ETV Bharat / state

ಕೊರೊನಾ ದೃಢಪಟ್ಟು 48 ಗಂಟೆ ಕಳೆದರೂ ಬಾರದ ಆ್ಯಂಬುಲೆನ್ಸ್​: ವಿಡಿಯೋ ಮಾಡಿ ದೂರು ನೀಡಿದ ಯುವತಿ

ಕೊರೊನಾ ಸೋಂಕು ದೃಢಪಟ್ಟು 48 ಗಂಟೆ ಕಳೆದರೂ ತಾಯಿ- ಮಗಳನ್ನು ಕರೆದೊಯ್ಯಲು ಆ್ಯಂಬುಲೆನ್ಸ್​ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ವಿಡಿಯೋ ಮೂಲಕ ದೂರು ನೀಡಿದ್ದಾಳೆ.

ವಿಡಿಯೋ ಮಾಡಿ ದೂರು ನೀಡಿದ ಯುವತಿ
ವಿಡಿಯೋ ಮಾಡಿ ದೂರು ನೀಡಿದ ಯುವತಿ
author img

By

Published : Jul 14, 2020, 1:27 PM IST

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ನಮ್ಮಲ್ಲಿ ವ್ಯವಸ್ಥೆಗಳೆಲ್ಲಾ ಚೆನ್ನಾಗಿವೆ ಎನ್ನುವ ಆರೋಗ್ಯ ಇಲಾಖೆಯ ಮತ್ತೊಂದು ಯಡವಟ್ಟು ಮಾಡಿರುವ ಆರೋಪ ಕೇಳಿಬಂದಿದೆ.

ಕೊಡಿಗೆಹಳ್ಳಿಯ ಭದ್ರಪ್ಪ ಲೇಔಟ್ ಬಳಿ ತಾಯಿ-ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಕಳೆದ 48 ಗಂಟೆಗಳಿಂದ ಮನೆಯಲ್ಲೇ ಉಳಿದುಕೊಂಡಿರುವ ತಾಯಿ-ಮಗಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್​ ಇನ್ನೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಣ್ಣೀರು ಹಾಕುತ್ತಾ ಯುವತಿ ವಿಡಿಯೋ ಮಾಡಿ ವಿಚಾರ ತಿಳಿಸಿದ್ದಾಳೆ.

ವಿಡಿಯೋ ಮಾಡಿ ದೂರು ನೀಡಿದ ಯುವತಿ

ತಾಯಿ ಮತ್ತು ನನಗೆ ಉಸಿರಾಟದ ತೊಂದರೆ ಇದೆ. ನಮ್ಮನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲು ಬಿಬಿಎಂಪಿಯವರಿಗೆ ಫೋನ್ ಮಾಡಿದರೆ ವೈದ್ಯರ ಹೆಸರು ಹೇಳಿ ಅಂತ ಕೇಳುತ್ತಿದ್ದಾರೆ. ನಮಗೆ ಅವರ ಹೆಸರು ಗೊತ್ತಿಲ್ಲ. ನಮಗೆ ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.