ETV Bharat / state

ಹಾರಾಡೋ 'ಹಳ್ಳಿಹಕ್ಕಿ'ಗೂ ಸಚಿವ ಸ್ಥಾನದ ಆಕಾಂಕ್ಷೆ.. ನಾನೇಕೆ ಆಗಬಾರದು ಎಂದ ಹೆಚ್‌ ವಿಶ್ವನಾಥ್​ - strong aspirant

ರಾಜ್ಯ ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಗರಿಗೆದರಿದೆ. ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಈ ನಡುವೆ ವಲಸಿಗರ ಪೈಕಿ ಹೆಚ್​ ವಿಶ್ವನಾಥ್ ಅವರು ಕೂಡ ಓರ್ವ ಪ್ರಬಲ ಆಕಾಂಕ್ಷಿ..

H Vishwanath recation about minister position
ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್
author img

By

Published : Sep 8, 2020, 4:49 PM IST

ಬೆಂಗಳೂರು : ನಾನು ಕೂಡ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್ ವಿಶ್ವನಾಥ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಂಪುಟ ವಿಸ್ತರಣೆ ಹಾಗೂ ತಮಗೆ ಮಂತ್ರಿ ಸ್ಥಾನ ಸಿಗುತ್ತಾ ಅನ್ನೋ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹೌದು. ನಾನೂ ಕೂಡ ಮಂತ್ರಿ ಸ್ಥಾನದ ಓರ್ವ ಪ್ರಬಲ ಆಕಾಂಕ್ಷಿ. ನಾನೇಕೆ ಮಂತ್ರಿ ಆಗಬಾರದು ಎಂದು ಪ್ರಶ್ನಿಸಿದರು.

ಡ್ರಗ್ಸ್ ದಂಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಎಲ್ಲಿಂದ ಬರುತ್ತೆ? ಯಾರು ಮಾರಾಟ ಮಾಡ್ತಾರೆ? ಯಾರು ಸೇವಿಸುತ್ತಾರೆ ಅನ್ನೋದರ ಸಂಪೂರ್ಣ ಮಾಹಿತಿ ಪೊಲೀಸರಿಗೆ ಮಾತ್ರ ಗೊತ್ತಿರುತ್ತದೆ.

ಹಾಗಾಗಿ, ಪೊಲೀಸ್‌ ಇಲಾಖೆ ಮಾತ್ರ ಇದಕ್ಕೆ ಬ್ರೇಕ್ ಹಾಕಲು ಸಾಧ್ಯ ಎಂದು ತಿಳಿಸಿದರು. ಅದಕ್ಕೆ ಬ್ರೇಕ್ ಹಾಕಬೇಕಿರೋದು ಪೊಲೀಸ್‌ ಇಲಾಖೆ ಮಾತ್ರ. ಹಾಗಾಗಿ, ಸರ್ಕಾರ ಡ್ರಗ್ಸ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.