ಬೆಂಗಳೂರು: ಬಾಡಿಗೆಗೆ ಲ್ಯಾಪ್ ಟಾಪ್ಗಳನ್ನ ಪಡೆದು ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸೈಫ್ ಪಾಷ (25) ಹಾಗೂ ಮೊಯಿನುದ್ದೀನ್ ಖುರೇಷಿ (33) ಬಂಧಿತರು. ಇವರಿಬ್ಬರು ರೆಂಟ್ ಶೇರ್, ಐ ನ್ಯಾಪ್, ಡಿಜಿಟ್ರಾನ್, ಅಕ್ಷತ ಇನ್ಫೊಟೆಕ್ ಕಂಪನಿಗಳಿಂದ ಲ್ಯಾಪ್ ಟಾಪ್ಗಳನ್ನು ಬಾಡಿಗೆಗೆ ಪಡೆದು ನಂತರ ಜಸ್ಟ್ ಡಯಲ್ ಮೂಲಕ ಲ್ಯಾಪ್ ಟಾಪ್ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಕಂಪನಿ ನಷ್ಟದಲ್ಲಿದೆ, ಕಡಿಮೆ ದರದಲ್ಲಿ ಲ್ಯಾಪ್‌ಟಾಪ್ ಕೊಡುವುದಾಗಿ ನಂಬಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ವಿವಿಧ ಲ್ಯಾಪ್ ಟಾಪ್ ಕಂಪನಿಯ ಮಾಲೀಕರು ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 46 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 96 ಲ್ಯಾಪ್ ಟಾಪ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಗಳು ಇನ್ನಷ್ಟು ಬೇರೆ ಬೇರೆ ಅಪರಾಧ ಕೃತ್ಯ ಮಾಡಿರುವ ಕಾರಣ ತನಿಖೆ ಮುಂದುವರೆದಿದೆ.