ETV Bharat / state

ತೀವ್ರ ಹೃದಯಾಘಾತದಿಂದ ಕಾಂಗ್ರೆಸ್​ ಮಾಜಿ ಶಾಸಕ ವೆಂಕಟಸ್ವಾಮಿ ನಿಧನ

ಕಾಂಗ್ರೆಸ್​ನ ಮಾಜಿ ಶಾಸಕ ಹಾಗೂ ಈ ಬಾರಿಯ ಟಿಕೆಟ್​ ಆಕಾಂಕ್ಷಿಯಾಗಿದ್ದ ಕೆ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಾಜಿ ಶಾಸಕ ವೆಂಕಟಸ್ವಾಮಿ
ಮಾಜಿ ಶಾಸಕ ವೆಂಕಟಸ್ವಾಮಿ
author img

By

Published : Apr 15, 2023, 6:43 AM IST

ದೇವನಹಳ್ಳಿ: ತೀವ್ರ ಹೃದಯಾಘಾತದಿಂದ ದೇವನಹಳ್ಳಿ ಕಾಂಗ್ರೆಸ್​ ಮಾಜಿ ಶಾಸಕ ಕೆ ವೆಂಕಟಸ್ವಾಮಿ (53) ನಿಧನ ಹೊಂದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವೆಂಕಟಸ್ವಾಮಿ ಅವರಿಗೆ ಕಳೆದ ಒಂದು ತಿಂಗಳಲ್ಲಿ ಮೂರು ಭಾರಿ ಎದೆ ನೋವು ಕಾಣಿಸಿಕೊಂಡಿತ್ತು. ಎರಡು ಭಾರಿ ಆಸ್ಪತ್ರೆಗೆ ಸೇರಿಸಿ ಕುಟುಂಬಸ್ಥರು ಚಿಕಿತ್ಸೆ ಕೊಡಿಸಿದ್ದರು. ಇದೀಗ ಮೂರನೇ ಭಾರಿಗೆ ಚಿಕಿತ್ಸೆ ಫಲಕಾರಿಯಾಗದೇ ವೆಂಕಟಸ್ವಾಮಿ ತಡರಾತ್ರಿ‌‌ ನಿಧನರಾಗಿದ್ದಾರೆ.

ಇನ್ನು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನ ಮಾಜಿ ಶಾಸಕ ವೆಂಕಟಸ್ವಾಮಿ ಅಗಲಿದ್ದಾರೆ. 2008 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಭೇರಿ ಭಾರಿಸಿದ್ದರು. ಈ‌ ಬಾರಿಯು ಕಾಂಗ್ರೇಸ್ ಟಿಕೆಟ್​ ಸಿಗುತ್ತೆ ಎಂದು ಕ್ಷೇತ್ರದಲ್ಲಿ ಭರ್ಜರಿ ಮತಬೇಟೆಯನ್ನ ವೆಂಕಟಸ್ಚಾಮಿ‌ ನಡೆಸಿದ್ದರು. ಆದರೆ ಟಿಕೆಟ್ ಕೈ ತಪ್ಪಿದ ಕಾರಣ ಮುನಿಸಿಕೊಂಡಿದ್ದರು.

ಇನ್ನೂ ಸಾದಹಳ್ಳಿಯ ಮನೆ ಬಳಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾದಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು‌‌ ಕುಟುಂಬ ಮೂಲಗಳು ತಿಳಿಸಿವೆ. ಹಲವು ಕೈ ನಾಯಕರು ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ನಾಳೆ ಟಿಕೆಟ್​ ಘೋಷಣೆ ಆಗದೇ ಹೋದ್ರೆ​, ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ: ಶೆಟ್ಟರ್ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.