ETV Bharat / state

ಹೈಕೋರ್ಟ್‌ ಮಧ್ಯಂತರ ಆದೇಶ ಹಿನ್ನೆಲೆ: ಕೆಲಸಕ್ಕೆ ಹಾಜರಾದ HAL ನೌಕರರು - HAL employees attend work from today

ಹೆಚ್ಎಎಲ್ ಆಡಳಿತ ಮಂಡಳಿ ಈ ಹಿಂದೆ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ಮಧ್ಯಂತರ ಆದೇಶ ನೀಡಿ ಪ್ರತಿಭಟನೆ ನಿಲ್ಲಿಸಿ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಿತ್ತು.

ಹೆಚ್​​ಎಎಲ್​​ ನೌಕರರು
author img

By

Published : Oct 23, 2019, 11:16 AM IST

ಬೆಂಗಳೂರು: ಹೆಚ್ಎಎಲ್ ಸಂಸ್ಥೆಯ ಆಡಳಿತ ಮಂಡಳಿ ಸಲ್ಲಿಸಿದ ರಿಟ್ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಕಟ್ಟುನಿಟ್ಟಿನ ಮುನ್ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ HAL ನೌಕರರ ಸಂಘ ಪ್ರತಿಭಟನೆ ಕೈಬಿಟ್ಟಿದೆ.

ಹೆಚ್ಎಎಲ್ ನೌಕರರ ಸಂಘದ ಅಧ್ಯಕ್ಷ ಸೂರ್ಯದೇವ ಚಂದ್ರಶೇಖರ್ ಇಂದು ಬೆಳಿಗ್ಗೆ 6.30 ಕ್ಕೆ ಹೆಚ್ಎಎಲ್ ಬಸ್ ಸ್ಟ್ಯಾಂಡ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಂಸ್ಥೆಯ ಎಲ್ಲಾ ನೌಕರರಿಗೆ ಧನ್ಯವಾದ ಸಲ್ಲಿಸಿ ಕೆಲಸಕ್ಕೆ ಮರಳಲು ಸೂಚನೆ ನೀಡಿದ್ದಾರೆ.

Notification
ಹೆಚ್​​ಎಎಲ್​ನಿಂದ ಸುತ್ತೋಲೆ

ಹೈಕೋರ್ಟ್‌ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಸಿಬ್ಬಂದಿ ಕೆಲಸಕ್ಕೆ ಹಿಂತಿರುಗಿದ್ದಾರೆ. ಆದರೆ ಈ ವಿವಾದಕ್ಕೆ ಇನ್ನೂ ಪೂರ್ಣ ತೆರೆ ಬಿದ್ದಿಲ್ಲ. ಸಂಸ್ಥೆ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಕುರಿತು ಹೈಕೋರ್ಟ್‌ಗೆ ವಿವರಣೆ ನೀಡಲಿದೆ. ಬಳಿಕ ನೌಕರರ ಸಂಘವೂ ತಮ್ಮ ಬೇಡಿಕೆಗಳನ್ನು ಮುಂದಿಡಲಿದೆ. ಇದಾದ ನಂತರವೇ ವಾದ ಹಾಗೂ ಪ್ರತಿವಾದವನ್ನು ಆಲಿಸಿ ಘನ ನ್ಯಾಯಾಲಯ ಅಂತಿಮ ತೀರ್ಪು ನೀಡಲಿದೆ.

Intro:Body:ಹೈಕೋರ್ಟ್ ಆದೇಶದ ಬಳಿಕ ಪ್ರತಿಭಟನೆ ನಿಲ್ಲಿಸಿ ನಾಳೆಯಿಂದ ಕೆಲಸಕ್ಕೆ ಮರಳುವ ಬೆಂಗಳೂರಿನ ಹೆಚ್ಎಎಲ್ ನೌಕರರು

ಬೆಂಗಳೂರು: ಹೆಚ್ಎಎಲ್ ಸಂಸ್ಥೆಯ ಆಡಳಿತ ಮಂಡಳಿ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು, ಮಧ್ಯಂತರ ಆದೇಶ ನೀಡಿದ ಹೈ ಕೋರ್ಟ್ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗಬೇಕು ಇಲ್ಲವಾದಲ್ಲಿ ಇದು ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಆದೇಶಿಸಿತ್ತು, ಇದನ್ನು ಗಮನಿಸಿದ ಹೆಚ್ಎಎಲ್ ನೌಕರರ ಸಂಘ ಬೆಂಗಳೂರಿನ ಹೆಚ್ಎಎಲ್ ಸಂಸ್ಥೆಯ ನೌಕರರ ಪ್ರತಿಭಟನೆಯನ್ನು ಕೈಬಿಟ್ಟಿದೆ.

ಹೆಚ್ಎಎಲ್ ನೌಕರರ ಸಂಘದ ಅಧ್ಯಕ್ಷ ಸೂರ್ಯದೇವ ಚಂದ್ರಶೇಖರ್ ನಾಳೆ ಬೆಳಗ್ಗೆ 6.30 ಗೆ ಹೆಚ್ಎಎಲ್ ಬಸ್ ಸ್ಟಾಂಡ್ ಬಳಿ ಪ್ರತಿಭಟನೆಯಲ್ಲಿ ತೊಡಗಿಸಿದ್ದ ಎಲ್ಲಾ ಸಂಸ್ಥೆಯ ನೌಕರರನ್ನು ಕರೆದಿದ್ದಾರೆ. ನಾಳೆ ಸಂಸ್ಥೆಯ ನೌಕರರಿಗೆ ಒಂಬತ್ತು ದಿನಗಳ ಕಾಲ ನಿರಂತರವಾಗಿ ಪ್ರತಿಭಟನೆ ಮಾಡಿದ ಕಾರಣ ಧನ್ಯವಾದವನ್ನು ಸಲ್ಲಿಸಿ ತಮ್ಮ ಕೆಲಸಕ್ಕೆ ಮರಳಲು ಸೂಚನೆಯನ್ನು ನೀಡಲಿದ್ದಾರೆ. ಆದರೆ ಇನ್ನೂ ಉಳಿದ ಕಡೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸೂರ್ಯದೇವ ಚಂದ್ರಶೇಖರ್ ಖಚಿತಪಡಿಸಿದ್ದಾರೆ.

ಮಧ್ಯಂತರ ಆದೇಶ ನೀಡಿದ ಹೈಕೋರ್ಟ್ ವೇತನ ಪರಿಷ್ಕರಣೆಗೆ ಇನ್ನೂ ಮಾತುಕತೆ ಮಾಡಬೇಕಿದೆ ಇದರ ನಡುವೆ ಪ್ರತಿಭಟನೆಯನ್ನು ಕೈಬಿಟ್ಟು ತಮ್ಮ ಕೆಲಸ ಕಾರ್ಯಕ್ಕೆ ನೌಕರರು ಹಿಂತಿರುಗಬೇಕು ಎಂದು ಆದೇಶ ನೀಡಿದೆ. ಆದರೆ ಈ ವಿವಾದಕ್ಕೆ ಇನ್ನು ಪೂರ್ಣ ತೆರೆ ಬಿದ್ದಿಲ್ಲ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಕುರಿತು ಇನ್ನೂ ಕರ್ನಾಟಕ ಹೈಕೋರ್ಟ್ ಗೆ ವಿವರಣೆಯನ್ನು ನೀಡಲಿದ್ದಾರೆ ನಂತರ ನೌಕರರ ಸಂಘ ತಮ್ಮ ಬೇಡಿಕೆಗಳನ್ನು ಹೈಕೋರ್ಟ್ ಮುಂದೆ ಇಡಲಿದೆ. ನಂತರವೇ ವಾದ ಹಾಗೂ ಪ್ರತಿವಾದವನ್ನು ಹೈಕೋರ್ಟ್ ಆಲಿಸಿ ಅಂತಿಮ ತೀರ್ಪನ್ನು ನೀಡಲಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.