ಬೆಂಗಳೂರು: ಸರ್ಕಾರಿ ಕೆಲಸದ ಹುಡುಕಾಟ ನಡೆಸುತ್ತಿರುವವರಿಗೆ ಡಿಸೆಂಬರ್ ಉತ್ತಮ ತಿಂಗಳು. ಈ ತಿಂಗಳಲ್ಲಿ ಅನೇಕ ಹುದ್ದೆಗಳಿಗೆ ಕರ್ನಾಟಕ ಸರ್ಕಾರ, ಎಸ್ಎಸ್‌ಸಿ, ನೌಕಾಸೇನೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಡಿಸೆಂಬರ್ 30, 31 ಅಂತಿಮ ದಿನ. ಇನ್ನೂ ಅರ್ಜಿ ಸಲ್ಲಿಸದವರು ಶೀಘ್ರವೇ ಅರ್ಜಿ ಭರ್ತಿ ಪ್ರಕ್ರಿಯೆಗೆ ಮುಂದಾಗಿ.
ಬೆಸ್ಕಾನಲ್ಲಿವೆ 400 ಹುದ್ದೆಗಳು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿರುವ (ಬೆಸ್ಕಾಂ) 400 ಅಪ್ರೆಂಟಿಸ್ ಹುದ್ದೆಗಳಿಗೆ ಡಿಸೆಂಬರ್ 11ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಒಂದು ವರ್ಷದ ಈ ಅಪ್ರೆಂಟಿಸ್ ಹುದ್ದೆಗೆ ಬಿಇ, ಡಿಪ್ಲೊಮಾ ಇಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31 ಅರ್ಜಿ ಸಲ್ಲಿಕೆಗೆ ಕಡೆಯ ದಿನ. ಸಂಪೂರ್ಣ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ: ಬೆಸ್ಕಾಂ ನೇಮಕಾತಿ; 400 ಅಪ್ರೆಂಟಿಸ್ ಹುದ್ದೆಗೆ ಅಧಿಸೂಚನೆ ಪ್ರಕಟ
ಇಸ್ರೋದಲ್ಲಿ ಟೆಕ್ನಿಷಿಯನ್ ಬಿ ಹುದ್ದೆಗಳು: 10ನೇ ತರಗತಿ, ಐಟಿಐ ಉತ್ತೀರ್ಣರಾಗಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಲಿಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ಇಸ್ರೋದ 5 ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 54 ಹುದ್ದೆಗಳ ನೇಮಕಾತಿ ನಡೆಯಲಿದೆ. ಡಿಸೆಂಬರ್ 9ರಂದು ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 31. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: ಇಸ್ರೋದಲ್ಲಿ ಟೆಕ್ನಿಷಿಯನ್ ಬಿ ಹುದ್ದೆ ನೇಮಕಾತಿ; ಎಸ್ಎಸ್ಎಲ್ಸಿ, ಐಟಿಐ ಓದಿದವರು ಅರ್ಜಿ ಸಲ್ಲಿಸಿ
ಶಾಲಾ ಶಿಕ್ಷಣ ಇಲಾಖೆಯಿಂದ ನೇಮಕಾತಿ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಶಿಕ್ಷಕರಾಗಿ ಹುದ್ದೆ ನಿರ್ವಹಿಸಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಿಆರ್ಪಿ, ಬಿಆರ್ಪಿ, ಶಿಕ್ಷಣ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳು ಇವಾಗಿದೆ. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಕಿಕ್ಕಿಸಿ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ; ಇಲ್ಲಿದೆ ಹುದ್ದೆ ವಿವರ
ನೌಕಾ ಸೇನೆಯಲ್ಲಿದೆ 910 ಹುದ್ದೆಗಳು: ಭಾರತೀಯ ನೌಕಾ ಸೇನೆಯಲ್ಲಿ ಟ್ರೇಡ್ಸ್ಮ್ಯಾನ್ ಮತ್ತು ಹಿರಿಯ ಡ್ರಾಫ್ಟ್ಮ್ಯಾನ್ಗಳ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಪದವಿ, ಡಿಪ್ಲೊಮಾ, ಐಟಿಐ ಪದವೀಧರರು ಅರ್ಜಿ ಸಲ್ಲಿಕೆ ಮಾಡಬಹುದು. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: ಭಾರತೀಯ ನೌಕಾ ಸೇನೆಯಲ್ಲಿ 910 ಹುದ್ದೆ ನೇಮಕಾತಿ; 10ನೇ ತರಗತಿ, ಐಟಿಐ ಆದವರಿಗೆ ಅವಕಾಶ
ಎಸ್ಎಸ್ಸಿಯಲ್ಲಿ ಕಾನ್ಸ್‌ಟೆಬಲ್ ಹುದ್ದೆಗಳು: ಸಿಬ್ಬಂದಿ ನೇಮಕಾತಿ ಆಯೋಗದಿಂದ(ಎಸ್ಎಸ್‌ಸಿ) ಒಟ್ಟು 26,146 ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿಎಸ್ಎಫ್, ಸಿಆರ್ಪಿಎಫ್, ಎಸ್ಎಸ್ಬಿ, ಐಟಿಬಿಪಿ, ಅಸ್ಸಾಂ ರೈಫೆಲ್ಸ್ನಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 31. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: ಸಿಬ್ಬಂದಿ ನೇಮಕಾತಿ ಆಯೋಗದಿಂದ 26,146 ಕಾನ್ಸ್ಟೆಬಲ್ಗಳ ನೇಮಕಾತಿ: ಆಸಕ್ತರಿಗೆ ಅವಕಾಶ