ETV Bharat / state

ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ಸರ್ಕಾರ ಮೆಗಾ ಪ್ಲ್ಯಾನ್.. ಹೀಗಿದೆ ಮುಂದಿನ ಎರಡು ಆರ್ಥಿಕ ವರ್ಷಗಳ ಸಿದ್ಧತೆ - ಆರು ಮಹಿಳಾ ಪೊಲೀಸ್ ಠಾಣೆಗಳು

ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ಸರ್ಕಾರ ಮೆಗಾ ಪ್ಲ್ಯಾನ್ ಹಾಕಿಕೊಂಡಿದ್ದು, ಮುಂದಿನ ಎರಡು ಆರ್ಥಿಕ ವರ್ಷಗಳ ಸಿದ್ಧತೆ ಬಗ್ಗೆ ತಿಳಿಯೋಣಾ ಬನ್ನಿ..

increase the strength of police department  Government mega plan  police department job  ಸರ್ಕಾರ ಮೆಗಾ ಪ್ಲ್ಯಾನ್  ಪೊಲೀಸ್ ಇಲಾಖೆಯ ಸಂಖ್ಯಾಬಲ  ಮುಂದಿನ ಎರಡು ಆರ್ಥಿಕ ವರ್ಷಗಳ ಸಿದ್ಧತೆ  ಎರಡು ನೂತನ ಸಂಚಾರ ಠಾಣೆಗಳು  ಸಿಇಎನ್​ ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿ  ಆರು ಮಹಿಳಾ ಪೊಲೀಸ್ ಠಾಣೆಗಳು  ಸಿಸಿಬಿಯ ಸಂಖ್ಯಾಬಲ ದ್ವಿಗುಣ
ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ಸರ್ಕಾರ ಮೆಗಾ ಪ್ಲ್ಯಾನ್
author img

By

Published : Jun 7, 2023, 9:46 AM IST

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಮೊದಲು ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ಹಸಿರು ನಿಶಾನೆ ತೋರಿದೆ. ಬೆಂಗಳೂರಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಸಂಚಾರ ಸುವ್ಯವಸ್ಥೆ ನಿರ್ವಹಿಸಲು ಮೆಗಾ ಪ್ಲ್ಯಾನ್​ ಹಾಕಿದೆ. ಸದ್ಯ ಅಗತ್ಯವಿರುವ ಒಟ್ಟು 2,454 ಹುದ್ದೆಗಳಿಗೆ ಎರಡು ಹಂತಗಳಲ್ಲಿ ಸಿಬ್ಬಂದಿ ನೇಮಕಗೊಳಿಸುವ ಮೂಲಕ ಪೊಲೀಸ್ ಇಲಾಖೆಯ ಸಂಖ್ಯಾಬಲ ಹೆಚ್ಚಿಸಲು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅನುಮತಿ ದೊರೆತಿದೆ. ಪ್ರಮುಖವಾಗಿ ಸಿಸಿಬಿ ಹೆಚ್ಚು ಸಿಬ್ಬಂದಿ ಬಲವನ್ನ ಹೊಂದಲಿದೆ.

ಸಿಸಿಬಿಯ ಸಂಖ್ಯಾಬಲ ದ್ವಿಗುಣ : ಮಾದಕ ದಂಧೆಕೋರರು, ಸಂಘಟಿತ ಅಪರಾಧ, ಮಹಿಳಾ ಮತ್ತು ಮಕ್ಕಳ ರಕ್ಷಣೆ, ವಿಶೇಷ ವಿಚಾರಣೆ ಸೇರಿದಂತೆ ಪ್ರಮುಖ ಪಾತ್ರ ಹೊಂದಿರುವ ಸಿಸಿಬಿಗೆ ನೂತನವಾಗಿ ಓರ್ವ ಎಸಿಪಿ, 10 ಇನ್ಸ್‌ಪೆಕ್ಟರ್, 6 ಸಬ್ ಇನ್ಸ್‌ಪೆಕ್ಟರ್, 26 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 46 ಹೆಡ್ ಕಾನ್ಸ್‌ಟೇಬಲ್, 142 ಕಾನ್ಸ್‌ಟೇಬಲ್ ಸಹಿತ 231 ಸಿಬ್ಬಂದಿಗಳನ್ನ ಹೊಂದುವ ಮೂಲಕ ಸಿಸಿಬಿಯ ಸಂಖ್ಯಾಬಲ ದ್ವಿಗುಣಗೊಳ್ಳಲಿದೆ. 2023-24ನೇ ಆರ್ಥಿಕ ವರ್ಷದ ಯೋಜನೆಗಳು ಈ ಕೆಳಗಿನಂತಿವೆ.

ಎರಡು ನೂತನ ಸಂಚಾರ ಠಾಣೆಗಳು: ಇಬ್ಬರು ಇನ್ಸ್‌ಪೆಕ್ಟರ್, 12 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 44 ಹೆಡ್ ಕಾನ್ಸ್‌ಟೇಬಲ್, 88 ಕಾನ್ಸ್‌ಟೇಬಲ್ ಸಹಿತ 170 ಸಿಬ್ಬಂದಿಗಳನ್ನೊಳಗೊಂಡ ಎರಡು ನೂತನ ಸಂಚಾರ ಪೊಲೀಸ್ ಠಾಣೆಗಳು ನಿರ್ಮಾಣವಾಗಲಿವೆ.

ಆರು ಮಹಿಳಾ ಪೊಲೀಸ್ ಠಾಣೆಗಳು: ಆರು ಇನ್ಸ್‌ಪೆಕ್ಟರ್, 24 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 144 ಕಾನ್ಸ್‌ಟೇಬಲ್ ಸಹಿತ ಒಟ್ಟು 246 ಸಿಬ್ಬಂದಿಗಳ ಸಂಖ್ಯಾ ಬಲದೊಂದಿಗೆ ಆರು ಮಹಿಳಾ ಪೊಲೀಸ್ ಠಾಣೆಗಳು ಕಾರ್ಯಾರಂಭಿಸಲಿವೆ.

ಸಿಇಎನ್​ ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿ: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಇಎನ್ ಠಾಣೆಗಳಿಗೆ 16 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 116 ಕಾನ್ಸ್‌ಟೇಬಲ್ ಸಹಿತ ಒಟ್ಟು 204 ಜನ ನೂತನ ಸಿಬ್ಬಂದಿ ಸೇರ್ಪಡೆಗೊಳ್ಳಲಿದ್ದಾರೆ‌. ಜೊತೆಗೆ ಸೈಬರ್ ಕ್ರೈಂ ಠಾಣೆಗಳಿಗೆ ಓರ್ವ ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್, 4 ಸಬ್ ಇನ್ಸ್‌ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 8 ಹೆಡ್ ಕಾನ್ಸ್‌ಟೇಬಲ್, 16 ಕಾನ್ಸ್‌ಟೇಬಲ್ ಸಹಿತ ಒಟ್ಟು 35 ಜನ ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ.

ಇದಲ್ಲದೇ ನಗರದ ಕಾನೂನು ಸುವ್ಯವಸ್ಥೆ ಠಾಣೆಗಳಿಗೆ 48 ಸಬ್ ಇನ್ಸ್‌ಪೆಕ್ಟರ್, 132 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 74 ಹೆಡ್ ಕಾನ್ಸ್‌ಟೇಬಲ್, 64 ಕಾನ್ಸ್‌ಟೇಬಲ್ ಸಹಿತ ಹೊಸದಾಗಿ 318 ಜನ ಸಿಬ್ಬಂದಿ ನಿಯೋಜನೆಯಾಗಲಿದ್ದಾರೆ. ಕಮ್ಯಾಂಡ್ ಸೆಂಟರಿಗೆ ಓರ್ವ ಎಸಿಪಿ, 3 ಇನ್ಸ್‌ಪೆಕ್ಟರ್, 6 ಸಬ್ ಇನ್ಸ್‌ಪೆಕ್ಟರ್, 4 ಹೆಡ್ ಕಾನ್ಸ್‌ಟೇಬಲ್, 8 ಕಾನ್ಸ್‌ಟೇಬಲ್ ಸಹಿತ ಒಟ್ಟು 22 ಸಿಬ್ಬಂದಿ ನೇಮಕವಾಗಲಿದ್ದಾರೆ.

2024-25ನೇ ಆರ್ಥಿಕ ವರ್ಷದ ಯೋಜನೆಗಳು: ಹೊಸತಾಗಿ ಮೂರು ಸಂಚಾರ ಪೊಲೀಸ್ ಠಾಣೆಗಳಿಗೆ 3 ಇನ್ಸ್‌ಪೆಕ್ಟರ್, 18 ಸಬ್ ಇನ್ಸ್‌ಪೆಕ್ಟರ್, 36 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 66 ಹೆಡ್ ಕಾನ್ಸ್‌ಟೇಬಲ್, 132 ಕಾನ್ಸ್‌ಟೇಬಲ್​ಗಳ ಸಹಿತ 255 ಸಿಬ್ಬಂದಿ ಕಾರ್ಯಾರಂಭಿಸಲಿದ್ದಾರೆ. ದ್ವಿತಿಯ ಹಂತದಲ್ಲಿ 24 ಸಬ್ ಇನ್ಸ್‌ಪೆಕ್ಟರ್, 48 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 42 ಹೆಡ್ ಕಾನ್ಸ್‌ಟೇಬಲ್, 61 ಕಾನ್ಸ್‌ಟೇಬಲ್ ಸಹಿತ 175 ಸಿಬ್ಬಂದಿಗಳು ಸಂಚಾರ ಪೊಲೀಸ್ ಠಾಣೆಗಳಿಗೆ ನೂತನವಾಗಿ ಸೇರ್ಪಡೆಯಾಗಲಿದ್ದಾರೆ.

ಸಿಇಎನ್ ಠಾಣೆಗಳಿಗೆ ಹೊಸತಾಗಿ 16 ಸಬ್ ಇನ್ಸ್‌ಪೆಕ್ಟರ್, 24 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 48 ಹೆಡ್ ಕಾನ್ಸ್‌ಟೇಬಲ್, 116 ಕಾನ್ಸ್‌ಟೇಬಲ್ ಸಹಿತ ಪಟ್ಟು 204 ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ. ಅಲ್ಲದೇ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗುವ ಠಾಣೆಗಳಿಗಾಗಿಯೇ 92 ಸಬ್ ಇನ್ಸ್‌ಪೆಕ್ಟರ್, 187 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸಹಿತ 279 ಜನ ಸಿಬ್ಬಂದಿ ನೂತನವಾಗಿ ಸೇರ್ಪಡೆಯಾಗಲಿದ್ದಾರೆ. ಎರಡನೇ ಹಂತದಲ್ಲಿ 10 ಸಬ್ ಇನ್ಸ್‌ಪೆಕ್ಟರ್, 17 ಸಬ್ ಇನ್ಸ್‌ಪೆಕ್ಟರ್, 72 ಹೆಡ್ ಕಾನ್ಸ್‌ಟೇಬಲ್, 158 ಕಾನ್ಸ್‌ಟೇಬಲ್ ಸಹಿತ 257 ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ‌.

ಅಲ್ಲದೇ ಸಿಟಿ ಸ್ಪೆಷಲ್ ಬ್ರಾಂಚ್​ಗೆ ಓರ್ವ ಇನ್ಸ್‌ಪೆಕ್ಟರ್, 2 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 4 ಹೆಡ್ ಕಾನ್ಸ್‌ಟೇಬಲ್, 8 ಕಾನ್ಸ್‌ಟೇಬಲ್ ಸಹಿತ ಒಟ್ಟು 15 ಜನ ಸಿಬ್ಬಂದಿ ನೂತನವಾಗಿ ಸೇರ್ಪಡೆಯಾಗಲಿದ್ದಾರೆ. ಹಾಗೂ ವಿವಿಐಪಿ ಭದ್ರತಾ ವಿಭಾಗಕ್ಕೆ ಓರ್ವ ಇನ್ಸ್‌ಪೆಕ್ಟರ್, 2 ಸಬ್ ಇನ್ಸ್‌ಪೆಕ್ಟರ್, 4 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 4 ಹೆಡ್ ಕಾನ್ಸ್‌ಟೇಬಲ್, 30 ಕಾನ್ಸ್‌ಟೇಬಲ್ ಸಹಿತ ಒಟ್ಟು 43 ಜನ ಸಿಬ್ಬಂದಿ ಹೊಸತಾಗಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಓದಿ: ಉದ್ಯೋಗ ಸ್ಥಳ, ಶೈಕ್ಷಣಿಕ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಕೋರಿದ್ದ ಅರ್ಜಿ ಇತ್ಯರ್ಥ ಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.