ಬೆಂಗಳೂರು: ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಬಿಜೆಪಿ ಸಂಸದರಾದ ಪಿ.ಸಿ. ಮೋಹನ್ ಹಾಗೂ ರಾಜೀವ್ ಚಂದ್ರಶೇಖರ್ ಸಂಸದರ ನಿಧಿಯಿಂದ ತಲಾ 2 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಿದ್ದಾರೆ.

ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ ಸಿ ಮೋಹನ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡ್‌ನಲ್ಲಿ ಬಳಸಲು ವೈಯಕ್ತಿಕ ರಕ್ಷಣಾ ಸಲಕರಣೆ, ವೈದ್ಯಕೀಯ ಕಿಟ್‌ಗಳು, ವೆಂಟಿಲೇಟರ್‌ಗಳು, N-95 ಮಾಸ್ಕ್ ಗಳು ಮತ್ತು ಇತರ ಉಪಕರಣಗಳ ತುರ್ತು ಖರೀದಿಗೆ ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ಬಿಡುಗಡೆ ಮಾಡಿರುವ ಪತ್ರವನ್ನು ನೀಡಿದರು.
ಇನ್ನು, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2 ರೂಪಾಯಿ ಕೋಟಿ ಹಣ ನೀಡುತ್ತಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1,700 ಬೆಡ್‌ಗಳ ಕೋವಿಡ್-19 ಪ್ರತ್ಯೇಕ ನಿಗಾ ಘಟಕಕ್ಕೆ ಅತ್ಯಾವಶ್ಯಕವಾಗಿರುವ ವೆಂಟಿಲೇಟರ್ ಸೌಲಭ್ಯ, ಎಫ್-95 ರೆಸ್ಪಿರೇಟರ್ಸ್ ಮತ್ತು ಸರ್ಜಿಕಲ್ - ಮಾಸ್ಕ್ ಸೇರಿದಂತೆ ಪರ್ಸನಲ್ ಪ್ರೊಟೆಕ್ಟಿವ್ ಇಕ್ಯೂಪ್ಮೆಂಟ್ ಮೊದಲಾದ ಅಗತ್ಯ ಉಪಕರಣಗಳನ್ನು ತುರ್ತು ಖರೀದಿಗಾಗಿ ತಮ್ಮ ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 2 ಕೋಟಿಗಳ ಅನುದಾನವನ್ನು ನೀಡುತ್ತಿದ್ದೇನೆ. ಈ ಅನುದಾನವನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಇವರಿಗೆ ಪಾವತಿಸಲು ಕೋರುತ್ತೇನೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.