ಬೆಂಗಳೂರು: ಇಲ್ಲಿನ ಪ್ರತಿಷ್ಠಿತ ಟೆಕ್ ಸಂಸ್ಥೆಯಾದ ಇನ್ಫೋಸಿಸ್ ಹೆಸರಲ್ಲಿ ಸೈಬರ್ ಖದೀಮರು ಲಕ್ಷ ಲಕ್ಷ ರೂಪಾಯಿ ಎಗರಿಸಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಲೋಗೋ ಬಳಕೆ ಮಾಡಿಕೊಂಡು ಸೈಬರ್ ಖದೀಮರು ವಂಚನೆಗೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.
ಇನ್ಫೋಸಿಸ್ ಕಂಪನಿಯಿಂದ ನಿಮಗೆ ಕೆಲಸದ ಆಫರ್ ಬಂದಿದೆ ಎಂದು ಕರೆ ಮಾಡಿ ಸೈಬರ್ ಖದೀಮರು ವಂಚನೆ ಮಾಡಿದ್ದಾರೆ. ಇನ್ಫೋಸಿಸ್ ಹೆಸರು ಹೇಳಿದ ತಕ್ಷಣ ಉದ್ಯೋಗಾಕಾಂಕ್ಷಿಗೆ ಖುಷಿಯಾಗಿದ್ದು, ಸೈಬರ್ ಖದೀಮರು ಕೇಳಿದ ಎಲ್ಲದಕ್ಕೂ ಉತ್ತರ ನೀಡಿದ್ದಾನೆ.
ಮತ್ತೆ ಮತ್ತೆ ಕರೆ ಮಾಡಿದ ಚಾಲಾಕಿಗಳು ಆ ಫೀಸ್ ಈ ಫೀಸ್ ಅಂತಾ ಹೇಳಿಕೊಂಡು 4 ಲಕ್ಷಕ್ಕೂ ಹೆಚ್ಚು ಹಣವನ್ನು ಉದ್ಯೋಗಾಕಾಂಕ್ಷಿಗಳಿಂದ ಎಗರಿಸಿದ್ದಾರೆ. ಖಾತೆಗೆ ಹಣ ಬಂದ ತಕ್ಷಣ ಖದೀಮರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಸದ್ಯ ನಾಲ್ಕು ಲಕ್ಷ ರೂಪಾಯಿ ಕಳೆದುಕೊಂಡು ಕಂಗಲಾಗಿರುವ ಉದ್ಯೋಗಾಕಾಂಕ್ಷಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಲಂಚಾವತಾರ.. ಗ್ರಾಮ ಪಂಚಾಯತ್ ಪಿಡಿಓ, ಕಾರ್ಯದರ್ಶಿ ಎಸಿಬಿ ಬಲೆಗೆ