ETV Bharat / state

ಪ್ರೊ. ಅಶೋಕ್ ಕುಮಾರ್ ಆತ್ಮಹತ್ಯೆಯಲ್ಲಿ ದೊಡ್ಡವರ ಕೈವಾಡ ಇದೆ: ಡಿಕೆ ಶಿವಕುಮಾರ್ ​​ - Govt to raise electricity tariff DK Shivakumar News'

ಅಶೋಕ್ ಕುಮಾರ್ ಜೀವನ ಪಾರದರ್ಶಕ. ಅವರು ಎಷ್ಟು ಗಟ್ಟಿ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಮಂದಿ ವಿದ್ಯಾರ್ಥಿಗಳನ್ನು ಕೊಟ್ಟಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಸರಿಯಾದ ವರದಿಯಾಗಲಿಲ್ಲ. ನಾವು ಪ್ರತಿ ಪಕ್ಷದಲ್ಲಿರುವವರು. ಅದಕ್ಕೆ ನಮಗೆ ಬಂದ ಮಾಹಿತಿಯಂತೆ ಇದನ್ನು ಬಹಿರಂಗ ಪಡಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

DK Sivakumar
ಡಿಕೆ ಶಿವಕುಮಾರ್​​
author img

By

Published : Nov 9, 2020, 5:01 PM IST

ಬೆಂಗಳೂರು: ನಾಲ್ವರು ಉಪಕುಲಪತಿಗಳ ನೇಮಕ ವಿಚಾರದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ. ಪ್ರೊ.ಅಶೋಕ್ ಕುಮಾರ್ ಹಣ ಕಳೆದುಕೊಂಡಿದ್ದಾರೆ. ಬಹಳ ದೊಡ್ಡವರ ಕೈವಾಡ ಅದರಲ್ಲಿದೆ. ಯಾವ ಸಚಿವರು, ಯಾರು ಅವರಿಂದ ಹಣ ಪಡೆದಿದದ್ದಾರೆ ಗೊತ್ತಿಲ್ಲ. ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೊ.ಅಶೋಕ್ ಕುಮಾರ್ ಆತ್ಮಹತ್ಯೆಯ ಹಿಂದೆ 2.5 ಕೋಟಿ ರೂ. ಮೊತ್ತದ ಹಣ ಪಡೆದ ರಹಸ್ಯ ಅಡಗಿದೆ. ಕುಲಪತಿಯ ಹುದ್ದೆಯು ಸಿಕ್ಕಿಲ್ಲ, ಹಣ ಕೂಡ ವಾಪಸ್ ಬರಲಿಲ್ಲ. ಇದರಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸರ್ಕಾರದಲ್ಲಿರುವವರೇ ಇದರಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ಸಮಿತಿಯಿಂದ ತನಿಖೆ ಮಾಡಿಸಬೇಕು. ಹೈಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅಶೋಕ್ ಕುಮಾರ್ ಜೀವನ ಪಾರದರ್ಶಕ. ಅವರು ಎಷ್ಟು ಗಟ್ಟಿ ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟು ಮಂದಿ ವಿದ್ಯಾರ್ಥಿಗಳನ್ನು ಕೊಟ್ಟಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಸರಿಯಾದ ವರದಿಯಾಗಲಿಲ್ಲ. ನಾವು ಪ್ರತಿ ಪಕ್ಷದಲ್ಲಿರುವವರು. ಅದಕ್ಕೆ ನಮಗೆ ಬಂದ ಮಾಹಿತಿಯಂತೆ ಇದನ್ನು ಬಹಿರಂಗ ಪಡಿಸುತ್ತಿದ್ದೇವೆ. ಮಾಧ್ಯಮಗಳು ಸಹ ಇದರ ಎಳೆಯನ್ನು ಬಿಡಿಸಿಡಬೇಕು ನಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​

ವಿದ್ಯುತ್​ ದರ ಏರಿಕೆ ಕುರಿತು ಮಾತನಾಡಿದ ಅವರು, ಕೋವಿಡ್ ಆತಂಕದಿಂದ ಜನ ಇನ್ನೂ ಆಚೆ ಬಂದಿಲ್ಲ. ಜನರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ಮುಂದಿನ ಒಂದೂವರೆ ವರ್ಷ ಹಿಂದಿನ ಬೆಲೆಯನ್ನೇ ಮುಂದುವರಿಸಬೇಕು. ದೇಶ, ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆಮಾಡಿದೆ. ಪ್ರತಿ ಯೂನಿಟ್​ಗೆ 40ಪೈಸೆ ಹೆಚ್ಚಳ ಮಾಡಿದೆ. ಇದು ಜನ ವಿರೋಧಿ ನೀತಿಯಾಗಿದೆ. ಕೈಗಾರಿಕೆ, ವ್ಯಾಪಾರ, ರೈತರಿಗೂ ಇದು ಬರೆ ಎಳೆದಿದೆ. ದರ ಏರಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದರು.

ನಾನು ಇಂಧನ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನನಗೂ ಅಲ್ಪಸ್ವಲ್ಪ ಮಾಹಿತಿಯಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇಂತಹ ವೇಳೆ ಏರಿಕೆ ಮಾಡಿದ್ದು ಸರಿಯಲ್ಲ. ಕೂಡಲೇ ಸರ್ಕಾರ ಆದೇಶವನ್ನು ವಾಪಸ್ ಪಡೆಯಬೇಕು. ಒಂದು ವಾರದೊಳಗೆ ಆದೇಶ ಹಿಂಪಡೆಯಬೇಕು. ಮಾಡದೇ ಹೋದರೆ ನಮಗೆ ಹೋರಾಟ ಅನಿವಾರ್ಯವಾಗಲಿದೆ. ನ.23 ರಿಂದ 28ರವರೆಗೂ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.