ETV Bharat / state

CM Siddaramaiah: ಕಾರ್ಪೊರೇಟ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ- ಸಿಎಂ ಸಿದ್ದರಾಮಯ್ಯ - Corporate organizations

CM Siddaramaiah: ಬೆಂಗಳೂರಿನ ಜೆ.ಡಬ್ಲ್ಯೂ ಮಾರಿಯೆಟ್ ಹೋಟೆಲ್​ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Aug 4, 2023, 5:51 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ

ಬೆಂಗಳೂರು: ''ಉದ್ಯಮ‌ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲ ಸಹಕಾರ ಮತ್ತು ನೆರವನ್ನು ರಾಜ್ಯ ಸರ್ಕಾರ ನೀಡುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜೊತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನೀವು ಸಮಾಜದ ಮತ್ತು ಉದ್ಯಮ ಕ್ಷೇತ್ರದ ಆರೋಗ್ಯಕರ ಪ್ರಗತಿಗೆ ಮುಂದಾಗಬೇಕು. ಈ ಬಾರಿಯ ಸಿಎಸ್ಆರ್ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಬೇಕು'' ಎಂದು ಕಾರ್ಪೊರೇಟ್ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಜೆ.ಡಬ್ಲ್ಯೂ. ಮಾರಿಯೆಟ್ ಹೋಟೆಲ್​ನಲ್ಲಿಂದು ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ''ಈ ಸಮಾಜವನ್ನು ಆರ್ಥಿಕ, ಸಾಮಾಜಿಕವಾಗಿ ಸಬಲಗೊಳಿಸಲು ಸರ್ಕಾರ ಒಂದರಿಂದ ಸಾಧ್ಯವಿಲ್ಲ, ಉದ್ಯಮಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ. ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ. ನಿಮಗೆಲ್ಲಾ ಶಿಕ್ಷಣ ಇರುವುದರಿಂದಲೇ ಉದ್ಯಮಗಳನ್ನು ಸ್ಥಾಪನೆ ಮಾಡಿ ಈ ದೇಶದ ಈ ನಾಡಿನ ಆರ್ಥಿಕ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ಕೊಡುತ್ತಿದ್ದೀರಿ. ಒಂದು ವೇಳೆ ಶಿಕ್ಷಣ ಇಲ್ಲದೇ ಹೋಗಿದ್ದರೆ ನಿಮ್ಮಿಂದ ಈ ಮಟ್ಟದ ಕೊಡುಗೆ ಕೊಡಲು ಸಾಧ್ಯವಾಗುತ್ತಿರಲಿಲ್ಲ".

"ಆದರೆ, ಅವಿದ್ಯಾವಂತರು ಏನು ಮಾಡಬೇಕು? ಅವರಿಗೆ ಶಿಕ್ಷಣ ಇಲ್ಲ. ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಅವರು ಬೆಳವಣಿಗೆಯಾಗಬೇಕು. ಸ್ವಾಭಿಮಾನದಿಂದ ಬದುಕಬೇಕಾದರೆ ಪ್ರತಿಯೊಬ್ಬರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣವಾಗಬೇಕು. ಹಿಂದೆ ನಮ್ಮ ಸಮಾಜದಲ್ಲಿ ಅಸಮಾನತೆ ಇತ್ತು. ಎಲ್ಲರಿಗೂ ಶಿಕ್ಷಣ ಕೊಡುವ ವ್ಯವಸ್ಥೆ ಇರಲಿಲ್ಲ. ಕೆಲವರಿಗೆ ಮಾತ್ರ ಅವಕಾಶ ಇತ್ತು. ಆದರೆ ಈಗ ಆ ವ್ಯವಸ್ಥೆ ಇಲ್ಲ. ಎಲ್ಲರೂ ಶಿಕ್ಷಣ ಪಡೆಯಬಹುದು. ಆದರೆ, ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕಿದೆ. ನನ್ನ ಅಪ್ಪ- ಅಮ್ಮ ಅವಿದ್ಯಾವಂತರು, ನನ್ನ ಅಣ್ಣ ಓದು ಅರ್ಧಕ್ಕೆ ನಿಲ್ಲಿಸಿದ ನಾನು ಮಾತ್ರ ಕಾನೂನು ಪದವಿ ಮಾಡಿದೆ ಆ ಕಾರಣದಿಂದಾಗಿ ನಾನು ಮುಖ್ಯಮಂತ್ರಿಯಾದೆ. ರಾಜ್ಯದ ಚುಕ್ಕಾಣಿ ಹಿಡಿದೆ ನಿಮ್ಮ ಜೊತೆ ಸೇರಿ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಇಲ್ಲದೇ ಇದ್ದಲ್ಲಿ ನಾನು ಇಲ್ಲಿ ಬಂದು ಮಾತನಾಡಲಾಗುತ್ತಿರಲಿಲ್ಲ" ಎಂದು ಶಿಕ್ಷಣದ ಮಹತ್ವವನ್ನು ಸಿಎಂ ಪ್ರತಿಪಾದಿಸಿದರು.

''ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇನ್ನೂ ಶೇ.76ರಷ್ಟು ಮಾತ್ರ ಸಾಕ್ಷರತೆ ಇದೆ. ಶೇ.24 ರಷ್ಟು ಅನಕ್ಷರಸ್ಥರಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಒಂದು ರೀತಿಯ ಶಿಕ್ಷಣ ಸಿಗಲಿದೆ. ನಗರ ಪ್ರದೇಶದಲ್ಲಿ ಒಂದು ರೀತಿಯ ಶಿಕ್ಷಣ ಸಿಗಲಿದೆ. ನಗರ ಪ್ರದೇಶಗಳು ಬೆಳೆಯುತ್ತಿರುವುದೇ ಶಿಕ್ಷಣ ಮತ್ತು ಉದ್ಯೋಗದ ಕಾರಣದಿಂದ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಶಿಕ್ಷಣ, ಉದ್ಯೋಗ ಇತರ ಸೌಲಭ್ಯ ಸಿಗಲ್ಲ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ ಮುಚ್ಚಿಕೊಳ್ಳುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಭೂ ಒಡೆತನ ಕಡಿಮೆಯಾಗುತ್ತಿದೆ. ಹಾಗಾಗಿ ನಗರ ಪ್ರದೇಶಕ್ಕೆ ವಲಸೆ ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಎಂದರೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದೇ ನಮ್ಮ ಸಂವಿಧಾನ ಅದನ್ನೇ ಹೇಳುತ್ತಿದೆ. ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಪ್ರಜಾಪ್ರಭುತ್ದದ ಮೇಲೆ ನಿಂತಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಬರೀ ರಾಜಕೀಯ ಸ್ವಾತಂತ್ರ್ಯ ಇದ್ದರೆ ಸ್ವಾತಂತ್ರ್ಯ ಬಂದಿದ್ದಕ್ಕೆ ಸಾರ್ಥಕತೆ ಆಗಲ್ಲ. ನಮ್ಮ ಸಮಾಜದಲ್ಲಿ ಎಲ್ಲಿಯವರೆಗೂ ಅಸಮಾನತೆ ಮುಂದುವರೆಯುತ್ತದೆಯೋ ಅಲ್ಲಿಯವರೆಗೂ ಸಮಾಜದಲ್ಲಿ ಸಮಾನತೆ ತರುವುದು ಬಹಳ ಕಷ್ಟ. ಇದಕ್ಕೆಲ್ಲಾ ಶಿಕ್ಷಣವೇ ಮದ್ದು'' ಎಂದರು.

ಸಮಾಜಕ್ಕೆ ನಿವ್ವಳ ಲಾಭದ ಶೇ.2ರಷ್ಟು ಹಣ ಬಳಕೆ: ''ಪ್ರಸ್ತುತ ಕಾರ್ಪೊರೇಟ್ ಕಂಪನಿಗಳು ತಮ್ಮ ನಿವ್ವಳ ಲಾಭದ ಶೇ.2 ರಷ್ಟು ಹಣವನ್ನು ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡುತ್ತಿವೆ. ಅದನ್ನು ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಅಥವಾ ಕೌಶಲ್ಯಾಭಿವೃದ್ಧಿಗೆ ಬಳಿಸಿದರೆ, ಉತ್ತಮ ಸಮಾಜಕ ಕಟ್ಟಲು ಸಾಧ್ಯ. ನಾವು ಶಿಕ್ಷಣಕ್ಕೆ 40 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದ್ದೇವೆ. ಆದರೆ, ನಮ್ಮ ಬೇಡಿಕೆ ಅಗತ್ಯತೆಗಿಂತ ಹೆಚ್ಚಿದೆ. ಅಗತ್ಯತ್ಯೆ ಪೂರೈಕೆಗಿಂತ ಹೆಚ್ಚಾಗಿದೆ. ಹಾಗಾಗಿ ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ಫಂಡ್ ನೆರವಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮಾಡುವ ಆಶಯ ಸರ್ಕಾರದ್ದಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕೊಡೋಣ ಆ ಮೂಲಕ ಭವಿಷ್ಯದ ಸಮಾಜ ನಿರ್ಮಾಣ ಮಾಡೋಣ. ಅದಕ್ಕೆ ಕಾರ್ಪೊರೇಟ್ ಕಂಪನಿಗಳ ಒಪ್ಪಿಗೆ ಇದೆ ಎಂದುಕೊಂಡಿದ್ದೇನೆ. ನಿಮ್ಮ ಉದ್ಯಮ ಬೆಳೆಯಲು ನಿಮಗೆ ಏನೇನು ಸಹಕಾರ ಬೇಕು, ನಿಮ್ಮ ಉದ್ಯಮ ಬೆಳೆಯಲು ಎಂತಹ ನೀತಿ ಬೇಕು ಎಲ್ಲವನ್ನು ಸರ್ಕಾರದಿಂದ ಮಾಡಿಕೊಡುತ್ತೇವೆ. ಆದರೆ ನೀವು ನಮ್ಮ ಜೊತೆ ಸ್ವಲ್ಪ ಕೈಜೋಡಿಸಿದರೆ ನಾವು ಎಂತಹ ಸಮಾಜ ನಿರ್ಮಾಣ ಮಾಡಬೇಕು, ಸಂವಿಧಾನ ಕರ್ತೃಗಳ ಆಶಯಕ್ಕೆ ತಕ್ಕಂತೆ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ'' ಎಂದರು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಎಸ್ಎಸ್ಆರ್ ಫಂಡ್ ವಿನಿಯೋಗಿಸುವುದಕ್ಕಾಗಿ ಕರೆ ನೀಡಲು ಈ ಸಮಾವೇಶ ಕರೆದಿದ್ದೇವೆ. ನಿಮ್ಮ ಸಹಕಾರ ಬೇಕು, ಈಗಲೂ ನೀವು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೀರಿ. ಈಗ ಶಿಕ್ಷಣಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಿದರೆ ಭವಿಷ್ಯದ ಪ್ರಜೆಗಳ ರೂಪಿಸಲು ಸಾಧ್ಯವಾಗಲಿದೆ. ನಾವು ನೀವು ಇಬ್ಬರೂ ಜವಾಬ್ದಾರಿ ನಿರ್ವಹಿಸಿದಂತಾಗಲಿದೆ. ಒಂದು ಮಹತ್ವವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಅದಕ್ಕಾಗಿ ನಿಮ್ಮ ಸಹಕಾರ ಬೆಂಬಲ ಇರಲಿ. ಮುಂದೆಯೂ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Gruha Jyothi Scheme: ನಾಳೆ ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ; ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.