳಪಡಿಸಿದ್ದಾರೆ.ಇನ್ನು ಈ ಸಂಬಂಧ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನಿಕೆ ಮುಂದುವರೆದಿದೆBody:KN_BNG_02_MOBILE_THEFT_7204498Conclusion:KN_BNG_02_MOBILE_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.