ETV Bharat / state

'ಪ್ರೋಗ್ರೆಸ್ಸಿವ್ ಬಜೆಟ್, 10/7 ಮಾರ್ಕ್ಸ್‌ ಕೊಡಬಹುದು': ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ - income tax slabs

ಕೇಂದ್ರದ ಬಜೆಟ್ ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.

fkcci-presiden
ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ
author img

By

Published : Feb 1, 2023, 4:09 PM IST

ಬೆಂಗಳೂರು: ಇಂದು ಮಂಡಿಸಿದ ಕೇಂದ್ರ ಬಜೆಟ್ ವೆಚ್ಚ ಆಧಾರಿತವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಎಫ್​ಕೆಸಿಸಿಐನ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ವೀಕ್ಷಣೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸೇವಿಂಗ್ಸ್​ಗೆ ಒತ್ತು ನೀಡಿಲ್ಲ. ವೆಚ್ಚಕ್ಕೆ ಆದ್ಯತೆ ನೀಡಲಾಗಿದೆ" ಎಂದರು.

"ಮೈಕ್ರೋ ಮತ್ತು ಸಣ್ಣ ಕೈಗಾರಿಕೆಗೆ ಒತ್ತು ನೀಡಲಾಗಿದೆ. ಸೇಲ್ ಸ್ಕೀಮ್ಸ್ ಬಗ್ಗೆ ಘೋಷಣೆ ಸರಿ. ಆದರೆ, ತಲಪುವುದು ಯಾವಾಗ ಅಂತ ಗೊತ್ತಾಗಬೇಕಿದೆ. ನಮ್ಮಲ್ಲಿ ಕೈಗಾರಿಕೋದ್ಯಮಿಗಳಿಗೆ ಕೋಲಾಟ್ರಲ್ ಲೋನ್​ಗೆ ಅವಕಾಶ ಇತ್ತು. ಅದು ನಮಗೆ ತಲುಪುತ್ತಿರಲಿಲ್ಲ. ಈಗ ಅಪ್ಲಿಕೇಷನ್ ನಾರ್ಮ್ ಅನ್ನು ಹೇಗೆ ಸರಳೀಕರಣ ಮಾಡಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ" ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ: "ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಸ್ವಾಗತ ಮಾಡುತ್ತೇವೆ. ರಾಜ್ಯದಲ್ಲಿ ಹೊಸದಾಗಿ ಸಿರಿಧಾನ್ಯಕ್ಕೆ ಉತ್ತೇಜನ ಕೊಡಲಾಗಿದೆ. ಕರ್ನಾಟಕದಲ್ಲಿ ರಾಗಿ, ಭತ್ತ, ಸಜ್ಜೆ, ಜೋಳ ಮತ್ತಿತರ ಧಾನ್ಯಗಳು ಬೆಳೆಯಾಗುತ್ತದೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಹಳೇ ಮೈಸೂರು ಭಾಗದಲ್ಲಿ ರಾಗಿ ಬೆಳೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆಯುತ್ತಾರೆ. ಪ್ರೊಸೆಸಿಂಗ್ ಫೀಗೆ ಮಹತ್ವ ನೀಡಬೇಕು. ಕೈಗಾರಿಕೆಗೆ ಸಬ್ಸಿಡಿ, ತೆರಿಗೆ ವಿನಾಯಿತಿ ಕೊಟ್ಟಾಗ ಸ್ಥಳೀಯವಾಗಿ ಅನುಕೂಲವಾಗುತ್ತದೆ, ಉದ್ಯೋಗವೂ ಸೃಷ್ಟಿಯಾಗುತ್ತದೆ" ಎಂದರು.

ಶಿಕ್ಷಣ ಕ್ಷೇತ್ರ: "ಶಿಕ್ಷಣದಲ್ಲಿ ಮುಖ್ಯವಾಗಿ ಕೌಶಲ್ಯಾಭಿವೃದ್ಧಿಗೆ ಮಹತ್ವ ಸಿಕ್ಕಿದೆ. ಕೈಗಾರಿಕಾ ತರಬೇತಿಯೂ ಆಗಬೇಕು. ಕರ್ನಾಟಕಕ್ಕೆ ಬಂದರು ಸಂಪರ್ಕ ಇಲ್ಲ. ರಫ್ತು ಮಾಡುವ ಸಂದರ್ಭದಲ್ಲಿ ಚೆನ್ನೈನ ಕೃಷ್ಣಪಟ್ಟಣಂನ್ನು ಅವಲಂಬಿಸಬೇಕು. ಹೆಚ್ಚು ರಫ್ತಿಗೆ ಉತ್ತೇಜನ ನೀಡಬೇಕಾದರೆ ನಮ್ಮಲ್ಲಿ ಬಂದರು ಸಂಪರ್ಕ ಬೇಕು. ಇದರ ಬಗ್ಗೆ ಬಜೆಟ್‌ ನಲ್ಲಿ ಗಮನಕೊಡಬೇಕಿತ್ತು. ಇನ್ನು ಮುಂಬೈ ಕಾರಿಡಾರ್‌ಗೆ ಮಹತ್ವ ಸಿಕ್ಕಿದೆ. ಪ್ರವಾಸೋದ್ಯಮಕ್ಕೆ ಕರಾವಳಿ ಪ್ರದೇಶ ಉತ್ತಮವಾಗಿದೆ. ಅದನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಪ್ರೋಗ್ರೆಸ್ಸಿವ್ ಬಜೆಟ್ ಅಂತ ಅನ್ನಿಸುತ್ತದೆ. ಈ ಬಾರಿಯ ಕೇಂದ್ರದ ಬಜೆಟ್ ಗೆ 10 ಕ್ಕೆ 7 ಮಾರ್ಕ್ಸ್‌ ಕೊಡಬಹುದು" ಎಂದರು. ಎಫ್‌ಕೆಸಿಸಿಐನ ಉಪಾಧ್ಯಕ್ಷ ಎಂ.ಜಿ.ಬಾಲಕೃಷ್ಣ, ರಮೇಶ್ ಚಂದ್ರ ಲಹೋಟಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕೇಂದ್ರ ಬಜೆಟ್​ 2023: 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.