ETV Bharat / state

ಸರ್ಕಾರ ಅನುದಾನ ಕೊಟ್ಟರಷ್ಟೇ ಉಚಿತ ಬೈಸಿಕಲ್: ಕೊರೊನಾ ಕಾರಣಕ್ಕೆ ಪ್ರೋತ್ಸಾಹದಾಯಕ ಯೋಜನೆಗೆ ಕತ್ತರಿ?‌ - ಸರ್ಕಾರ ಅನುದಾನ ಕೊಟ್ಟರಷ್ಟೇ ಉಚಿತ ಬೈಸಿಕಲ್ ವಿತರಣೆ

ಈ ವರ್ಷದ ಶೈಕ್ಷಣಿಕ ಸಾಲು ಕೂಡ ಆನ್ ಲೈನ್‌ನಲ್ಲೇ ನಡೆಯುತ್ತಿದ್ದು, ಸರ್ಕಾರಿ ಮಕ್ಕಳ ಪಾಡು ಯಾರಿಗೂ ಬೇಡ. ಎಂಬಂತಾಗಿದೆ.

Free bicycle delivery only by government grants
ಸರ್ಕಾರ ಅನುದಾನ ಕೊಟ್ಟರಷ್ಟೇ ಉಚಿತ ಬೈಸಿಕಲ್
author img

By

Published : Jul 2, 2021, 9:16 PM IST

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಸಾವು-ನೋವು ಅಷ್ಟೇ ಕೊಟ್ಟಿಲ್ಲ. ಬದಲಿಗೆ ಹಲವರ ಕನಸಿಗೆ, ಭವಿಷ್ಯಕ್ಕೆ ಅಡ್ಡಗಾಲು ಹಾಕಿದೆ.

ಹೌದು, ಕೊರೊನಾ ಹರಡುವಿಕೆಯ ಕಾರಣಕ್ಕೆ ಲಾಕ್ ಡೌನ್ ನಂತಹ ಅಸ್ತ್ರ ಪ್ರಯೋಗ ಮಾಡಿದ್ದು ಗೊತ್ತೇ ಇದೆ. ಇತ್ತ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾ-ಕಾಲೇಜಿಗೆ ಬೀಗ ಹಾಕಲಾಗಿತ್ತು.‌ ಈ ವರ್ಷದ ಶೈಕ್ಷಣಿಕ ಸಾಲು ಕೂಡ ಆನ್‌ಲೈನ್‌ನಲ್ಲೇ ನಡೆಯಲಿದ್ದು, ಸರ್ಕಾರಿ ಮಕ್ಕಳ ಪಾಡು ಯಾರಿಗೂ ಬೇಡ.‌ ದೂರದರ್ಶನದಲ್ಲಿ ಕಾರ್ಯಕ್ರಮಗಳು ಪ್ರಸಾರವಾದರೂ ಮಕ್ಕಳ ಶಿಕ್ಷಣಕಷ್ಟೇ ಅಲ್ಲ, ಅವರಗೆ ನೀಡಲಾಗುತ್ತಿದ್ದ ಹಲವು ಯೋಜನೆಗೆ ಕತ್ತರಿ ಹಾಕುವಂತಾಗಿದೆ.

ಹೌದು, ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಉಚಿತ ಬೈಸಿಕಲ್‌ ವಿತರಣಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಇದೀಗ ಕೊರೊನಾ ಹೊಡೆತಕ್ಕೆ ಸಿಲುಕಿದ್ದು ಇದೀಗ ಈ ಪ್ರೋತ್ಸಾಹದಾಯಕ ಯೋಜನೆಗೆ ತೊಡಕುಂಟಾಗಿದೆ. ಸರ್ಕಾರ ಅನುದಾನ ಕೊಟ್ಟರಷ್ಟೇ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆಯನ್ನ ವಿದ್ಯಾರ್ಥಿಗಳಿಗೆ ಮಾಡಲಾಗುತ್ತೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ. ಕಳೆದ ವರ್ಷ ಲಾಕ್‌ಡೌನ್​ ಬಿಕ್ಕಟ್ಟು ಇದ್ದರೂ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನ ನಿಲ್ಲಿಸುವುದಿಲ್ಲ ಅಂತ ಸಿಎಂ ಯಡಿಯೂರಪ್ಪ ಹೇಳಿದರು. ಆದರೆ 2021-22ನೇ ಶೈಕ್ಷಣಿಕ ಸಾಲಿನ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗುವುದು ಕಷ್ಟ ಎನ್ನಲಾಗುತ್ತಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲ, ಹೀಗಾಗಿ ಶಾಲಾ ಮಕ್ಕಳಿಗೆ ಸೈಕಲ್ ಸಿಗುವುದು ಅನುಮಾನವಾಗಿದೆ.

ಉಚಿತ ಬೈಸಿಕಲ್ ಯೋಜನೆ ಶುರುವಾಗಿದ್ದು ಯಾವಾಗ?

ಅಂದಹಾಗೆ, 2006-2007ನೇ ಸಾಲಿನಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲ್ತಿ ನೀಡಲಾಯ್ತು. ಇದರ ಮೂಲ ಉದ್ದೇಶವಾಗಿದ್ದು, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಉಚಿತ ಬೈಸಿಕಲ್ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ '8 ನೇ' ತರಗತಿಯ ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ 2007-2008ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿಪಿಎಲ್ ಕಾರ್ಡ್ ಕುಟುಂಬದ ಹೆಣ್ಣು-ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.

ಯಾರಿಗೆ ಇಲ್ಲ ಈ ಸೌಲಭ್ಯ?

ಬಸ್ ಪಾಸ್ ಹೊಂದಿದ ಹಾಗೂ ಹಾಸ್ಟೆಲ್ ಸೌಲಭ್ಯ ಪಡೆದ ಮಕ್ಕಳಿಗೆ ಈ ಸೌಲಭ್ಯ ನೀಡುವುದಿಲ್ಲ.‌ ಅಂದಹಾಗೇ ಮಕ್ಕಳ ದಾಖಲಾತಿಯನ್ನ ಉತ್ತೇಜಿಸಲು, ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡಿಕೊಡುವುದು, ಆತ್ಮಸ್ಥೈಯ ಹೆಚ್ಚಿಸುವುದು ಹಾಗೂ ಕಲಿಕೆಯ ಗುಣಮಟ್ಟವನ್ನ, ಗೈರು ಹಾಜರಾಗುವುದನ್ನ ತಪ್ಪಿಸುವುದು, ಪ್ರಯಾಣದ ವೇಳೆಯನ್ನ ತಗ್ಗಿಸುವುದು ಈ ಪ್ರೋತ್ಸಾಹದಾಯಕ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

ಇದನ್ನೂ ಓದಿ: Unlock 3.0: ನಾಳೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

2017-18ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 2,47,955 ಹೆಣ್ಣುಮಕ್ಕಳು, 2,57,941 ಗಂಡು ಮಕ್ಕಳಿಗೆ ಒಟ್ಟಾರೆ 5,05,896 ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡಲಾಗಿತ್ತು.‌ ಇದಕ್ಕಾಗಿ 172 ಕೋಟಿ ವೆಚ್ಚ ಮಾಡಲಾಗಿತ್ತು.

ಇನ್ನು ಬೈಸಿಕಲ್ ವಿತರಣೆ ಮಾಡುವ ಸಂದರ್ಭದಲ್ಲಿ ಪ್ರತಿ ಶಾಲೆಗೆ ಒಂದು ಸೆಟ್‌ ಟೂಲ್ ಕಿಟ್, ಪ್ರತಿ ಬೈಸಿಕಲ್ ಗೆ 5 ವರ್ಷಗಳ ವಾರಂಟಿ ಕಾರ್ಡ್ ನೀಡಲಾಗುತ್ತೆ. ಜೊತೆಗೆ ಸೈಕಲ್ ವಿತರಿಸಿದ ಆರು ತಿಂಗಳೊಳಗೆ ಕ್ಲಸ್ಟರ್ ಹಂತದಲ್ಲಿ ಬೈಸಿಕಲ್ ಸರ್ವಿಸಿಂಗ್ ಕ್ಯಾಂಪ್ ಮಾಡಲು ಅವಕಾಶ ಕಲ್ಪಿಸಲಾಗುತ್ತೆ.. ಆದರೆ ಈ ಸಲ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಹೊಡೆತದಿಂದ ಇದೀಗ ಈ ಯೋಜನೆಗೆ ಈ ವರ್ಷ ಎಳ್ಳು ನೀರು ಬಿಡುವುದು ಭಾಗಶಃ ಆಗಿದ್ದು. ಮುಂದಿನ ವರ್ಷವೂ ಇದೇ ಪರಿಸ್ಥಿತಿ ಮುಂದುವರೆಯುತ್ತಾ ಎಂದು ಕಾದು ನೋಡಬೇಕಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.