ಬೆಂಗಳೂರು: ಇಂದಿನಿಂದ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ, ನಗರದಲ್ಲಿ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಉಳಿದೆಲ್ಲಾ ಕಡೆ ಪಾಸ್ ಇಲ್ಲದೇ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಲಾಕ್ ಡೌನ್ ಆದ 40 ದಿನಗಳ ಬಳಿಕ ಪಾಸ್ ಇಲ್ಲದೆ ಸಾರ್ವಜನಿಕರು ಓಡಾಟ ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಇಂದು ಬೈಕ್, ಕಾರುಗಳಲ್ಲಿ ಹೆಚ್ಚು ಜನ ಓಡಾಟ ಮಾಡುವ ಹಿನ್ನೆಲೆ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ಒಂದು ವೇಳೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ಮೇಲೆ ಫೈನ್ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ಹಾಗೆ ವಾಹನಗಳಲ್ಲಿ ತೆರಳುವಾಗ ವೇಗದ ಮಿತಿ 30 ಕಿಲೋಮಿಟರ್ ಮೀರದಂತೆ ಖಾಕಿ ಕಣ್ಗಾವಲು ಇಟ್ಟಿದೆ. ಆಟೋ ಟ್ಯಾಕ್ಸಿ, ಬಿಎಂಟಿಸಿ ಬಸ್, ರೈಲು, ಮೆಟ್ರೋ ಓಲಾ ಉಬರ್ ಸೇವೆ ಇರುವುದಲ್ಲ. ಒಂದು ವೇಳೆ ಇಳಿದರೆ ಕೂಡ ಕಾನೂನು ರೀತಿಯಾದ ಕ್ರಮಕ್ಕೆ ಪೊಲಿಸರು ಮುಂದಾಗಿದ್ದಾರೆ.
ಇನ್ನೂ ಇಂದಿನಿಂದ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ, ನಗರದ ಕಂಟೈನ್ಮೆಂಟ್ ಏರಿಯಾ ಬಿಟ್ಟು, ಉಳಿದ ಏರಿಯಾದಲ್ಲಿ ಮದ್ಯ ಖರೀದಿಗೆ ಅವಕಾಶ ಮಡಿಕೊಟ್ಟಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮದ್ಯದಂಗಡಿ ತೆರೆದಿರುತ್ತದೆ.
ಹಾಗೆ ಮದ್ಯ ಖರೀದಿಗೆ ಹಲವು ಕಂಡೀಷನ್ ಅನ್ವಯವಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ , ಒಬ್ಬರಿಗೆ 2.5 ಲೀಟರ್ ಮಾತ್ರ ಲಭ್ಯವಾಗಲಿದೆ. ಹಾಗೆ ಪೊಲೀಸರು ಬಾರ್ ಮುಂದೆ ಬ್ಯಾರಿಕೇಡ್ ಅಳವಡಿಸಿ ಒಬ್ಬ ಪಿಎಸ್ಐ ಸ್ಥಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ.