ETV Bharat / state

ಆಡಳಿತಾತ್ಮಕ ಹಿತದೃಷ್ಟಿಯಿಂದ ಹೇಮಾವತಿ ಎಡದಂಡೆ ನಾಲಾ ವಿಭಾಗ ಕಚೇರಿ ಸ್ಥಳಾಂತರಿಸಿ ಆದೇಶ - ರಾಜ್ಯ ಸರ್ಕಾರದಿಂದ ಆದೇಶ

ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಉಪ ವಿಭಾಗದ ಭಾಗಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿಭಾಗ ಕಚೇರಿಗಳಿಗೆ ಸ್ಥಳಾಂತರ ಮಾಡುವುದರಿಂದ ಆಡಳಿತಾತ್ಮಕ ಹಾಗೂ ಆ ಭಾಗದ ಜನರಿಗೂ ಅನುಕೂಲ ಆಗಲಿದೆ. ಆ ಕಾರಣಕ್ಕಾಗಿ ಉಪ ವಿಭಾಗದ ಕಚೇರಿಗಳನ್ನು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ..

vidhana soudha
ವಿಧಾನಸೌಧ
author img

By

Published : Oct 8, 2021, 8:37 PM IST

ಬೆಂಗಳೂರು : ಆಡಳಿತಾತ್ಮಕ ದೃಷ್ಟಿಯಿಂದ ಕೆಆರ್ ಪೇಟೆ ಮತ್ತು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾವೇರಿ ನೀರಾವರಿ ನಿಗಮ ಹಾಗೂ ಹೇಮಾವತಿ ಎಡದಂಡೆ ನಾಲೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಹಾಸನ ಜಿಲ್ಲೆಯ ಶ್ರವಣಬೆಳಗೊಳ ತಾಲೂಕು ವ್ಯಾಪ್ತಿಯ ದೊಡ್ಡಕಾಡನೂರು ಹಾಗೂ ಶ್ರವಣಬೆಳಗೊಳದಲ್ಲಿರುವ ಹೇಮಾವತಿ ನಾಲಾ ವಿಭಾಗದದಲ್ಲಿ ಕೆಆರ್‌ಪೇಟೆ ವಿಧಾನಸಭಾ ಕ್ಷೇತ್ರದ ಭಾಗವನ್ನು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ಹೇಮಾವತಿ ಎಡದಂಡೆ ನಾಲಾ ವಿಭಾಗಕ್ಕೆ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ‌.

ಅದೇ ರೀತಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕು ವ್ಯಾಪ್ತಿಯ ಕಿಕ್ಕೇರಿಯಲ್ಲಿರುವ ಹೇಮಾವತಿ ನಾಲಾ ಉಪ ವಿಭಾಗದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಭಾಗವನ್ನು ಆ ಭಾಗದ ಮುಖ್ಯನಾಲೆ, ವಿತರಣಾ ನಾಲೆಗಳು ಮತ್ತು ಕೆರೆಗಳ ಸಮೇತ ನಂ.3 ಹೇಮಾವತಿ ಎಡದಂಡೆ ನಾಲಾ ವಿಭಾಗ ಚನ್ನರಾಯಪಟ್ಟಣ ವ್ಯಾಪ್ತಿಗೆ ಸ್ಥಳಾಂತರಿಸಲು ಸರ್ಕಾರ ಅನುಮೋದಿಸಿದೆ.

ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಉಪ ವಿಭಾಗದ ಭಾಗಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿಭಾಗ ಕಚೇರಿಗಳಿಗೆ ಸ್ಥಳಾಂತರ ಮಾಡುವುದರಿಂದ ಆಡಳಿತಾತ್ಮಕ ಹಾಗೂ ಆ ಭಾಗದ ಜನರಿಗೂ ಅನುಕೂಲ ಆಗಲಿದೆ. ಆ ಕಾರಣಕ್ಕಾಗಿ ಉಪ ವಿಭಾಗದ ಕಚೇರಿಗಳನ್ನು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: 2016ರ ಮೈಸೂರು ಕೋರ್ಟ್‌ನಲ್ಲಿನ ಬಾಂಬ್ ಬ್ಲಾಸ್ಟ್.. ಮೂವರು ತಪ್ಪಿತಸ್ಥರೆಂದು ತೀರ್ಪು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.