ETV Bharat / state

ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲ್​ನಿಂದ ದಾಳಿ ನಡೆಸಿದ ಕಿಡಿಗೇಡಿಗಳು! - ರಾಕ್​ಲೈನ್ ವೆಂಕಟೇಶ್ ಇತ್ತೀಚಿನ ಸುದ್ದಿ

ನಾನು ಅಂಬರೀಶ್ ಕುಟುಂಬದ ಜೊತೆ ತುಂಬಾ ವರ್ಷಗಳಿಂದ ಸ್ನೇಹದಿಂದ ಇದ್ದೇನೆ. ಸುಮಲತಾ ಅವರ ಜೊತೆ ಓಡಾಡಿದ ತಕ್ಷಣ ನೀವು ಬೇರೆ ಅರ್ಥ ಮಾಡಿಕೊಳ್ಳಬೇಡಿ. ಅವರು ಫ್ಲೈಟ್ ಹತ್ತುವಾಗ ಕೈ ಹಿಡಿದುಕೊಂಡು ಫ್ಲೈಟ್ ಹತ್ತಿಸಿದ್ದೇನೆ. ಹಾಗಂತಾ, ಅದೆಲ್ಲಾ ಹಾಕೋಕಾಗುತ್ತಾ?. ನಾವು ಚಿತ್ರರಂಗದವರು. ಹಲವರ ಜೊತೆ ಫೋಟೋ ತೆಗೆಸಿಕೊಳ್ಳುತ್ತೇವೆ..

ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ
ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ
author img

By

Published : Jul 12, 2021, 2:14 PM IST

Updated : Jul 12, 2021, 4:04 PM IST

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್​ನಲ್ಲಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ತಡರಾತ್ರಿ ಕಿಡಿಗೇಡಿಗಳು ಮದ್ಯದ ಬಾಟಲಿನಿಂದ ಎಸೆದು ವಿಕೃತಿ‌ ಮೆರೆದಿದ್ದಾರೆ‌‌. ಇಂದು ನಸುಕಿನ ಜಾವ 2.55ರ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಮದ್ಯದ ಬಾಟಲಿ ಎಸೆದು ಪರಾರಿಯಾಗಿದ್ದಾರೆ.‌‌

ಇಂದು ಮುಂಜಾನೆ ಮನೆಯ ಸೆಕ್ಯೂರಿಟಿ ಗಾರ್ಡ್ ನೋಡಿದಾಗ ಮದ್ಯದ ಬಾಟಲಿ ಚೂರುಗಳು ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಿಡಿಗೇಡಿಗಳು ಕೃತ್ಯ ಎಸಗಿರುವುದು ತಿಳಿದು ಬಂದಿದೆ.

ಈ ವಿಚಾರವನ್ನು ರಾಕ್​ಲೈನ್ ವೆಂಕಟೇಶ್‌ ಗಮನಕ್ಕೆ ತರಲಾಗಿದೆ. ಬಳಿಕ ಸ್ಥಳೀಯ ಪೊಲೀಸರಿಗೆ ನಡೆದ ವಿಚಾರದ ಬಗ್ಗೆ ಮೌಖಿಕವಾಗಿ ತಿಳಿಸಿದ್ದಾರೆ.‌ ಮುಂಜಾಗ್ರತಾ ಕ್ರಮವಾಗಿ ರಾಕ್​ಲೈನ್ ಮನೆ ಬಳಿ ಇಬ್ಬರು ಕಾನ್​ಸ್ಟೇಬಲ್​ಗಳನ್ನು ನಿಯೋಜಿಸಲಾಗಿದೆ‌.

ತಮ್ಮ ಮನೆ ಮೇಲಿನ ದಾಳಿ ಬಗ್ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೀಗಂತಾರೆ..

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳು ಮದ್ಯದ ಬಾಟಲಿ ಎಸೆದು ದುಷ್ಕೃತ್ಯ ಎಸಗಿದ್ದಾರೆ. ಘಟನೆ ಬಗ್ಗೆ ರಾಕ್‌ಲೈನ್ ವೆಂಕಟೇಶ್ ಮೌಖಿಕವಾಗಿ ತಿಳಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಲಿಖಿತ ದೂರನ್ನು ಠಾಣೆಗೆ ಬಂದು ನೀಡಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ.

ಮುಂಜಾಗ್ರತೆ ಹಿನ್ನೆಲೆ ಮನೆಯ ಬಳಿ ಇಬ್ಬರು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದು ಇಬ್ಬರಿಂದ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ. ದೂರು ಕೊಟ್ಟರೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ. ಈವರೆಗೂ ಯಾರನ್ನು ನಾವು ಬಂಧನ ಮಾಡಿಲ್ಲ ಎಂದು‌ ಮಾಹಿತಿ ನೀಡಿದ್ದಾರೆ.

ಹೆದರುವ ಮಾತೇ ಇಲ್ಲ : ಸಂಬಂಧ ಪ್ರತಿಕ್ರಿಯಿಸಿರುವ ರಾಕ್​ಲೈನ್ ವೆಂಕಟೇಶ್, ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಮದ್ಯದ ಬಾಟಲಿ ಎಸೆದಿದ್ದಾರೆ. ಏನೇ ಆದರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡುತ್ತೇನೆ. ಈ ತರಹ ಗಲಾಟೆಗಳನ್ನ ಮಾಡಿಸಿದರೆ ನಾನು ಹೆದರುತ್ತೇನೆ ಅಂದುಕೊಂಡರೆ ಅದು ಆಗಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗಲೂ ಇರುತ್ತೇನೆ. ಅವರ ಕುಟುಂಬಕ್ಕಾಗಿ ನಾನು ಎಲ್ಲಾ ತ್ಯಾಗ ಮಾಡೋಕೂ ಸಿದ್ಧ. ನನ್ನ ಪ್ರಾಣ ಕೊಡುವುದಕ್ಕೆ ರೆಡಿಯಾಗಿದ್ದೇನೆ. ಹಾಗಂತಾ, ನಾನು ಹೆದರಿಕೊಂಡು ಹಿಂಜರಿಯಲ್ಲ. ನನಗೆ ಅಂಬರೀಶ್ ಕುಟುಂಬದ ಜೊತೆ ಒಳ್ಳೆ ಸ್ನೇಹ ಇದೆ. ನಾನ್ಯಾವತ್ತೂ ಹಿಂಜರಿಯಲ್ಲ ಎಂದು ಹೇಳಿದ್ದಾರೆ.

ತಪ್ಪು ತಿಳಿಯಬೇಡಿ : ರಾಕ್​ಲೈನ್‌ ವೆಂಕಟೇಶ್ ಮತ್ತು ಸುಮಲತಾ ಅಂಬರೀಶ್ ಜೊತೆಗಿರುವ ಫೋಟೋ ವೈರಲ್ ವಿಚಾರ ಸಂಬಂಧ ಈ ತರಹ ಜೊತೆಗಿರುವ ಫೋಟೋ ಸಾವಿರಾರಿವೆ. ಹಾಗಂತಾ, ಅದರ ಬಗ್ಗೆ ಯಾರೂ ತಪ್ಪು ತಿಳಿಯಬಾರದು. ಸುಮಲತಾ ಅವರ ಜೊತೆ ನಾನು ದೆಹಲಿಗೆ ಹೋದಾಗ ಹಲವರು ಬಂದಿದ್ದರು. ಮಂಡ್ಯದ ಜನ ಕೂಡ ಬಂದಿದ್ದರು. ಆ ಫೋಟೋ ತೆಗೆಸಿಕೊಂಡಾಗ ತುಂಬಾ ಜನ ಅಲ್ಲೇ ಇದ್ದರು.

ನಾನು ಅಂಬರೀಶ್ ಕುಟುಂಬದ ಜೊತೆ ತುಂಬಾ ವರ್ಷಗಳಿಂದ ಸ್ನೇಹದಿಂದ ಇದ್ದೇನೆ. ಸುಮಲತಾ ಅವರ ಜೊತೆ ಓಡಾಡಿದ ತಕ್ಷಣ ನೀವು ಬೇರೆ ಅರ್ಥ ಮಾಡಿಕೊಳ್ಳಬೇಡಿ. ಅವರು ಫ್ಲೈಟ್ ಹತ್ತುವಾಗ ಕೈ ಹಿಡಿದುಕೊಂಡು ಫ್ಲೈಟ್ ಹತ್ತಿಸಿದ್ದೇನೆ. ಹಾಗಂತಾ, ಅದೆಲ್ಲಾ ಹಾಕೋಕಾಗುತ್ತಾ?. ನಾವು ಚಿತ್ರರಂಗದವರು. ಹಲವರ ಜೊತೆ ಫೋಟೋ ತೆಗೆಸಿಕೊಳ್ಳುತ್ತೇವೆ ಎಂದರು.

Last Updated : Jul 12, 2021, 4:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.