ETV Bharat / state

ಕೊರೊನಾಗೆ ಹೆದರಿ ಜೀವ ಭಯದಿಂದ ಮೋದಿ ಮನೆಯಲ್ಲಿ ಇದ್ದಾರೆ: ಸಿದ್ದರಾಮಯ್ಯ

ಕೊರೊನಾ ಬಂದಾಗಿನಿಂದ ಜೀವ ಭಯದಿಂದ ಪ್ರಧಾನಿ ಮೋದಿ ಮನೆಯಲ್ಲಿ ಇದ್ದಾರೆ, ಹೊರಗೆ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

dsds
ಕೊರೊನಾಕ್ಕೆ ಹೆದರಿ ಜೀವ ಭಯದಿಂದ ಮೋದಿ ಮನೆಯಲ್ಲಿ ಇದ್ದಾರೆ:ಸಿದ್ದರಾಮಯ್ಯ
author img

By

Published : Jul 2, 2020, 4:16 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಇದೊಂದು ಚಳುವಳಿ ಹಾಗೂ ಆಂದೋಲನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕೊರೊನಾಕ್ಕೆ ಹೆದರಿ ಜೀವ ಭಯದಿಂದ ಮೋದಿ ಮನೆಯಲ್ಲಿ ಇದ್ದಾರೆ: ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಪಕ್ಷ ಕಾಂಗ್ರೆಸ್​. ಇಂದು ಪಕ್ಷಕ್ಕೆ ಒಂದಿಷ್ಟು ಹಿನ್ನೆಡೆಯಾಗಿರಬಹುದು. ಶೇಕಡಾವಾರು ಮತ ಗಳಿಕೆಯಲ್ಲಿ ನಾವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಜನರ ಬೆಂಬಲ ಹೆಚ್ಚಾಗುತ್ತಿದೆ ಎಂದರು.

ನರೇಂದ್ರ ಮೋದಿ ಅಂತಹ ಹಿಪೊಕ್ರೆಟಿಕ್ ಪಾಲಿಟಿಕ್ಸ್ ಮಾಡುವ ವ್ಯಕ್ತಿ ಇನ್ನೊಬ್ಬರಿಲ್ಲ. ಸುಳ್ಳು ಹೇಳುವುದು ಸುಳ್ಳು ಭರವಸೆ ನೀಡುವ ಯಾವ ಪ್ರಧಾನಿಯನ್ನು ದೇಶ ಇದುವರೆಗೂ ಕಂಡಿಲ್ಲ. ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿಯಲ್ಲಿ 1.7 ಲಕ್ಷ ಕೋಟಿ ಮಾತ್ರ ನಗದು ಹರಿವು ಒಳಗೊಂಡಿದೆ. ದೇಶದ ಜಿಡಿಪಿಯ ಶೇ.1 ರಷ್ಟು ಮೊತ್ತವನ್ನು ಕೂಡ ಪರಿಹಾರವಾಗಿ ನೀಡಿಲ್ಲ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ತಬ್ಲಿಘಿಗಳಿಂದ ಕೊರೊನಾ ಹಬ್ಬಿದೆ ಎನ್ನುತ್ತಾರೆ. ಆದರೆ ಈಗ ಯಾವ ತಬ್ಲಿಘಿಗಳಿಂದ ಹರಡುತ್ತಿದೆ? ಎಲ್ಲಾ ಕಡೆ ಕೋಮುವಾದವನ್ನು ಬಿತ್ತುವುದೇ ಇವರ ಕಾರ್ಯವಾಗಿದೆ ಎಂದು ಬಿಜೆಪಿ ವಿರುದ್ಧ ಅವರು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.