ETV Bharat / state

ರಾಜ್ಯದಲ್ಲಿನ್ನೂ ಓಮಿಕ್ರಾನ್​​ ತಳಿಗಳು ಪ್ರಾಬಲ್ಯ ಹೊಂದಿವೆ: ಸಚಿವ ಸುಧಾಕರ್​ ಟ್ವೀಟ್‌

ಆರೋಗ್ಯ ಸಚಿವ ಡಾ.ಸುಧಾಕರ್​ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಕೋವಿಡ್​ ರೋಗ ಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ಓಮಿಕ್ರಾನ್​ನ​ ಬಿಎ-2 ಸೋಂಕಿನಿಂದ ಬಳಲುತ್ತಿದ್ದಾರೆ.

Health Minister Dr K Sudhakar
ಆರೋಗ್ಯ ಸಚಿವ ಡಾ.ಸುಧಾಕರ್
author img

By

Published : Jun 22, 2022, 7:45 PM IST

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್​​ ವೈರಾಣು ತಳಿಗಳ ಹಾವಳಿ ಇನ್ನೂ ಹೆಚ್ಚಾಗಿರುವುದು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಿಂದ ದೃಢಪಡುತ್ತಿದೆ. ಹೊಸ ರೂಪಾಂತರಿಗಳು ಸಹ ಕಾಣಿಸಿಕೊಳ್ಳಲು ಆರಂಭಿಸಿವೆ. ಇದರಲ್ಲಿ ಬಿಎ.3, ಬಿಎ.4 ಮತ್ತು ಬಿಎ.5 ಎಂಬ ಸೋಂಕು ಪ್ರಕರಣಗಳೂ ಪತ್ತೆಯಾಗುತ್ತಿವೆ.

ಹೊಸ ತಳಿಗಳ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಟ್ವೀಟ್​ ಮಾಡಿದ್ದು, ಕರ್ನಾಟಕದಲ್ಲಿ ಯಾವ ಸೋಂಕು ಪ್ರಾಬಲ್ಯ ಹೊಂದಿದೆ ಎಂಬುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಕೋವಿಡ್​ ರೋಗ ಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ಓಮಿಕ್ರಾನ್​ನ​ ಬಿಎ-2 ಸೋಂಕಿನಿಂದ ಬಳಲುತ್ತಿದ್ದಾರೆ.

  • Which strain is dominating in Karnataka? As per the genome sequencing sample:

    🔹March 2021 - December 2021: 90.7% Delta

    🔹January 2022 - April 2022: 87.80% Omicron

    🔹May 2022 - June 2022: 99.20% Omicron#COVID19 #Omicron

    1/2 pic.twitter.com/eUNItiSqks

    — Dr Sudhakar K (@mla_sudhakar) June 22, 2022 " class="align-text-top noRightClick twitterSection" data=" ">

2021ರ ಮಾರ್ಚ್​​ನಿಂದ ಡಿಸೆಂಬರ್​ವರೆಗೆ ಡೆಲ್ಟಾ ಶೇ.90.7ರಷ್ಟಿತ್ತು, 2022ರ ಜನವರಿಯಿಂದ 2022ರ ಏಪ್ರಿಲ್​ವರೆಗೆ ಓಮಿಕ್ರಾನ್​​ ಶೇ.87.80ರಷ್ಟು ಹಾಗೂ 2022ರ ಮೇ ತಿಂಗಳಿಂದ ಜೂನ್‌ವರೆಗೆ ಶೇ.99.20ರಷ್ಟಿತ್ತು ಎಂದು ಸಚಿವರು​ ಟ್ವೀಟ್​ ಮಾಡಿದ್ದಾರೆ.

ಪ್ರಸ್ತುತ ಬಿಎ.2 ತಳಿ ಪ್ರಾಬಲ್ಯ ಹೊಂದಿದೆ. ಇದು ಮೇ ತಿಂಗಳಿಂದ ಇಲ್ಲಿಯವರೆಗೆ ಶೇ.80.60ರಿಂದ 89.40ಕ್ಕೆ ಏರಿಕೆಯಾಗಿದೆ. ಬಿಎ.1.1.529 ತಳಿ ಮತ್ತು ಬಿಎ.1 ತಳಿಯು ಕ್ರಮವಾಗಿ ಶೇ.8.60 ಮತ್ತು ಶೇ.0.04ರಷ್ಟು ಕಡಿಮೆಯಾಗಿದೆ. ಆದಾಗ್ಯೂ ಹೊಸ ರೂಪಾಂತರಿ ತಳಿಗಳಾದ ಬಿಎ.3, ಬಿ.ಎ.4 ಮತ್ತು ಬಿ.ಎ.5 ಪ್ರಕರಣಗಳು ಆರಂಭಿಕ ಹಂತದಲ್ಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜುಲೈ 16ರಿಂದ ಪೌತಿ ಖಾತೆ ಅಭಿಯಾನ: ಸಚಿವ ಆರ್.ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.