ETV Bharat / state

ರಾಜಕೀಯ ತೆವಲಿಗೆ ಮಾತನಾಡುವುದು ತಪ್ಪು: ಸಿದ್ದು ವಿರುದ್ಧ ಹೆಚ್​ಡಿಕೆ ಗುಡುಗು - ಹೆಚ್​ಡಿ ಕುಮಾರಸ್ವಾಮಿ ಸಂಬಂಧಿತ ಸುದ್ದಿ

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡ‌ ಎಂದು ಗುಡುಗಿದ್ದಾರೆ.

ಸಿದ್ಧು ವಿರುದ್ಧ ಹೆಚ್​ಡಿಕೆ ಗುಡುಗು
ಸಿದ್ಧು ವಿರುದ್ಧ ಹೆಚ್​ಡಿಕೆ ಗುಡುಗು
author img

By

Published : Oct 19, 2020, 3:54 PM IST

ಬೆಂಗಳೂರು: ಜಾತಿ ಸಮೀಕ್ಷೆ ಬಿಡುಗಡೆಗೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಾಮಂಡಲರಾದ ಹೆಚ್.ಡಿ.ಕೆ, ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡ‌. ನನ್ನ ವಿರುದ್ಧ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ. ಜನರನ್ನು ಮರಳು ಮಾಡುವುದಕ್ಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಹಳೆಯದನ್ನೇ ಅವರು ಮತ್ತೆ ಕೆದಕಿಕೊಂಡು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆಯೇ ಮಾಡಿಲ್ಲ. ಕಾಂಗ್ರೆಸ್​ನ ಸಚಿವರು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ. ಬೇರೆ ವಿಷಯ ಅವರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ಅಪಾದನೆ ಮಾಡ್ತಿದ್ದಾರೆ. ಈಗ ಹಿಂದುಳಿದವರ ಬಗ್ಗೆ ಇವರಿಗೆ ಪ್ರೀತಿ ಬಂದಿದೆ ಎಂದು ಗುಡುಗಿದರು.

ಪದೇ ಪದೇ ನನ್ನನ್ನು ಕೆಣಕಬೇಡಿ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಸಮಾಜಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದಿರಾ ಅನ್ನೋದು ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರಿ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಯಾಕೆ ನನ್ನನ್ನ ಕೆಣಕುತ್ತೀರಾ. ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವೇ. ಅವತ್ತು ನಾನು ವಿರೋಧ ಮಾಡಿದ್ದರೆ ಅವತ್ತೆ ಬೆಂಬಲ ವಾಪಸ್ ಪಡೆಯಬೇಕಿತ್ತು. ಈಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರಿಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇಲೆ ಬರುತ್ತೇನೆಂಬ ಸೂಚನೆ ಅವರಿಗೆ ಇದೆ. ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎಂದು ಪರೋಕ್ಷವಾಗಿ ಮತ್ತೆ ಸಿಎಂ ಆಗುತ್ತೇನೆಂಬ ಸೂಚನೆ ಕೊಟ್ಟರು.

ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಣ್ಣಿಗೆ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು. ಯಾಕಂದರೆ ಅವರನ್ನು ಬೆಳೆಸಿದ್ದೆವು ಅಲ್ಲವೆ, ಆ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಅವರು ಪದೇ ಪದೇ ಮಾತಾಡೋದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ಗುಡುಗು

ಕೆ.ಆರ್. ಪೇಟೆ ಕ್ಷೇತ್ರದಂತೆ ಶಿರಾ ಕ್ಷೇತ್ರವನ್ನು ಮುಗಿಸ್ತೀನಿ ಅಂತಾ ಸಿಎಂ ಪುತ್ರ ಹೇಳಿದ್ದಾರೆ. ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ ತೆಗೆದುಕೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ. ಅದೇ ದುಡ್ಡನ್ನು ತೆಗೆದುಕೊಂಡು ಹೋಗಿ ಬೀದಿಯಲ್ಲಿರುವ ಜನರಿಗೆ ಕೊಡಬೇಕಿತ್ತು ಎಂದು ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಉತ್ತರ ಕರ್ನಾಟಕ ಪ್ರವಾಹಪೀಡಿತ ಪ್ರದೇಶಗಳಿಗೆ ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದ್ರು ಹೋಗಿದ್ದೀರಾ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ನನಗೆ ಇಷ್ಟೆಲ್ಲಾ ನೋವು ಇದ್ದರೂ, ಉತ್ತರ ಕರ್ನಾಟಕ ಭಾಗದಲ್ಲಿ ಜನರು ನನ್ನನ್ನು ಕೈ ಬಿಟ್ಟಿದ್ದರು. ಆ ಭಾಗದ ಜನರ ಕಷ್ಟಗಳಿಗೆ ನಾನು ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂಗೆ ಹೃದಯದಲ್ಲಿ ಗಾಂಭೀರ್ಯ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹೊತ್ತಿಕೊಂಡು ಉರಿಯುತ್ತಿದೆ, ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಿದ್ದೂ ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ. ಶಿಕಾರಿಪುರವ‌ನ್ನು ಮಾದರಿ ಮಾಡಲು ಹೊರಟಿದ್ದಾರೆ. ಹಿಂದೆ ನಾನು ಬಜೆಟ್ ಮಾಡಿದ್ದಾಗ ರಾಮನಗರ, ಮಂಡ್ಯ ಬಜೆಟ್ ಅಂದ್ರು, ಇವಾಗ ಯಡಿಯೂರಪ್ಪ ಏನು ಶಿಕಾರಿಪುರದ ಸಿಎಂ ಆಗಿದ್ದಾರಾ? ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪ ಮತ್ತು ಶಾರದಾ ಪೂರ್ಯ ನಾಯಕ್ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಶಾರದಾ ಪೂರ್ಯ ನಾಯಕ್ ಬಗ್ಗೆ ಮಾತಾಡಬೇಡಿ. ಅವರು ನನ್ನ ಸಹೋದರಿ ಇದ್ದ ಹಾಗೆ. ಇವತ್ತು ಕೂಡಾ ಕಣ್ಣಲ್ಲಿ ನೀರು ಹಾಕಿಕೊಂಡು ನಾನು ಪಕ್ಷ ಬಿಡುವುದಿಲ್ಲವೆಂದು ಹೇಳಿದ್ದಾರೆ ಎಂದರು. ಮಧು ಬಂಗಾರಪ್ಪ ಪಕ್ಷ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ಮಧು ಬಂಗಾರಪ್ಪ ಅವರನ್ನು ಅವರ ತಂದೆಗಿಂತ ಹೆಚ್ಚಾಗಿ ನಾವು ಬೆಳೆಸಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ನಾನು ಅವರ ಜೊತೆ ಮಾತಾಡಿಲ್ಲ. ಪಕ್ಷ ಬಿಡುವ ವಿಚಾರ ನೀವು ಅವರನ್ನೇ ಕೇಳಿ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ ವಿರುದ್ಧ ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.