ಬೆಂಗಳೂರು: ನಾಳೆ ಕೇಂದ್ರದಿಂದ ಹೊಸ ರೂಪದ ಲಾಕ್ಡೌನ್ನ ಮಾರ್ಗಸೂಚಿ ಹೊರಬೀಳುವ ಸಾಧ್ಯತೆ ಇದ್ದು, ರಾಜ್ಯ ಸರ್ಕಾರ ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಇನ್ನಷ್ಟು ಸಡಿಲಿಕೆ ಮಾಡುವ ತಯಾರಿ ನಡೆಸಿದೆ.
ರಾಜ್ಯದ ಜನಜೀವನ 55 ದಿನಗಳ ನಂತರ ಮರಳಿ ಹಳಿಗೆ ಬರುತ್ತಿದೆ. ಸೋಮವಾರದಿಂದ ರಾಜ್ಯದಲ್ಲಿ ಶೇ.75ರಷ್ಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಹುತೇಕ ಸಮೂಹ ಸಾರಿಗೆ, ಕ್ಯಾಬ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲು ಸರ್ಕಾರ ಮುಂದಾಗಿದೆ. ಕೇಂದ್ರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಇನ್ನಷ್ಟು ಸಡಿಲಿಕೆ ಮಾಡಲು ಸಜ್ಜಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ನಡೆದ ಡಿಸಿಗಳ ಜೊತೆಗಿನ ವಿಡಿಯೋ ಸಂವಾದದಲ್ಲೂ ಈ ಬಗ್ಗೆ ಸಮಾಲೋಚನೆ ನಡೆದಿದೆ. ಲಾ್ಕ್ಡೌನ್ನಲ್ಲಿ ಇನ್ನಷ್ಟು ಸಡಿಲಿಕೆ ಮಾಡಲಿದ್ದು, ಈ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಏನೆಲ್ಲ ಸಡಿಲಿಕೆ ಸಾಧ್ಯತೆ?:
- ವಾಣಿಜ್ಯ ಚಟುವಟಿಕೆಗೆ ಪೂರ್ಣ ವಿನಾಯ್ತಿ
- ಹೋಟೆಲ್, ಪಬ್, ಮಾಲ್ಗಳಿಗೆ ಅವಕಾಶ
- ಆನ್‌ಲೈನ್ ಡೆಲಿವರಿ ಸೇವೆ ಪುನಾರಂಭ ಸಾಧ್ಯತೆ
- ಓಲಾ, ಉಬರ್, ಕ್ಯಾಬ್, ಆಟೋಗಳ ಸಂಚಾರ
- ಬಿಎಂಟಿಸಿ, ಕೆಎಸ್ ಆರ್ ಟಿಸಿ, ಖಾಸಗಿ ವಾಹನಗಳ ನಿರ್ಬಂಧಿತ ಓಡಾಟ ಸಾಧ್ಯತೆ
- ಅಂಗಡಿ ಮುಂಗಟ್ಟುಗಳ ಪೂರ್ಣ ಪ್ರಮಾಣದ ವಹಿವಾಟಿಗೆ ಅವಕಾಶ
- ಸಲೂನ್, ಜಿಮ್, ಬ್ಯೂಟಿ ಪಾರ್ಲರ್ ಓಪನ್
- ದೇವಸ್ಥಾನಗಳಿಗೆ ನಿರ್ಬಂಧಿತ ಅನುಮತಿ ಸಾಧ್ಯತೆ
- ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಸೇವೆಗೆ ಅವಕಾಶ
ಯಾವುದಕ್ಕೆ ಅವಕಾಶ ಡೌಟ್?:
- ಪಬ್, ಡಿಸ್ಕೊಟೆಕ್ಗಳಿಗಿಲ್ಲ ಅವಕಾಶ
- ಮೆಟ್ರೋ ರೈಲು ಸಂಚಾರ, ವಿಮಾನ ಹಾರಾಟಕ್ಕೆ ಸದ್ಯಕಿಲ್ಲ ಮುಕ್ತಿ
- ಸಿನಿಮಾ ಥಿಯೇಟರ್ಗಳಿಗಿಲ್ಲ ಅವಕಾಶ
- ಧಾರ್ಮಿಕ ಸಭೆ, ಸಮಾರಂಭ, ಪ್ರಾರ್ಥನೆ ಮೇಲಿನ ನಿರ್ಬಂಧ ಮುಂದುವರಿಕೆ.