ETV Bharat / state

ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ: ಸೋಂಕಿತರ ಸಂಖ್ಯೆ 105 - nanjanagud

ರಾಜ್ಯದಲ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದೆ. ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ನಾಲ್ಕು ಮಂದಿಯ ಟ್ರಾವೆಲ್​ ಹಿಸ್ಟರಿಯನ್ನು ಪತ್ತೆ ಹಚ್ಚಲಾಗಿದೆ.

four fresh corona confirmed cases found in karnataka
ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ
author img

By

Published : Apr 1, 2020, 2:45 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿತರ ವಿವರ ಹೀಗಿದೆ:

102ನೇ ಸೋಂಕಿತ ವ್ಯಕ್ತಿ ಬೆಂಗಳೂರಿನ ನಿವಾಸಿಯಾಗಿದ್ದು, ನಗರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ನಿಗಾ ವಹಿಸಲಾಗಿದೆ. 103ನೇ ಸೋಂಕಿತ 37 ವರ್ಷದ ಮೈಸೂರಿನ ನಂಜನಗೂಡು ನಿವಾಸಿಯಾಗಿದ್ದು ಪ್ರಾಥಮಿಕ ತನಿಖೆ ಪ್ರಕಾರ, ಔಷಧ ತಯಾರಿಕಾ ಕಂಪನಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ. ಈ ವ್ಯಕ್ತಿಯನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಇದೇ ಔಷಧ ಕಂಪನಿಯಲ್ಲಿ ರಾಜ್ಯದ 52ನೇ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದ.

104ನೇ ಸೋಂಕಿತ ವ್ಯಕ್ತಿ 27 ವರ್ಷದವನಾಗಿದ್ದು ಇದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.

105ನೇ ಸೋಂಕಿತ ವ್ಯಕ್ತಿ ಬೆಂಗಳೂರು ಜಿಲ್ಲೆಯ ನಿವಾಸಿಯಾಗಿದ್ದ 33 ವರ್ಷ ವಯಸ್ಸಾಗಿದೆ. ಈ ವ್ಯಕ್ತಿಯನ್ನು ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.