ETV Bharat / state

ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸರ್ಕಾರದ ಹೈಡ್ರಾಮಾ: ಹೆಚ್.ವಿಶ್ವನಾಥ್

author img

By

Published : Mar 8, 2023, 12:51 PM IST

Updated : Mar 8, 2023, 2:07 PM IST

ಬಿಜೆಪಿ ತೊರೆದು ಕಾಂಗ್ರೆಸ್​ ಪಕ್ಷ ಸೇರಲಿದ್ದಾರೆ ಎನ್ನಲಾಗಿರುವ ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್​ ಇಂದು ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Legislative Council member H Vishwanath
ವಿಧಾನ ಪರಿಷತ್​ ಸದಸ್ಯ ಹೆಚ್ ವಿಶ್ವನಾಥ್​

ವಿಧಾನ ಪರಿಷತ್​ ಸದಸ್ಯ ಹೆಚ್ ವಿಶ್ವನಾಥ್​

ಬೆಂಗಳೂರು: "ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಲಂಚ​ ಪ್ರಕರಣದಲ್ಲಿ ಸರ್ಕಾರ ಹೈಡ್ರಾಮಾ ಮಾಡುತ್ತಿದೆ. ವಿರೂಪಾಕ್ಷಪ್ಪ ಮೊದಲ ಆರೋಪಿ ಎನ್ನುವುದು ಬಯಲಾಗುತ್ತಿದ್ದಂತೆ ಅವರು ಕಣ್ಮರೆಯಾಗಿದ್ದರು. ಮಾಡಾಳ್​ನಲ್ಲಿರುವುದು ಪೊಲೀಸರಿಗೆ ಗೊತ್ತಿದ್ದರೂ ಬಂಧಿಸದೇ ಬೆಂಗಳೂರಿನಲ್ಲಿ ಅವರನ್ನು ಹುಡುಕುತ್ತಿದ್ದರು. ಇದೆಲ್ಲ ಸರ್ಕಾರದ ಹೈಡ್ರಾಮಾ" ಎಂದು ವಿಧಾನ ಪರಿಷತ್​ ಸದಸ್ಯ ಹೆಚ್. ವಿಶ್ವನಾಥ್ ದೂರಿದರು.

ಪ್ರೆಸ್​ಕ್ಲಬ್​ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮಾಡಾಳ್​ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಇಲ್ಲಿ ಯಾವುದೇ ಸರ್ಕಾರದ ವಕೀಲರ ನೇಮಕವಾಗಿಲ್ಲ. ಈ ಪ್ರಕರಣದ ತನಿಖಾ ತಂಡದಲ್ಲಿದ್ದ ಲೋಕಾಯುಕ್ತದ ಇಬ್ಬರು ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಹೈಕೋರ್ಟ್‌ ನೀಡಿರುವ ಜಾಮೀನು ವಿಚಾರವಾಗಿ ನಮ್ಮ ಬೆಂಗಳೂರಿನ ವಕೀಲರ ಸಂಘ ಸುಪ್ರೀಂ ಕೋರ್ಟ್​ಗೆ ಪತ್ರ ಬರೆದಿರುವುದನ್ನು ಗಮನಿಸಬೇಕು. ನಾನು ಕಳೆದ ಐವತ್ತು ವರ್ಷಗಳಿಂದ ನಾಡಿನ ರಾಜಕಾರಣ ಹಾಗೂ ಆಡಳಿತದ ಅನುಭವ ಹೊಂದಿದ್ದೇನೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ಹಣ ಸಿಗುತ್ತದೆ ಎಂದರೆ ಯಾವ ಪರಿ ಅವ್ಯವಹಾರ ನಡೆಯುತ್ತಿದೆ?, ರಾಜ್ಯ ರಾಜಕಾರಣ ಎತ್ತ ಕಡೆ ಸಾಗುತ್ತಿದೆ?" ಎಂದು ಹೆಚ್.ವಿಶ್ವನಾಥ್​ ಕಳವಳ ವ್ಯಕ್ತಪಡಿಸಿದ್ದಾರೆ.

"ವಿರೂಪಾಕ್ಷಪ್ಪ ಮಾಡಾಳ್​ ತಮ್ಮ ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಇಟ್ಟುಕೊಂಡು ಸಿಕ್ಕಿಬಿದ್ದರೂ ರಾಜ್ಯ ಸರ್ಕಾರಕ್ಕೆ ಏನೂ ಅನಿಸಿಲ್ವಾ? ಬಿಜೆಪಿ ಪಾರ್ಟಿಗೆ ಒಂದು ಘನತೆ ಇದೆ. ನಿಮ್ಮ ಈ ಕ್ರಿಮಿನಲ್​ ಚಟುವಟಿಕೆಗಳಿಂದ ಪಕ್ಷವನ್ನು ಹರಾಜು ಹಾಕಬೇಡಿ. ಬಿಜೆಪಿ ನಿಮಗೆ ತಾಯಿ ಇದ್ದಂತೆ. ಬಿಜೆಪಿ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಈ ರೀತಿಯ ಆಡಳಿತ ನಡೆಸಿ, ಪಕ್ಷದ ಮಾನ ಹರಾಜು ಹಾಕಬೇಡಿ" ಎಂದು ಹೇಳಿದರು.

"ಲಂಚ ಪ್ರಕರಣದಲ್ಲಿ ಒಬ್ಬ ನಂಬರ್​ 1 ಆರೋಪಿ ತಲೆಮರೆಸಿಕೊಂಡಿದ್ದು, ಕೋರ್ಟ್​ ಮಧ್ಯಂತರ ಜಾಮೀನು ನೀಡಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆ. ಅಂತಹ ವ್ಯಕ್ತಿಯನ್ನು ಜನರು, ಬೆಂಗಲಿಗರು ಮೆರವಣಿಗೆ ಮಾಡುತ್ತಾರೆ ಎಂದರೆ ಜನರ ಮನಸ್ಥಿತಿ ಎಲ್ಲಿ ಹೋಗಿದೆ?. ನಿಮಗೆ ಮೆರವಣಿಗೆ ಮಾಡುವ ಅವಕಾಶ ಕೊಟ್ಟವರು ಯಾರು? ಈ ರೀತಿ ಮೆರವಣಿಗೆ ಮಾಡಿ ಭ್ರಷ್ಟಾಚಾರವನ್ನು ವೈಭವೀಕರಿಸುತ್ತೀರಾ? ಪೊಲೀಸರು ಇದಕ್ಕೆ ಹೇಗೆ ಅವಕಾಶ ಕೊಟ್ಟರು? ಮುಂದೆ ಒಬ್ಬ ಕ್ರಿಮಿನಲ್​ ಕೂಡ ಇದೇ ರೀತಿ ನನಗೂ ಮೆರವಣಿಗೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿದರೆ ಆಗಲೂ ಅವಕಾಶ ಕೊಡ್ತೀರಾ" ಎಂದು ಪ್ರಶ್ನಿಸಿದರು.

"ಭ್ರಷ್ಟಾಚಾರದ ರಾಜಕಾರಣ ನಡೆಸುತ್ತಿರುವವರು ಪ್ರಧಾನಿ ಮೋದಿ ಅವರ ವಿರೋಧಿಗಳು. ನರೇಂದ್ರ ಮೋದಿ ಪಾಪ ಭ್ರಷ್ಟಾಚಾರರಹಿತ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಬಿಜೆಪಿಯವರು ಕೆಲವರು ಪ್ರಧಾನಿ ಮೋದಿ ಅವರ ವಿರೋಧಿಗಳಾಗಿದ್ದಾರೆ. ಫೋನ್​ ಪೇ ಹೋಗಿ ಅಡಿಕೆ ಮರ ಪೇ ಆಗಿದೆ. ಬಿಜೆಪಿ ಸರ್ಕಾರದಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ ಅವರಂತಹ ತಳಿ ಬೇಕಾ" ಎಂದು ವಿಶ್ವನಾಥ್‌ ಕೇಳಿದ್ದಾರೆ.

ಇದನ್ನೂ ಓದಿ: ರಾಜಕಾರಣ ಹೊಲಸಾಗಿದೆ.. ಮೌಲ್ಯಗಳನ್ನು ಕಳೆದುಕೊಂಡಿದೆ: ಹೆಚ್.ವಿಶ್ವನಾಥ್​​ ಅಸಮಾಧಾನ

Last Updated : Mar 8, 2023, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.