ETV Bharat / state

ಮಹಾರಾಜ ರೆಸ್ಟೊರೆಂಟ್​​ನಿಂದ ಸೆನೆಗಲ್​ವರೆಗೆ ಪೂಜಾರಿಯ ಭೂಗತ ಲೋಕ: ಗ್ಯಾಂಗ್​ಸ್ಟರ್​​ನ​ ಕ್ರೈಂ ಇತಿಹಾಸ ಬಿಚ್ಚಿಟ್ಟ ಎಡಿಜಿಪಿ

ದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್​​ ರವಿ ಪ್ರಕಾಶ್ ಪೂಜಾರಿ ಬಂಧನ ಬಗ್ಗೆ ಅಧಿಕೃತವಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಧ್ಯಮಗೋಷ್ಟಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

banglore
ಗ್ಯಾಂಗ್ ಸ್ಟಾರ್ ರವಿ ಪ್ರಕಾಶ್ ಪೂಜಾರಿ ಬಂಧನ
author img

By

Published : Feb 24, 2020, 8:33 PM IST

ಬೆಂಗಳೂರು: ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್​ಸ್ಟರ್​ ರವಿ ಪ್ರಕಾಶ್ ಪೂಜಾರಿ ಬಂಧನದ ಬಗ್ಗೆ ಅಧಿಕೃತವಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಧ್ಯಮಗೋಷ್ಟಿ ನಡೆಸಿದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 97 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ 1994 ರಲ್ಲಿ ಮುಂಬೈನಲ್ಲಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಅನಂತರ ಜಾಮೀನು ಪಡೆದು ಕೆಲವೇ ದಿನಗಳಲ್ಲಿ ಬೇರೆ ಬೇರೆ ಕೊಲೆ‌ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಬಂಧನ ಭೀತಿಯಿಂದ ಮುಂಬೈ ತೊರೆದಿದ್ದ. ನೇಪಾಳ, ಬ್ಯಾಂಕಾಕ್, ಉಗಾಂಡ ಮೂಲಕ ಸೆನೆಗಲ್​ನಲ್ಲಿ ತಲೆಮರೆಸಿಕೊಂಡಿದ್ದ. ಕಳೆದ 26 ವರ್ಷಗಳಿಂದಲೂ ವಿದೇಶದಲ್ಲಿದ್ದರೂ ದೇಶದ ಉದ್ಯಮಿ, ರಾಜಕಾರಣಿ ಹಾಗೂ ಸಿನಿಮಾದವರಿಗೆ ಹಣಕ್ಕಾಗಿ ಜೀವ ಬೆದರಿಕೆವೊಡ್ಡಿದ್ದ.

ಎಡಿಜಿಪಿ ಅಮರ್ ಕುಮಾರ್ ಪಾಂಡೆ

ಈತನ ಪತ್ತೆಗಾಗಿ ರಾಜ್ಯ ಸರ್ಕಾರ‌ ನನ್ನನ್ನು ನೇಮಿಸಿತ್ತು. ಇದರಂತೆ 2018 ರಿಂದ ನಿರಂತರ ಪ್ರಯತ್ನದ ಸಲುವಾಗಿ 2019ರಲ್ಲಿ ಜ.19ರಂದು ಆತನನ್ನು ಸೆನೆಗಲ್ ಪೊಲೀಸರು ಬಂಧಿಸಿ ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಕಾನೂನು ಪ್ರಕ್ರಿಯೆ ಮುಗಿಸಿಕೊಂಡು ಇದೇ ತಿಂಗಳ‌ ಫೆ.22ರಂದು ಭಾರತೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಅಮರ್​ಕುಮಾರ್​ ಪಾಂಡೆ ಮಾಹಿತಿ ನೀಡಿದ್ದಾರೆ‌.

ಗ್ಯಾಂಗ್​ಸ್ಟರ್ ರವಿ ಪೂಜಾರಿ ಮೇಲೆ ಮುಂಬೈ ಸೇರಿದಂತೆ ದೇಶದ ನಾನಾಕಡೆ ಪ್ರಕರಣಗಳಿವೆ. ಸೆನೆಗಲ್ ದೇಶದ ಸುಪ್ರೀಂಕೋರ್ಟ್ ರವಿ ಪೂಜಾರಿಯ ಅರ್ಜಿಯನ್ನು ವಜಾ ಮಾಡಿದೆ. ಗ್ಯಾಂಗ್​ಸ್ಟರ್ ಸಲ್ಲಿಸಿದ್ದ ಭಾರತಕ್ಕೆ ಹಸ್ತಾಂತರಿಸಬಾರದು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಭಾರತದ ವಶಕ್ಕೆ ನೀಡಿದೆ. ಈತ ಬುಲೇನಾ ಫಾಸೊ ದೇಶದ ಪೌರತ್ವ ಸಹ ಹೊಂದಿದ್ದ. ಕಳೆದ ಮೂರು ವರ್ಷಗಳ ಹಿಂದೆ ಸೆನೆಗಲ್​ನಲ್ಲಿ ವಾಸಿಸುತ್ತಿದ್ದ.

ಮಹಾರಾಜ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದ. ಇದರಿಂದಲೇ ವಾರ್ಷಿಕ 25 ಲಕ್ಷ ರೂಪಾಯಿ ಹಣ ಸಂಪಾದಿಸುತ್ತಿದ್ದ. ಅಲ್ಲದೆ, ಸಿನಿಮಾ ನಟರು ಉದ್ಯಮಿಗಳು, ವೈದ್ಯರು ಸೇರಿದಂತೆ ನೂರಾರು ಜನರಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುವುದೇ ಈತನ ಕಾಯಕವಾಗಿತ್ತು. ಬುರ್ಕಿನಾ ಫಾಸೋ ಪಾಸ್​ಪೋರ್ಟ್ ಬಳಸಿ ಅಮೆರಿಕಕ್ಕೆ ಹೋಗಿ ಬಂದಿದ್ದ ಎಂದು ಎಡಿಜಿಪಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಇನ್ನು ಸೆನೆಗಲ್​ಗೆ ನಮ್ಮ ರಾಜತಾಂತ್ರಿಕ ಸಂಬಂಧ ಇಲ್ಲ. ಆದರೂ ಅಲ್ಲಿನ ಅಧಿಕಾರಿಗಳು ನಮಗೆ ಸಹಕರಿಸಿದ್ದಾರೆ. ಹೀಗಾಗಿ ರವಿ ಪೂಜಾರಿ ದೇಶಕ್ಕೆ ಕರೆದುಕೊಂಡು ಬರಲು ಸಹಾಯವಾಯಿತು ಎಂದು ಅಲ್ಲಿನ ಪೊಲೀಸರಿಗೆ ಅಮರ್​ಕುಮಾರ್​ ಪಾಂಡೆ ಧನ್ಯವಾದ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.