ETV Bharat / state

ವರ್ಗಾವಣೆ ದಂಧೆ ಬಗ್ಗೆ ಪೆನ್ ಡ್ರೈವ್ ಬಾಂಬ್: ಸಮಯ ಬಂದಾಗ ಬಹಿರಂಗಪಡಿಸುವೆ ಎಂದ ಹೆಚ್.​ಡಿ.ಕುಮಾರಸ್ವಾಮಿ - H D Kumaraswamy

ಕಾಂಗ್ರೆಸ್‌ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಾಕ್ಷ್ಯವೆಂಬಂತೆ ಪೆನ್ ಡ್ರೈವ್ ಪ್ರದರ್ಶಿಸಿ ಗುಡುಗಿದರು.

H D Kumaraswamy speaks on transfer of employees
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Jul 5, 2023, 1:27 PM IST

Updated : Jul 5, 2023, 1:42 PM IST

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ವರ್ಗಾವಣೆ ದಂಧೆಯ ಆಡಿಯೋ ದಾಖಲೆ ನನ್ನ ಬಳಿ ಇದೆ ಎಂದು ಹೇಳುತ್ತಾ ಪೆನ್ ಡ್ರೈವ್ ತೋರಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಇಂದು ಹೊಸ ಬಾಂಬ್ ಸಿಡಿಸಿದರು.

ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಪೆನ್‌ ಡ್ರೈವ್ ಪ್ರದರ್ಶಿಸಿದ ಹೆಚ್​ಡಿಕೆ ಸಮಯ ಬಂದಾಗ ದಾಖಲೆ ಬಹಿರಂಗಪಡಿಸುತ್ತೇನೆ. ಬೇಕು ಅಂತಾ ರೆಡಿ ಮಾಡಿಟ್ಟುಕೊಂಡಿದ್ದೇನೆ. ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದು ವರ್ಗಾವಣೆ ದಂಧೆಯದ್ದೇ ಪೆನ್ ಡ್ರೈವ್. ಈ ಪೆನ್ ಡ್ರೈವ್​ನಲ್ಲಿ ಸಚಿವರೊಬ್ಬರ ಆಡಿಯೋ ಇದೆ. ವರ್ಗಾವಣೆ ದಂಧೆಗೆ ಹಣ ಕೇಳಿರೋದು ಅದರಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

'ನಗದು ಅಭಿವೃದ್ಧಿ ಇಲಾಖೆ': ನಗದು ಅಭಿವೃದ್ಧಿ ಇಲಾಖೆ ಈ ಸರ್ಕಾರದಲ್ಲಿದೆ. ನಗರಾಭಿವೃದ್ದಿ ಇಲಾಖೆ ಕೇಳಿದ್ದೆ, ಆದ್ರೆ ನಗದು ಅಭಿವೃದ್ಧಿ ಇಲಾಖೆ ಈಗ ಕೇಳುತ್ತಿದ್ದೇನೆ. ಅದು ನಗರ ಅಭಿವೃದ್ಧಿ ಇಲಾಖೆ ಅಲ್ಲ, ನಗದು ಅಭಿವೃದ್ಧಿ ಇಲಾಖೆ ಎಂದು ಲೇವಡಿ ಮಾಡಿದರು.

'ಇಂಧನ‌ ಇಲಾಖೆ 10 ಕೋಟಿ ರೂ.ಗೆ ಬಿಕರಿ': ಇಂಧನ ಇಲಾಖೆ 10 ಕೋಟಿ ರೂ.ಗೆ ಬಿಕರಿಯಾಗಿದೆ ಎಂದು ಇದೇ ವೇಳೆ ಮತ್ತೊಂದು ಗಂಭೀರ ಆರೋಪ ಮಾಡಿದರು. ಇಂಧನ ಇಲಾಖೆಯೂ ವರ್ಗಾವಣೆ ಇಲಾಖೆಯಾಗಿದೆ. ಈ ಬಗ್ಗೆ ದಾಖಲೆಗಳಿವೆ ಎಂದರು. ನಿನ್ನೆ ಎರಡು ವರ್ಗಾವಣೆ ಆಗಿದೆ. ಇಂಧನ ಇಲಾಖೆಯಲ್ಲಿ ಹತ್ತತ್ತು ಕೋಟಿ ರೂ.ಗೆ ವರ್ಗಾವಣೆ ಆಗಿದೆ. ಆ ಅಧಿಕಾರಿ ಒಂದು ದಿನಕ್ಕೆ 50 ಲಕ್ಷ ರೂ. ಕಮಿಷನ್ ಪಡೆಯುತ್ತಾನೆ ಎಂದು ಆರೋಪಿಸಿದರು.

ಕೆಎಸ್​​ಟಿ ತೆರಿಗೆ ನಾನು ಇಟ್ಟಿರಲಿಲ್ಲ: ಕೆಎಸ್​ಟಿ ಟ್ಯಾಕ್ಸ್ ನಾನು ಇಟ್ಟಿರಲಿಲ್ಲ. ತಾಜ್ ವೆಸ್ಟ್ ಎಂಡ್‌ದು ದುಡ್ಡು ಕಟ್ಟಿ ಎಂದು ನಿಮಗೆ ಏನು ಬಿಲ್ ಕಳಿಸಿದ್ದಾರಾ? ಎಂದು ಇದೇ ವೇಳೆ ತಿರುಗೇಟು ನೀಡಿದರು. ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಕಚೇರಿಗೆ ಬಿಲ್ ಕಳಿಸಿದ್ರಾ?. ಎರಡ್ಮೂರು ಲಕ್ಷ ರೂ. ಖರ್ಚು ಮಾಡೋ ಯೋಗ್ಯತೆ ಇಲ್ಲವೇ ನನಗೆ? ಎಂದು ವಾಗ್ದಾಳಿ ನಡೆಸಿದರು. ಇವರಿಂದ ಕಲಿಯೋ ಪರಿಸ್ಥಿತಿ ನನಗೆ ಬಂದಿಲ್ಲ. ನನ್ನ ಆಸ್ತಿ ಬಗ್ಗೆ ತನಿಖೆ ಮಾಡಲಿ. ಸಿಎಂಗೆ ಹೇಳಿ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ನೆರೆ ಪರಿಹಾರ ಹಣದಲ್ಲಿ ಮಜಾ ಮಾಡಿದವರು ನೀವು. ಸಮಯ ಬರಲಿ. ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದ ಕುಮಾರಸ್ವಾಮಿ, ಮೈ ಕೈ ಪರಚಿಕೊಳ್ಳುವುದು ಬೇಡ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಮೈಕೈ ಪರಚಿಕೊಳ್ಳೋದು ಬೇಡ. ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ಹಾಗೇ ಇದ್ದೇವೆ ಎಂದು ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಟನಲ್ ನಿರ್ಮಾಣ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿ, ಟನಲ್ ಹೊಡಿಯೋಕೆ ಹೋಗಿ ಬೆಂಗಳೂರು ಸಮಾಧಿ ಮಾಡಿಬಿಟ್ಟಿರಾ. ಬೆಂಗಳೂರು ಅಭಿವೃದ್ಧಿ ಮಾಡೋಕೆ ಹೋಗಿ ಈಗಾಗಲೇ ಸಮಾಧಿ ಮಾಡಿದ್ದೀರಾ. ಬೆಂಗಳೂರು ಅಭಿವೃದ್ಧಿಗೆ ತಾಂತ್ರಿಕವಾಗಿ, ಪ್ರಾಯೋಗಿಕವಾಗಿ ಕೆಲಸ ಮಾಡಿ. ಟನಲ್ ಮಾಡೋಕೆ ಹೋಗಿ ಸಮಾಧಿ ಮಾಡಬೇಡಿ. 1999ರಿಂದ ಹೇಗೆ ಅಭಿವೃದ್ದಿ‌ ಮಾಡಿದ್ದೀರಿ ಎಂದು ಗೊತ್ತಿದೆ. ಎಷ್ಟು ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಂಡಿದ್ದೇವೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ದಾಖಲೆ ಬಿಡುಗಡೆ ಮಾಡುತ್ತೇನೆ, ಆ ಮಂತ್ರಿಯನ್ನು ವಜಾ ಮಾಡುತ್ತೀರಾ?: ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​

ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಆಸ್ತಿ ಎಷ್ಟಿದೆ ಎಂದು ತನಿಖೆ ನಡೆಸಲಿ. ರಾಜಕೀಯಕ್ಕೆ ಬರೋಕೂ ಮುನ್ನ ಎಷ್ಟಿತ್ತು, ಈಗ ಆಸ್ತಿ ಎಷ್ಟಿದೆ ಎಂದು ತನಿಖೆ ಮಾಡಲಿ. ಅವರದ್ದೇ ಸರ್ಕಾರ ಇದೆಯಲ್ವಾ, ತನಿಖೆ ಮಾಡಲಿ. ನಮ್ಮ ಸರ್ಕಾರದ ಅವಧಿಯನ್ನು ತನಿಖೆ ಮಾಡಿಸುತ್ತಾರಂತೆ ಮಾಡಿಸಲಿ ಎಂದು ಗುಡುಗಿದರು. ಇನ್ನೂ ನಿನ್ನೆ ಯಡಿಯೂರಪ್ಪನವರು ನನ್ನ ಬಗ್ಗೆ ಒಂದೊಳ್ಳೆ ಮಾತನಾಡಿದ್ರು. ರಾಜ್ಯದಲ್ಲಿ ಹೊಸ ಅಧ್ಯಾಯ ಶುರುವಾಗಬೇಕು. ನನಗೆ ಯಾರು ಸಹಕಾರ ಕೊಡ್ತಾರೋ ಅವರಿಂದ ಬೆಂಬಲ ತೆಗೆದುಕೊಳ್ಳುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Last Updated : Jul 5, 2023, 1:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.