ETV Bharat / state

ವಿಧಿ 370 ರದ್ದು ಮೂಲಕ ವಿ.ಪಿ.ಸಿಂಗ್ ಕನಸು ನನಸು: ಲಿಂಬಾವಳಿ - bangalore latest news

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಣಿವೆ ರಾಜ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ. 370, 35ಎ ವಿಧಿ ರದ್ದತಿಯು ಕೇಂದ್ರದ ಐತಿಹಾಸಿಕ ನಿರ್ಧಾರವಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

73ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ
author img

By

Published : Aug 15, 2019, 7:42 PM IST

ಬೆಂಗಳೂರು: ಕೇಂದ್ರ ಸರ್ಕಾರವೂ 370, 35ಎ ವಿಧಿಯನ್ನು ರದ್ದು ಪಡಿಸುವ ಮೂಲಕ ಮಾಜಿ ಪ್ರಧಾನಿ ವಿ.ಪಿ.ಸಿಂಗ್​ ಅವರ ಕನಸನ್ನು ಸಾಕಾರಗೊಳಿಸಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ

ಇಲ್ಲಿನ ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

73 ವರ್ಷಗಳ ಬಳಿಕ ಐತಿಹಾಸಿಕ ತೀರ್ಮಾವನ್ನು ಬಿಜೆಪಿ ಸರ್ಕಾರ ತೆಗೆದುಕೊಂಡಿದೆ. ಕಣಿವೆ ರಾಜ್ಯದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವು ಸಂತಸ ತಂದಿದೆ ಎಂದರು.

ಧ್ವಜಾರೋಹಣವನ್ನು ತಾಲೂಕು ದಂಡಾಧಿಕಾರಿ ತೇಜಸ್ ಕುಮಾರ್​ ನೆರವೇರಿಸಿದರು. 20ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆ.ಆರ್.ಪುರ ಠಾಣೆಯ ಆರಕ್ಷಕ ಸಿಬ್ಬಂದಿ, ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಸುವ ಮೂಲಕ ರಾಷ್ಟ್ರ ಧ್ವಜ ಹಾಗೂ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Intro:ಸರಳವಾಗಿ ಆಚರಿಸಿದ
೭೩ನೇ ಸ್ವಾತಂತ್ರ್ಯ ದಿನಾಚರಣೆ .

ಬೆಂಗಳೂರು ಪೂರ್ವ ತಾಲೂಕು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಕೆಆರ್ ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 73 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ತಾಲೂಕು ದಂಡಾಧಿಕಾರಿ ತೇಜಸ್ ಕುಮಾರ್ ರಿಂದ ನೆರವೇರಿಸಿದರು. ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಆರ್ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿಗಳು ಸೇರಿದಂತೆ ೨೦ ಕ್ಕೆ ಹೆಚ್ಚು ಶಾಲೆಯ ಮಕ್ಕಳು ಭಾಗವಹಿಸಿದ್ದರು. ಕೆ.ಆರ್.ಪುರ ಠಾಣೆಯ ಆರಕ್ಷಕ ಸಿಬ್ಬಂದಿ, ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಸುವ ಮೂಲಕ ರಾಷ್ಟ್ರ ಧ್ವಜ ಹಾಗೂ ಅಥಿತಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಶಾಲಾ ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಮಾಡಿದರು.

Body:ಕೇಂದ್ರ ಸರ್ಕಾರದ ಕಾರ್ಯವನ್ನು ನಾವಿಂದು ಪ್ರಶಂಸಿಸಬೇಕಿದ್ದು ೭೩ ವರ್ಷದ ನಂತರ ಇಂತಹ ನಡೆಗಳು ಐತಿಹಾಸಿಕವಾಗಿ ನಿಲ್ಲಲಿವೆ ಎಂದು ತಿಳಿಸಿದರು.

ನೆರೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.Conclusion:ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧದ ನಡುವೆಯೂ ೩೭೦ನೇ ಅಡಿ ತಾತ್ಕಾಲಿಕವಾಗಿದ್ದರೂ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಭಾರತದ ಅವಿಭಾಜ್ಯ ಅಂಗವಾದ ಶ್ರೀನಗರ ಮತ್ತು ಕಾಶ್ಮೀರಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದು ಮಾಡುವ ಮೂಲಕ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರ ಕನಸು ನನಸಾಗಿದೆ ಎಂದರು.

ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ.ಇಂತಹ ನಿರ್ಧಾರಗಳು ಭಾರತದ ಅಭಿವೃದ್ಧಿಗೆ ಹೆಚ್ಚು ಅವಶ್ಯಕ ಎಂದು ಹೇಳಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.