ಕಲಬುರಗಿ: ಸಾರಿಗೆ ನೌಕರರ ಮುಷ್ಕರ ವಾಪಾಸ್ಸು ಪಡೆದ ಹಿನ್ನಲೆ ಜೇವರ್ಗಿಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ. ಜೇವರ್ಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಬಳಿ ಜೇವರ್ಗಿ ಸಾರಿಗೆ ನೌಕರರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಪ್ರಯಾಣಿಕರಿಗೂ ಸಿಹಿ ವಿಸರಿಸಿದ್ದಾರೆ. ಮುಷ್ಕರ ಮೊಟಕುಗೊಳಿಸಿ ಬಸ್ ಸಂಚಾರ ಪುನಾರಂಭಿಸುವ ಮೂಲಕ ಸಾರ್ವಜನಿಕರಿಗೆ ಅನಕುಲ ಕಲ್ಪಿಸಿದ ನೌಕರರನ್ನು ಪ್ರಯಾಣಿಕರು ಅಭಿನಂದಿಸಿದ್ದಾರೆ.
LIVE UPDATE: ಸಾರಿಗೆ ನೌಕರರ ಮುಷ್ಕರ ಅಂತ್ಯ... ಸಿಬ್ಬಂದಿಯಿಂದ ಸಂಭ್ರಮಾಚರಣೆ
17:00 December 14
ಸಿಹಿ ಹಂಚಿ ಸಂಭ್ರಮಿಸಿದ ಸಾರಿಗೆ ನೌಕರರು
16:15 December 14
ಮುಷ್ಕರಕ್ಕೆ ತೆರೆ
ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಮುಷ್ಕರಕ್ಕೆ ತೆರೆಬಿದೆ. 9 ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಿದ್ಧವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ ಕಾರಣದಿಂದ ಮುಷ್ಕರ ಅಂತ್ಯವಾಗಿದೆ. ಸಚಿವರು ಮಾತು ತಪ್ಪಿದರೆ ಮತ್ತೆ ಮುಷ್ಕರದ ಎಚ್ಚರಿಕೆ ನೀಡಿದ್ದು, ಸಂಜೆ 5 ಗಂಟೆಯಿಂದ ಬಸ್ಗಳು ರಸ್ತೆಗಿಳಿಯಲಿವೆ.
15:28 December 14
'ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ರೆ ಕ್ರಮ'
ದಾವಣಗೆರೆ: ಮುಷ್ಕರದ ಬಿಸಿ ಕಡಿಮೆಯಾಗುತ್ತಿದ್ದು ದಾವಣಗೆರೆಯಲ್ಲೂ ಬಸ್ಗಳ ಸಂಚಾರ ಆರಂಭವಾಗಿದೆ. ಪೊಲೀಸ್ ಭದ್ರತೆಯಲ್ಲಿ ಬಸ್ಗಳು ರಸ್ತೆಗಿಳಿದಿದ್ದು, ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ಹತ್ತುವ ದೃಶ್ಯಗಳು ಕಂಡು ಬರುತ್ತಿವೆ. ಯಾರಾದರೂ ತೊಂದರೆ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
15:10 December 14
ಅಥಣಿಯಲ್ಲಿ ಬಸ್ ಸಂಚಾರ ಆರಂಭ
ಅಥಣಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಕಾವು ಕಡಿಮೆಯಾಗಿದ್ದು, ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲಿ ಬಸ್ಗಳು ಸಂಚಾರ ಆರಂಭಿಸಿವೆ. ಅಥಣಿ ಪೋಲಿಸ್ ಹಾಗೂ ತಹಶೀಲ್ದಾರ್ ದುಂಡಪ್ಪ ಕೋಮಾರ ನೇತೃತ್ವದಲ್ಲಿ ಬಸ್ ಸಂಚರಿಸುತ್ತಿವೆ. ಮಹಾರಾಷ್ಟ್ರ, ವಿಜಯಪುರ, ಬೆಳಗಾವಿ ಚಿಕ್ಕೋಡಿ ಸೇರಿದಂತೆ ಗ್ರಾಮೀಣ ಭಾಗಗಳಿಗೆ ಬಸ್ಗಳು ತೆರಳುತ್ತಿವೆ.
15:00 December 14
ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ
ಹಾವೇರಿ: ನಗರದಲ್ಲಿ ನಿಧಾನವಾಗಿ ಬಸ್ ಸಂಚಾರ ಆರಂಭವಾಗಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಗಳು ಹುಬ್ಬಳ್ಳಿಯತ್ತ ತೆರಳಿವೆ. ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದು ವಾಪಸ್ ಡಿಪೋ ಸೇರಿದ್ದ ಬಸ್ಗಳು ಇದೀಗ ಸಂಚಾರ ಆರಂಭಿಸಿವೆ.
13:08 December 14
ಸಿಎಂ ನಿವಾಸದಲ್ಲಿ ಹಿರಿಯ ಸಚಿವರ ಮಹತ್ವದ ಸಭೆ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಹಿರಿಯ ಸಚಿವರ ಸಭೆ ಮುಂದುವರೆದಿದೆ. ಕೋಡಿಹಳ್ಳಿ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ಯವಾಗಿದ್ದು, ಸರ್ಕಾರದ ಪ್ರತಿನಿಧಿಯನ್ನು ಸ್ಥಳಕ್ಕೆ ಕಳುಹಿಸಬೇಕಾ?, ಬೇಡವಾ? ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ.
ಸಭೆ ನಡುವೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಇಲಾಖೆಗೆ ಸಂಬಂಧಿಸದ ವ್ಯಕ್ತಿಯ ಸ್ವ ಪ್ರತಿಷ್ಠೆ ಇದು. ಜನರಿಗೆ ಸಮಸ್ಯೆ ಆಗಿದೆ. ಸಾರಿಗೆ ನೌಕರರ ಮಾನ್ಯತೆಯುಳ್ಳ ಯೂನಿಯನ್ಗಳ ಹೇಳಿಕೆಯನ್ನು ಕೋಡಿಹಳ್ಳಿ ಧಿಕ್ಕರಿಸಿದ್ದಾರೆ. ಯೂನಿಯನ್ಗಳು, ಎಸ್ಸಿ, ಎಸ್ಟಿ ನೌಕರರ ಸಂಘ ಮುಷ್ಕರಕ್ಕೆ ಬೆಂಬಲ ಕೊಟ್ಟಿಲ್ಲ ಎಂದರು.
ನಾವು ಭರವಸೆ ಕೊಟ್ಟ 9 ಬೇಡಿಕೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಈಗಾಗಲೇ 1,500 ಬಸ್ಗಳು ಓಡಾಡುತ್ತಿವೆ. ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಮರಳಿ ಎಂದು ಮನವಿ ಮಾಡಿದರು.
12:18 December 14
ಕಿಡಿಗೇಡಿಗಳಿಂದ ಕಲ್ಲು ತೂರಾಟ:
ಬೀದರ್: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಮುಂದುವರೆದಿದ್ದು ಈ ವೇಳೆ ಈಶಾನ್ಯ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗದ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ನಗರದ ಬರಿದ ಶಾಹಿ ಗಾರ್ಡನ್ ಬಳಿ ಕಲಬುರಗಿ ಡಿಪೋದ ಬಸ್ನಲ್ಲಿ 25ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಬಸ್ನ ಹಿಂಭಾಗಕ್ಕೆ ಕಲ್ಲು ತೂರಿದ್ದು, ಗಾಜು ಪುಡಿ ಪುಡಿಯಾಗಿದೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
12:18 December 14
ಕಾರವಾರದಲ್ಲಿ ಆರಂಭಗೊಂಡ ಬಸ್ ಸಂಚಾರ:
ಕಾರವಾರ: ಸಾರಿಗೆ ನೌಕರರ ಮುಷ್ಕರದಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಕಾರವಾರದಲ್ಲಿ ಇಂದು ಆರಂಭವಾಗಿದೆ. ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಕೆಲವಡೆ ಬಸ್ ಸಂಚಾರ ಆರಂಭಗೊಂಡಿದೆ. ಕಾರವಾರದಲ್ಲಿ ಸಹ ಹೊರ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯವಾಗಿ ಓಡಾಡುವ ಬಸ್ ಸಂಚಾರ ಆರಂಭಗೊಂಡಿದ್ದು, ಪರಿಣಾಮ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
11:56 December 14
ತುಮಕೂರಿನಲ್ಲಿ ಮುಂದುವರೆದ ಪ್ರತಿಭಟನೆ:
ತುಮಕೂರು: ತುಮಕೂರು ಬಸ್ ನಿಲ್ದಾಣದಿಂದ ಇಂದು ಬೆಳಗ್ಗೆ ಆರು ಬಸ್ಗಳು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದವು. ಇನ್ನೊಂದೆಡೆ ಕೆಎಸ್‌ಆರ್‌ಟಿಸಿ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ. ನೂರಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
11:55 December 14
ಮೆಜೆಸ್ಟಿಕ್ ಬಳಿ ಪೊಲೀಸ್ ಬಿಗಿ ಭದ್ರತೆ:
ಬೆಂಗಳೂರು: ಹಂತ ಹಂತವಾಗಿ ಬಸ್ ಸಂಚಾರ ಆರಂಭಾಗಿದೆ. ಜೊತೆಗೆ ಮೆಜೆಸ್ಟಿಕ್ನಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಬಸ್ ಸಂಚಾರ ಪ್ರಾರಂಭವಾದ ಹಿನ್ನೆಲೆ ಕನ್ನಡಪರ ಸಂಘಟನೆಯ ಮುಖಂಡ ಶಿವಕುಮಾರ್ ಸಂತಸ ವ್ಯಕ್ತಪಡಿಸಿ, ನಿರ್ವಾಹಕರು ಮತ್ತು ಚಾಲಕರಿಗೆ ಹೂ ನೀಡಿ ಸ್ವಾಗತಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಅವರ ನೇತೃತ್ವದಲ್ಲಿ ಮೆಜೆಸ್ಟಿಕ್ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
11:31 December 14
ಸಿಎಂ ಜೊತೆ ಸಚಿವರ ಮಹತ್ವದ ಸಭೆ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸದಲ್ಲಿ ಇಂದು ಸಚಿವರ ಮಹತ್ವದ ಸಭೆ ಆರಂಭಗೊಂಡಿದೆ. ಪರ್ಯಾಯ ವ್ಯವಸ್ಥೆ, ಕಾನೂನು ಕ್ರಮದಂತಹ ನಿರ್ಧಾರಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಲಾಗುತ್ತಿದೆ.
ಈ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ್, ಕಾನೂನು ಸಚಿವ ಮಾಧುಸ್ವಾಮಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪಾಲ್ಗೊಂಡಿದ್ದಾರೆ.
ಕಳೆದ ರಾತ್ರಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಂತೆ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಸೇವೆ ಆರಂಭಗೊಂಡಿರುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನಲ್ಲಿ ಹಂತ ಹಂತವಾಗಿ ಸಾರಿಗೆ ಸೇವೆಯನ್ನು ಪೊಲೀಸ್ ಭದ್ರತೆಯಲ್ಲಿ ಆರಂಭಿಸಿರುವ ಕುರಿತು ಸಚಿವರ ಜೊತೆ ಮಾತುಕತೆ ನಡೆಸಿದ ಸಿಎಂ, ಬಸ್ ಸಂಚಾರ ಆರಂಭದ ಕುರಿತು ಪರಿಶೀಲಿಸಿದರು.
11:31 December 14
ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮ :
ಹುಬ್ಬಳ್ಳಿ: ಸಾರಿಗೆ ನೌಕರರಲ್ಲಿ ಕೆಲವು ಗೊಂದಲಗಳಿವೆ. ಹೀಗಾಗಿ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಮಧ್ಯಾಹ್ನದ ಒಳಗೆ ವಾಯುವ್ಯ ಕರ್ನಾಟಕ ವಿಭಾಗದ ಎಲ್ಲಾ ಬಸ್ಗಳು ಸಂಚಾರ ಆರಂಭಿಸುತ್ತವೆ ಎಂದು ವಾಯುವ್ಯ ಕರ್ನಾಟಕ ಸಂಸ್ಥೆ ಎಂಡಿ ಕೃಷ್ಣ ಭಾಜಪೇಯಿ ಹೇಳಿದ್ದಾರೆ.
ಸಿಬ್ಬಂದಿ ಕೆಲಸಕ್ಕೆ ಮರಳಲು ಮನವೊಲಿಕೆ ಮಾಡಲಾಗುತ್ತಿದೆ. ಎಲ್ಲರೂ ಆಗಮಿಸುವ ನಿರೀಕ್ಷೆ ಇದೆ. ಸರ್ಕಾರದ ಜೊತೆಗೆ ನೌಕರರ ಮಾತುಕತೆ ನಡೆದಿದೆ. ಕೆಲಸಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
10:29 December 14
ಚಿಕ್ಕೋಡಿ ವಿಭಾಗದಲ್ಲಿ ಬಸ್ ಸಂಚಾರ ಆರಂಭ
ಪರದಾಡುತ್ತಿದ್ದ ಪ್ರಯಾಣಿಕರೀಗ ನಿರಾಳವಾಗಿದ್ದಾರೆ. ಬೆಳಗಾವಿ, ಮೀರಜ್, ನಿಪ್ಪಾಣಿ, ಬಾಗಲಕೋಟೆ ನಗರಗಳಿಗೆ ಚಿಕ್ಕೋಡಿಯಿಂದ ಬಸ್ ತೆರಳಿವೆ. ಅಹಿತಕರ ಘಟನೆ ನಡೆಯದಂತೆ ನಿಲ್ದಾಣಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ.
10:08 December 14
ಧಾರವಾಡ: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿನ್ನೆಲೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದು ಕಾರ್ಯಾರಂಭ ಮಾಡುತ್ತಿವೆ. ಧಾರವಾಡದಲ್ಲಿ ತಹಶೀಲ್ದಾರ್ ಡಾ. ಸಂತೋಷ್ ಬಿರಾದಾರ ಸಮ್ಮುಖದಲ್ಲೇ ಬಸ್ ಸಂಚಾರ ಆರಂಭಗೊಂಡಿದೆ.
10:07 December 14
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಿಂಗಸುಗೂರು ಘಟಕದಿಂದ ಪೊಲೀಸ್ ಸರ್ಪಕಾವಲಿನಲ್ಲಿ ಬಸ್ ಸಂಚಾರ ಆರಂಭಗೊಂಡಿವೆ. ಬಸ್ ಸಂಚಾರ ಆರಂಭ ಆಗುತ್ತಿದ್ದಂತೆ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರುತ್ತಿರುವ ಚಿತ್ರಣ ಕಂಡು ಬಂತು.
10:07 December 14
ತುಮಕೂರಿನಿಂದ ಬೆಂಗಳೂರಿಗೆ ತೆರಳಿದ ಬಸ್ಗಳು
ತುಮಕೂರು: ಬಸ್ ನಿಲ್ದಾಣದಿಂದ ಇಂದು 6 ಕೆಎಸ್‌ಆರ್‌ಟಿಸಿ ಬಸ್ಗಳು ತುಮಕೂರಿನಿಂದ ಬೆಂಗಳೂರಿಗೆ ಪೊಲೀಸ್ ಭದ್ರತೆಯಲ್ಲಿ ತೆರಳಿದವು. ಬಸ್ ನಲ್ಲಿ ಪ್ರಯಾಣಿಕರು ಕೂಡ ಕಿಕ್ಕಿರಿದು ತುಂಬಿದ್ದರು. ತುಮಕೂರು ಬಸ್ ನಿಲ್ದಾಣದಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
10:07 December 14
ಕಲಬುರಗಿ: ನಗರದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭಗೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ 16 ಬಸ್ಗಳನ್ನು ಕೇಂದ್ರ ಬಸ್ ನಿಲ್ದಾಣದಿಂದ ಹೊರ ಬಿಡಲಾಗಿದೆ. ಪ್ರತಿ ಬಸ್‌ಗೂ ಒಂದು ಎಸ್ಕಾರ್ಟ್ ವಾಹನ ನಿಯೋಜಿಸಲಾಗಿದೆ. ಹೈದರಾಬಾದ್, ವಿಜಯಪುರ ಹಾಗೂ ಜಿಲ್ಲೆಯ ಹಲವಡೆ ಬಸ್ಗಳು ಸಂಚರಿಸಲಿವೆ.
10:07 December 14
ಕುಷ್ಟಗಿ(ಕೊಪ್ಪಳ): ಭಾನುವಾರ ತಡ ರಾತ್ರಿ ಕುಷ್ಟಗಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಗೆ ಕಲ್ಲು ತೂರಲಾಗಿದ್ದು, ಈ ಹಿನ್ನೆಲೆ ಕುಷ್ಟಗಿ ಬಸ್ ಘಟಕದ ನೌಕರನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
10:01 December 14
ರಾಯಚೂರು: ಪೊಲೀಸರ ಭದ್ರತೆಯಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕೇಂದ್ರೀಯ ಬಸ್ ನಿಲ್ದಾಣದಿಂದ ಪೊಲೀಸ್ ಭದ್ರತೆಯಲ್ಲಿ ರಾಯಚೂರುನಿಂದ ಹೈದರಾಬಾದ್‌ಗೆ ಬಸ್ ಸಂಚರಿಸಿದವು.
09:47 December 14
ಚಾಲಕ, ನಿರ್ವಾಹಕರಿಲ್ಲದೇ ಪ್ರಯಾಣಿಕರ ಪರದಾಟ
ಬೆಳಗಾವಿ: ನಗರ ಕೇಂದ್ರ ಬಸ್ ನಿಲ್ದಾಣದಿಂದ ಇಂದು ಬೆಳಿಗ್ಗೆ ಪೊಲೀಸ್ ಭದ್ರತೆಯಲ್ಲಿ ರಾಜ್ಯ ಸೇರಿದಂತೆ ಇತರೆಡೆಗೆ ಸಂಚರಿಸುವ ಬಸ್ ಗಳನ್ನು ಆರಂಭಿಸಲಾಗಿದೆ. ಆದರೆ, ಬಸ್ಗಳಿಗೆ ಚಾಲಕ ಮತ್ತು ನಿರ್ವಾಹಕರಿಲ್ಲದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
09:47 December 14
ಬಸ್ಗಳಿಗೆ ಎಸ್ಕಾರ್ಟ್
ಚಿತ್ರದುರ್ಗ: ಎಸ್ಕಾರ್ಟ್ ಭದ್ರತೆ ಮೂಲಕ ಇಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕೋಟೆನಾಡಿನಲ್ಲಿ ಆರಂಭಗೊಂಡಿದೆ. ಸಾರಿಗೆ ಸಚಿವ ಕೆಎಸ್‌ಆರ್‌ಟಿಸಿ ನೌಕಕರ ಬೇಡಿಕೆಗಳಿಗೆ ಸ್ಫಂದನೆ ಮಾಡುವುದಾಗಿ ಭರವಸೆ ನೀಡಿರುವ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಸಿಬ್ಬಂದಿ ಮನವೊಲಿಸಿ ಇಂದು ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.
ಪ್ರತಿ ಬಸ್‌ಗೂ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇತ್ತ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಕೆಎಸ್‌ಆರ್‌ಟಿಸಿ ಡಿಸಿ ವಿಜಯಕುಮಾರ್ ಮನವಿ ಮಾಡಿದ್ದಾರೆ. ಮುಷ್ಕರ ಹೆಸರಿನಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾದರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಸಾರಿಗೆ ಡಿಸಿ ಎಚ್ಚರಿಕೆ ನೀಡಿದ್ದಾರೆ.
09:35 December 14
ಹೊಸಪೇಟೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬಸ್ ಸಂಚಾರ
ಹೊಸಪೇಟೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಬಳ್ಳಾರಿ, ಕೂಡ್ಲಿಗಿ, ಹರಿಹರ, ಹಂಪಿ, ಗಂಗಾವತಿ, ಹುಬ್ಬಳ್ಳಿ, ಬೆಂಗಳೂರ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಭಾಗಗಳಿಗೆ ಬಸ್ ಸಂಚಾರ ಆರಂಭವಾಗಿದೆ.
ಸುಮಾರು 20 ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿಯೊಂದು ಬಸ್ಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
09:16 December 14
ಗಣಿನಾಡಿನಲ್ಲಿ ಸಾರಿಗೆ ನೌಕರರ ಮುಷ್ಕರ ಮುಕ್ತಾಯ
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿಂದು ಸಾರಿಗೆ ನೌಕರರ ಪ್ರತಿಭಟನೆ ಮುಕ್ತಾಯಗೊಂಡಿದ್ದು, ಬಿಗಿಯಾದ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್ ಗಳ ಸಂಚಾರ ಆರಂಭವಾಗಿದೆ. ಬೆಳಿಗ್ಗೆಯಿಂದಲೂ ಜಿಲ್ಲೆಯ ನಾನಾ ಕಡೆಗಳಿಗೆ ಹಾಗೂ ನೆರೆಯ ಆಂಧ್ರಪ್ರದೇಶ ಪ್ರದೇಶ ಮಾರ್ಗವಾಗಿ ತೆರಳುತ್ತಿರುವ ಬಸ್ ಗಳನ್ನ ಪೊಲೀಸರ ಭದ್ರತೆಯಲ್ಲಿ ಕಳಿಸಿಕೊಡಲಾಯಿತು.
09:11 December 14
ಎಲ್ಲಾ ಡಿಪೋಗಳಿಗೆ ಖಾಕಿ ಭದ್ರತೆ
ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ಈಡೇರದ ಕಾರಣ ಬಸ್ಗಳು ಡಿಪೋ ಬಳಿ ನಿಂತಿವೆ. ಯಶವಂತಪುರ, ಮೆಜೆಸ್ಟಿಕ್,ಬನಶಂಕರಿ ಸೇರಿದಂತೆ ಬಹುತೇಕ ಬಸ್ ನಿಲ್ದಾಣದಲ್ಲಿ ಅತಿ ಹೆಚ್ಚು ಪೊಲೀಸ್ ಭದ್ರತೆ ನೀಡಲಾಗಿದೆ. ನಿನ್ನೆ ಸ್ವಯಂ ಪ್ರೇರಿತರಾಗಿ ಚಾಲಕರು ಬಂದಿದ್ದರು. ಇಂದು ಮಧ್ಯಾಹ್ನದ ನಂತರ ಚಾಲಕರು ಬರುವ ನೀರಿಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಹೀಗಾಗಿ ಬಂದವರಿಗೆ ಪೊಲೀಸರ ರಕ್ಷಣೆಯಲ್ಲಿ ಬಸ್ ಓಡಿಸಲು ಅವಕಾಶ ಮಾಡಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ.
09:11 December 14
ವಿಜಯಪುರ: ಇಂದು ಮುಂಜಾನೆಯಿಂದ ಕೇಂದ್ರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಸಂಚಾರ ನಡೆಸಿಲ್ಲ. ಈ ಹಿನ್ನೆಲೆ ಪ್ರಯಾಣಿಕರು ಪರದಾಡಬೇಕಾಯಿತು. ನಿಲ್ದಾಣದ ಹೊರಗೆ ಕೆಲ ಖಾಸಗಿ ಬಸ್ ಗಳು ಪ್ರಯಾಣಿಕರಿಗೆ ಸೇವೆ ಒದಗಿಸುವುದರ ಜತೆ ಹೆಚ್ಚಿನ ಬೆಲೆ ಸಹ ವಸೂಲಿ ಮಾಡುವುದು ಕಂಡು ಬಂತು.
ಇಂದು ಛಟ್ಟಿ ಅಮವಾಸ್ಯೆ ಹಿನ್ನೆಲೆಯಲ್ಲಿ ಗುಡ್ಡಾಪುರ, ಅರಕೇರಿಯ ದೇವಸ್ಥಾನದಲ್ಲಿ ನಡೆಯುವ ವಿಶೇಷ ಕಾರ್ತಿಕೋತ್ಸವಕ್ಕೆ ತೆರಳಲು ಹೆಚ್ಚಾಗಿ ಭಕ್ತರು ಖಾಸಗಿ ಬಸ್ ಗಳ ಮೇಲೆ ಅವಲಂಬಿತರಾಗಬೇಕಾಗಿದೆ.
09:10 December 14
ಸಾರ್ವಜನಿಕರಿಗೆ ತೊಂದರೆ ಮಾಡುವವರ ವಿರುದ್ಧ ಕಠಿಣ ಕ್ರಮ
ಬೆಳಗಾವಿ: ಸಾರ್ವಜನಿಕರಿಗೆ ತೊಂದರೆ ಹಾಗೂ ಬಸ್ಗಳಿಗೆ ಕಲ್ಲು ಹೊಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಸ್‌ಸಂಚಾರ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಚಿಕ್ಕೋಡಿ ಗೋಕಾಕ್, ಕೊಲ್ಲಾಪುರ, ಹುಕ್ಕೇರಿ ಹಾಗೂಸಂಕೇಶ್ವರ ಸೇರಿದಂತೆ ಇತರ ಕಡೆಗೆ ತೆರಳುವ ಬಸ್ ಗಳು ಸಂಚಾರ ಆರಂಭಿಸಿವೆ. ಜನರು ಕೂಡ ಆತ್ಮವಿಶ್ವಾಸದಿಂದ ಬಸ್ ನಿಲ್ದಾಣದ ಕಡೆಗೆ ಆಗಮಿಸುತ್ತಿದ್ದಾರೆ. ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
09:10 December 14
ಕಲಬುರಗಿ: ಬಸ್ ಸಂಚಾರ ಆರಂಭಗೊಳ್ಳದ ಹಿನ್ನೆಲೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಸ್ ಸಂಚಾರ ಪ್ರಾರಂಭವಾಗಬಹುದೆಂದು ಕೆಲ ಪ್ರಯಾಣಿಕರು ನಿಲ್ದಾಣದಕ್ಕೆ ಆಗಮಿಸಿದ್ದಾರೆ.
09:10 December 14
ಹಾವೇರಿ: ಸಿಬ್ಬಂದಿ ಕರೆಸಿ ಬಸ್ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆ ಹಾವೇರಿ ಒಂದು ಬಸ್ ಬಂದು ನಿಂತಿದೆ. ಇನ್ನು ಬೆರಳೆಣಿಕೆಯಷ್ಟು ಪ್ರಯಾಣಿಕರು ಬಸ್ ನಿಲ್ದಾಣಕಕ್ಎ ಬರುತ್ತಿದ್ದಾರೆ.
08:23 December 14
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟದೆ. ಹಲವು ಕಡೆ ಯಾವುದೇ ಬಸ್ಗಳು ರಸ್ತೆಗಿಳಿಯದೇ ಡಿಪೋದಲ್ಲಿ ಯಥಾಪ್ರಕಾರ ನಿಂತಲ್ಲೇ ನಿಂತಿವೆ. ನಿನ್ನೆ ಯಾರೂ ಮುಷ್ಕರ ವಾಪಸ್ ಪಡೆಯಬೇಡಿ ಎಂಬ ಕರೆ ಕೊಟ್ಟ ಹಿನ್ನೆಲೆ ಇಂದು ನಗರದಲ್ಲಿ ಯಾವುದೇ ಬಸ್ ಸಂಚರಿಸುತ್ತಿಲ್ಲ. ಕೆಲವು ಕಡ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ನಡೆಸಲಾಗುತ್ತಿದೆ.