ಹಾವೇರಿ ಜಿಲ್ಲಾ ಪಂಚಾಯತ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಈ ಅರ್ಜಿ ನೇಮಕಾತಿ ನಡೆಸಲಾಗುವುದು. ಒಟ್ಟು 25 ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ನೇಮಕಾತಿ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಜಿಲ್ಲಾ ಪಂಚಾಯತ್ನ ಅಡಿ ಆಹ್ವಾನಿಸಲಾಗಿರುವ ಹುದ್ದೆ ಮಾಹಿತಿ ಇಲ್ಲಿದೆ..
- ಜಿಲ್ಲಾ ಎಂಐಎಸ್ ಸಂಯೋಜಕರು 1
- ತಾಲೂಕು ಎಂಐಎಸ್ ಸಂಯೋಜಕರು 1
- ತಾಂತ್ರಿಕ ಸಹಾಯಕರು ಸಿವಿಲ್ 4
- ತಾಂತ್ರಿಕ ಸಹಾಯಕರು ಕೃಷಿ 6
- ತಾಂತ್ರಿಕ ಸಹಾಯಕರು ತೋಟಗಾರಿಕೆ 1
- ತಾಂತ್ರಿಕ ಸಹಾಯಕರು ಅರಣ್ಯ 4
- ತಾಂತ್ರಿಕ ಸಹಾಯಕರು ರೇಷ್ಮೆ 1
- ಆಡಳಿತ ಸಹಾಯಕ ಹುದ್ದೆಗಳು 7
ವಿದ್ಯಾರ್ಹತೆ:
- ಜಿಲ್ಲಾ ಎಂಐಎಸ್ ಸಂಯೋಜಕರು ಎಂಸಿಎ ಮತ್ತು ಇಂಜಿನಿಯರಿಂಗ್ ಪದವಿ
- ತಾಲೂಕು ಎಂಐಎಸ್ ಸಂಯೋಜಕರು ಎಂಸಿಎ ಮತ್ತು ಇಂಜಿನಿಯರಿಂಗ್ ಪದವಿ
- ತಾಂತ್ರಿಕ ಸಹಾಯಕರು ಸಿವಿಲ್ ಸಿವಿಲ್ನಲ್ಲಿ ಇಂಜಿನಿಯರಿಂಗ್ ಪದವಿ
- ತಾಂತ್ರಿಕ ಸಹಾಯಕರು ಕೃಷಿ ಅರಣ್ಯ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಪದವಿ
- ತಾಂತ್ರಿಕ ಸಹಾಯಕರು ತೋಟಗಾರಿಕೆ ತೋಟಗಾರಿಕೆಯಲ್ಲಿ ಎಂಎಸ್ಸಿ
- ತಾಂತ್ರಿಕ ಸಹಾಯಕರು ಅರಣ್ಯ ಅರಣ್ಯಶಾಸ್ತ್ರದಲ್ಲಿ ಬಿಎಸ್ಸಿ
- ತಾಂತ್ರಿಕ ಸಹಾಯಕರು ರೇಷ್ಮೆ ರೇಷ್ಮೆಕೃಷಿಯಲ್ಲಿ ಎಂಎಸ್ಸಿ
- ಆಡಳಿತ ಸಹಾಯಕ ಹುದ್ದೆಗಳು ಬಿಕಾಂ (ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು)
ವಿಶೇಷ ಸೂಚನೆ: ತಾಂತ್ರಿಕ ಮತ್ತು ಆಡಳಿತ ಸಹಾಯಕ ಹುದ್ದೆ ಹೊರತುಪಡಿಸಿ, ಉಳಿದ ಹುದ್ದೆಗಳಿಗೆ ಕನಿಷ್ಠ 2 ರಿಂದ 3 ವರ್ಷ ಕಾರ್ಯ ನಿರ್ವಹಣೆ ಅನುಭವವನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗೆ ಅನುಗುಣವಾಗಿ ವಯೋಮಿತಿ ಹೊಂದಿದ್ದು, ಕನಿಷ್ಠ 21ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು.
ವೇತನ: ಆಯಾ ಹುದ್ದೆಗೆ ಅನುಸಾರವಾಗಿ ವೇತನ ನಿಗದಿಸಲಾಗಿದ್ದು, 22000 ದಿಂದ 34,000 ರೂ. ವೇತನ ನಿಗದಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಕ್ಟೋಬರ್ 27 ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನವೆಂಬರ್ 10 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ haveri.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Court Jobs: ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ.. ಟೈಪಿಸ್ಟ್, ಜವಾನ ಹುದ್ದೆಗಳ ಭರ್ತಿ