ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಆರ್ಥಿಕ ಮುಂಗಡ ಬಜೆಟ್ ಮಂಡನೆ ವೇಳೆ ಕುವೆಂಪು ಅವರ "ಹೋಗುತಿದೆ ಹಳೆ ಕಾಲ, ಬರುತಲಿದೆ ಹೊಸ ಕಾಲ" ಎಂಬ ಕವನದ ಸಾಲುಗಳನ್ನು ಉಲ್ಲೇಖ ಮಾಡಿದರು. ಜಾಗತೀಕವಾಗಿ ಕೋವಿಡ್ ನಂತರ ಭಾರತ ಮೋದಿ ಆಳ್ವಿಕೆಯಲ್ಲಿ ತೀವ್ರವಾಗಿ ಆರ್ಥಿಕ ಪ್ರಗತಿ ಸಾಧಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕವು ಸಾಗಿದೆ ಎಂದು ಹೇಳಿದರು.
ಬಜೆಟ್ ಮಂಡನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ: ಮುಂಗಡ ಪತ್ರ ಮಂಡನೆಗೆ ಬೊಮ್ಮಾಯಿ ಸಜ್ಜಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಯಲ್ಲಿ ಹೂ ಇಟ್ಟುಕೊಂಡರು. ಇದಕ್ಕೆ ಆರ್ ಅಶೋಕ್ ಆಕ್ಷೇಪ ವ್ಯಕ್ತ ಪಡಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ ರಾಜ್ಯದ ಜನತೆಯ ಕಿವಿಯ ಮೇಲೆ ಹೂ ಇಡಲಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಜನರೇ ಹೂ ಇಡುತ್ತಿದ್ದಾರೆ ಎಂದು ಈ ವೇಳೆ ಮುಖ್ಯಮಂತ್ರಿ ಟೀಕಿಸಿದರು. ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬಜೆಟ್ ಮಂಡನೆಯ ನಂತರ ಚರ್ಚೆ ಮಾಡುವಂತೆ ವಿನಂತಿಸಿ ಕೊಂಡರು.
ಇದನ್ನೂ ಓದಿ: Karnataka Budget 2023: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ: ಸಚಿವ ಸಂಪುಟ ಸಭೆ ಪ್ರಾರಂಭ