ETV Bharat / state

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ನೆರಡು ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಸಿದ್ಧ - Two More Ways ready to Commercial Traffic

ಮೆಟ್ರೋ ಹಸಿರು ಮಾರ್ಗವಾದ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಸಂಚಾರಕ್ಕೆ ತಯಾರಿ ನಡೆಸಲಾಗಿದೆ. ಎರಡನೇ ಹಂತದ ನಾಯಂಡಳ್ಳಿಯಿಂದ ಕೆಂಗೇರಿ ಮಾರ್ಗವೂ ಭಾಗಶಃ ಮುಕ್ತಾಯದ ಹಂತಕ್ಕೆ ಬಂದಿದ್ದು, ಅದರ ವಾಣಿಜ್ಯ ಸಂಚಾರವೂ ಈ ವರ್ಷವೇ ಆಗಲಿದೆ.

ಮೆಟ್ರೋ ಪ್ರಯಾಣಿರಿಗೆ ಗುಡ್ ನ್ಯೂಸ್
ಮೆಟ್ರೋ ಪ್ರಯಾಣಿರಿಗೆ ಗುಡ್ ನ್ಯೂಸ್
author img

By

Published : Aug 11, 2020, 10:31 PM IST

Updated : Aug 11, 2020, 10:59 PM IST

ಬೆಂಗಳೂರು: ನಮ್ಮ ಮೆಟ್ರೋ ನಿಗಮದ ಕಾಮಗಾರಿ ಹಂತ ಹಂತವಾಗಿ ಮುಗಿಯುತ್ತಿದ್ದು, ಇದೀಗ ನಿಗಮವು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ. ಇದೇ ವರ್ಷ ಎರಡು ಮಾರ್ಗಗಳು‌ ಮೆಟ್ರೋ ಓಡಾಟಕ್ಕೆ ಸಿದ್ಧವಾಗಲಿವೆ.

ನಮ್ಮ ಮೆಟ್ರೋ ಹಸಿರು ಮಾರ್ಗವಾದ ಯಲಚೇನಹಳ್ಳಿ ಟು ಅಂಜನಾಪುರ ಮಾರ್ಗದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಪರೀಕ್ಷಾರ್ಥ ಸಂಚಾರಕ್ಕೆ ತಯಾರಿ ನಡೆಸಲಾಗಿದೆ. ಮೂರು ತಿಂಗಳ ಪರೀಕ್ಷಾರ್ಥ ನಡೆಸಿದ ಬಳಿಕ ರೈಲ್ವೇ ಇಲಾಖೆ ಆಯುಕ್ತರ ಪರಿಶೀಲನೆ ನಡೆಸಿ ಸಕ್ಸಸ್‌ ಆದರೆ ನಂತರ ವಾಣಿಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತೆ.

ಮೆಟ್ರೋ ಇನ್ನೆರಡು ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಸಿದ್ಧ

2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತ ಮಾಡಬೇಕೆಂಬ ಗುರಿ ಇತ್ತು. ಪರೀಕ್ಷಾರ್ಥ ಸಂಚಾರವೂ ಈ ಆಗಸ್ಟ್​​ನಲ್ಲೇ ಆಗಬೇಕಿತ್ತು. ಆದರೆ ಕೊರೊನಾ ಕಾಲಿಟ್ಟ ಗಳಿಗೆಯಿಂದಾಗಿ ಎಲ್ಲವೂ ಮುಂದೂಡಲಾಯಿತು. ಹೀಗಾಗಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದವು. ಆದರೆ ಈಗ ಒಂದೊಂದೇ‌ ಕಾಮಗಾರಿ ಪೂರ್ಣಗೊಂಡಿದೆ. 2016ರಲ್ಲಿ ಶುರುವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿಮೀ ಮಾರ್ಗ ಇದಾಗಿದ್ದು, ಸುಮಾರು 500 ಕೋಟಿ ವೆಚ್ಚದ ಕಾಮಗಾರಿಯಾಗಿದೆ. ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರಲಿದ್ದು, ಕೋಣನಕುಂಟೆ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ ಶಿಪ್ ಬರಲಿದೆ.

ನಾಯಂಡಳ್ಳಿ ಟು ಕೆಂಗೇರಿ ಮಾರ್ಗವೂ ಸಿದ್ದ:

ಇತ್ತ ಎರಡನೇ ಹಂತದ ನಾಯಂಡಳ್ಳಿ ಟು ಕೆಂಗೇರಿ ಮಾರ್ಗವೂ ಭಾಗಶಃ ಮುಕ್ತಾಯದ ಹಂತಕ್ಕೆ ಬಂದಿದ್ದು, ಅದರ ವಾಣಿಜ್ಯ ಸಂಚಾರವೂ ಈ ವರ್ಷವೇ ಆಗಲಿದೆ. ಒಟ್ಟು 8.74 ಕಿಮೀ ಉದ್ದದ ಮಾರ್ಗದಲ್ಲಿ 18 ತಿರುವುಗಳಿವೆ. ಹೀಗಾಗಿ ಕೊಂಚ ತಡೆಯಾಗಿತ್ತು, ಇದೀಗ ಎರಡು ಮಾರ್ಗಗಳು 2020ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ.

ಸದ್ಯ, ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಎಲ್ಲ ಮಾರ್ಗಗಳ ಮೆಟ್ರೋ ಹಂತ ಸ್ತಬ್ಧವಾಗಿದೆ. ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಆಗಸ್ಟ್​ನಲ್ಲಿ ಮೆಟ್ರೊ ಓಡಲಿದೆ ಎನ್ನಲಾಗಿತ್ತು, ಆದರೆ ಇದೀಗ ಸೆಪ್ಟೆಂಬರ್​ನಲ್ಲಿ ಮೆಟ್ರೋ ಸಂಚಾರ ಆಗಲಿದ್ಯಾ ಕಾದು ನೋಡಬೇಕು.

Last Updated : Aug 11, 2020, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.